Asianet Suvarna News Asianet Suvarna News
breaking news image

ಪೆಟ್ರೋಲ್ ಟ್ಯಾಂಕ್ ಮೇಲೆ ಯುವತಿ‌, ಲಿಪ್‌ಲಾಕ್‌ ಮಾಡ್ತಾ ಲವರ್ಸ್‌ ಜಾಲಿ ರೈಡ್, ವಿಡಿಯೋ ವೈರಲ್!

ಬೈಕ್‌ನಲ್ಲಿ ಲವರ್ಸ್ ಹುಚ್ಚಾಟ ಮಾಡುವುದನ್ನು ಆಗಾಗ ಗಮನಿಸುತ್ತೇವೆ. ಇವರ ಹುಚ್ಚಾಟ ಅಕ್ಕಪಕ್ಕದವರಿಗೆ, ಸಾರ್ವಜನಿಕರಿಗೆ ಮುಜುಗರ ತರುತ್ತದೆ ಎಂಬ ಸಾಮಾನ್ಯ ಜ್ಞಾನವೂ ಇಲ್ಲದೇ ತಮ್ಮದೇ ಲೋಕದಲ್ಲಿ ಮುಳುಗಿರುತ್ತಾರೆ. ಇನ್ನು ಕೆಲವರು ಗಮನ ಸೆಳೆಯಲು ಬೇಕಂತಲೇ ಮಾಡುವವರಿದ್ದಾರೆ. 

ಚಾಮರಾಜನಗರ (ಏ.22): ಬೈಕ್‌ನಲ್ಲಿ  Bike) ಲವರ್ಸ್ (Lovers) ಹುಚ್ಚಾಟ ಮಾಡುವುದನ್ನು ಆಗಾಗ ಗಮನಿಸುತ್ತೇವೆ. ಇವರ ಹುಚ್ಚಾಟ ಅಕ್ಕಪಕ್ಕದವರಿಗೆ, ಸಾರ್ವಜನಿಕರಿಗೆ ಮುಜುಗರ ತರುತ್ತದೆ ಎಂಬ ಸಾಮಾನ್ಯ ಜ್ಞಾನವೂ ಇಲ್ಲದೇ ತಮ್ಮದೇ ಲೋಕದಲ್ಲಿ ಮುಳುಗಿರುತ್ತಾರೆ. ಇನ್ನು ಕೆಲವರು ಗಮನ ಸೆಳೆಯಲು ಬೇಕಂತಲೇ ಮಾಡುವವರಿದ್ದಾರೆ. 

ಚಾಮರಾಜನಗರ (Chamarajanagar) ಜಿಲ್ಲೆಯ ಗುಂಡ್ಲುಪೇಟೆಯಲ್ಲಿ (Gundlupete) ಪೆಟ್ರೋಲ್ ಟ್ಯಾಂಕ್ ಮೇಲೆ ಯುವತಿ‌ ಕುರಿಸಿಕೊಂಡು ಯುವಕ ಜಾಲಿ ರೈಡ್ (Jolly Ride) ಮಾಡಿದ್ದಾನೆ. ರಸ್ತೆಯಲ್ಲಿ ವಾಹನಗಳ ಸಂಚಾರ, ಜನರ ಓಡಾಟ ಹೆಚ್ಚಾಗಿದ್ದರೂ, ಪ್ರೇಮಿಗಳಿಬ್ಬರೂ ಮಾತ್ರ ಇದ್ಯಾವುದನ್ನೂ ಲೆಕ್ಕಿಸಿಲ್ಲ. ಇದು ಬೈಕ್‌ನ್ನೇ ಬೆಡ್‌ರೂಂ ಹಾಗೆ ಭಾವಿಸಿ, ರೊಮ್ಯಾನ್ಸ್ ಮಾಡಿದ್ದಾರೆ.  ಈ ಹುಚ್ಚಾಟದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

Video Top Stories