ಮಂಡ್ಯದಲ್ಲಿ ಭುಗಿಲೆದ್ದ ಕಾವೇರಿ ಹೋರಾಟ: ಇಂದು ಮಳವಳ್ಳಿ ಪಟ್ಟಣ ಬಂದ್‌ಗೆ ಅನ್ನದಾನಿ ಕರೆ

ಕಾವೇರಿ ನೀರನ್ನು ತಮಿಳುನಾಡಿಗೆ ಬಿಡುತ್ತಿರುವುದನ್ನು ಖಂಡಿಸಿ, ಇಂದು ಮಂಡ್ಯದ ಮಳವಳ್ಳಿ ಪಟ್ಟಣ ಬಂದ್‌ಗೆ ಕರೆ ನೀಡಲಾಗಿದೆ.
 

Share this Video
  • FB
  • Linkdin
  • Whatsapp

ಮಂಡ್ಯ: ಜಿಲ್ಲೆಯಲ್ಲಿ ಕಾವೇರಿ ಹೋರಾಟದ ಕಿಚ್ಚು ಜೋರಾಗಿದ್ದು, ಮಳವಳ್ಳಿ ಪಟ್ಟಣ ಬಂದ್‌ಗೆ(Malavalli town bandh) ಕರೆ ನೀಡಲಾಗಿದೆ. ಇದಕ್ಕೆ ಉತ್ತಮ ರೆಸ್ಪಾನ್ಸ್ ಸಿಕ್ಕಿದ್ದು, ಮಾಜಿ ಶಾಸಕ ಅನ್ನದಾನಿ ನೇತೃತ್ವದಲ್ಲಿ ಬೈಕ್ ರ‍್ಯಾಲಿಯನ್ನು ನಡೆಸಲಾಯಿತು. ಮಳವಳ್ಳಿಯಲ್ಲಿ ಅಂಗಡಿ ಮುಂಗಟ್ಟುಗಳು ಸಂಪೂರ್ಣ ಕ್ಲೋಸ್ ಆಗಿವೆ. ತಮಿಳುನಾಡಿಗೆ ಕಾವೇರಿ ನೀರು(Cauvery water) ಬಿಡುತ್ತಿರುವುದನ್ನು ಖಂಡಿಸಿ ಬಂದ್‌ಗೆ ಕರೆ ನೀಡಲಾಗಿದೆ. ಮಳವಳ್ಳಿ ಬಂದ್‌ಗೆ ರೈತ, ಕನ್ನಡ, ಪ್ರಗತಿಪರ ಸಂಘನೆಗಳು ಕರೆ ನೀಡಿವೆ. ಆಸ್ಪತ್ರೆ, ಮೆಡಿಕಲ್, ಹಾಲಿನ ಬೂತ್‌ಗಳು ಮಾತ್ರ ಓಪನ್ ಇವೆ. ಬೆಳಗ್ಗೆ 9 ಗಂಟೆಗೆ ಪಟ್ಟಣಾದ್ಯಂತ ಬೃಹತ್ ಪ್ರತಿಭಟನೆ ನಡೆಸಲಾಯಿತು. ಮಾಜಿ ಶಾಸಕ ಡಾ.ಕೆ.ಅನ್ನದಾನಿ(Former MLA Dr. K. Annadani) ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಬೈಕ್‌ನಲ್ಲಿ ರ‍್ಯಾಲಿ ಮಾಡುವ ವೇಳೆ ಕಾವೇರಿ ಹೋರಾಟಕ್ಕೆ ಬೆಂಬಲ ನೀಡಲು ಮನವಿ ಮಾಡಲಾಯಿತು. ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆ ಮುನ್ನೆಚ್ಚರಿಕೆವಹಿಸಿದೆ.

ಇದನ್ನೂ ವೀಕ್ಷಿಸಿ:  ಹೀರೋಯಿನ್ ಮನೆಗೆ ಹೋಗಿ ವಾರ್ನಿಂಗ್ ಕೊಟ್ಟ ನಟ: ಸೂಪರ್ ಸ್ಟಾರ್ ಆ ನಟಿಗೆ ವಾರ್ನ್ ಮಾಡಿದ್ದೇಕೆ..?

Related Video