ದತ್ತ ಪೀಠದಲ್ಲಿ ಜೆಡಿಎಸ್ -ಬಿಜೆಪಿ ಒಗ್ಗಟ್ಟಿನ ಪ್ರದರ್ಶನ: ದತ್ತ ಮಾಲೆ ಧರಿಸಲು ಮುಂದಾದ್ರ ಕುಮಾರಸ್ವಾಮಿ..?

ಬಿಜೆಪಿ-ಜೆಡಿಎಸ್ ಮೈತ್ರಿಗೆ ಸಿಗಲಿದೆಯಾ ದತ್ತ ಮಾಲೆ ಪವರ್..?
ದತ್ತ ಮಾಲೆ ಧರಿಸಿ ಯಾವ ಸಂದೇಶ ರವಾನಿಸ್ತಾರೆ ದಳಪತಿಗಳು..?
ಸಂಪೂರ್ಣ ಹಿಂದುತ್ವದತ್ತ ಹೊರಳುತ್ತಾರಾ ಮಾಜಿ ಸಿಎಂ ಹೆಚ್ಡಿಕೆ?

First Published Nov 20, 2023, 11:53 AM IST | Last Updated Nov 20, 2023, 11:53 AM IST

ಬಿಜೆಪಿ ಜತೆ ಮೈತ್ರಿ ಬೆನ್ನಲ್ಲೇ ಹಿಂದುತ್ವದತ್ತ ಹೊರಳಿದ್ರಾ ಕುಮಾರಸ್ವಾಮಿ(HD Kumaraswamy) ಎಂಬ ಪ್ರಶ್ನೆ ಇದೀಗ ಕಾಡತೊಡಗಿದೆ. ಜಾತ್ಯಾತೀತ ಸಿದ್ಧಾಂತ ಬಿಟ್ಟು ಹಿಂದುತ್ವ ಅಸ್ತ್ರ ಪ್ರಯೋಗಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಹೋದಂತೆ ಕಾಣುತ್ತಿದೆ. ಮುಸ್ಲಿಂ ಮತಗಳು(Muslim Votes) ಬೇಡವೇ ಬೇಡ ಎಂಬ ನಿಲುವಿಗೆ ಕುಮಾರಸ್ವಾಮಿ ಬಂದಂತೆ ಕಾಣುತ್ತದೆ. ಪಕ್ಷದಿಂದ ಇಬ್ರಾಹಿಂ ಉಚ್ಛಾಟನೆ ಬೆನ್ನಲ್ಲೇ ಹಿಂದುತ್ವಕ್ಕೆ ಮಣೆ ಹೆಚ್‌ಡಿಕೆ ಮಣೆ ಹಾಕುತ್ತಿದ್ದಂತೆ ಕಾಣುತ್ತಿದೆ. ದತ್ತ ಮಾಲೆ ಧರಿಸಲು ಹೆಚ್.ಡಿ.ಕುಮಾರಸ್ವಾಮಿ ಮುಂದಾದಂತೆ ಕಾಣುತ್ತಿದೆ. ಡಿಸೆಂಬರ್ 6ಕ್ಕೆ ದತ್ತ ಮಾಲೆ ಧರಿಸಿ ದತ್ತಪೀಠಕ್ಕೆ ಹೆಚ್‌ಡಿಕೆ ಭೇಟಿ ನೀಡಲಿದ್ದಾರೆ ಎನ್ನಲಾಗ್ತಿದೆ. ಹೆಚ್‌ಡಿಕೆ ಮಾತ್ರವಲ್ಲ ತಮ್ಮ ಪಕ್ಷದ ಶಾಸಕರಿಗೂ ದತ್ತಮಾಲೆ(Datta Mala) ಧರಿಸಲು ಸೂಚನೆ ನೀಡಲಾಗಿದೆ. ಹೆಚ್‌ಡಿಕೆಗೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಸಾಥ್ ನೀಡಲಿದ್ದಾರೆ. ಜೆಡಿಎಸ್‌ನ ಎಲ್ಲಾ ಶಾಸಕರು ಒಗ್ಗಟ್ಟಿನ ಮಾಲೆ ಧರಿಸಲು ಸೂಚನೆ ನೀಡಲಾಗಿದ್ದು, 1 ದಿನದ ಮಟ್ಟಿಗೆ ಮಾಲೆ ಧರಿಸಿ ದತ್ತ ಪೀಠಕ್ಕೆ ಭೇಟಿ ನೀಡುವ ಬಗ್ಗೆ ಚರ್ಚೆ ನಡೆಸಲಾಗಿದೆಯಂತೆ. ಹಾಸನಾಂಬೆ ದರ್ಶನಕ್ಕೆ ಒಟ್ಟಾಗಿ ತೆರಳಿದ್ದ ಜೆಡಿಎಸ್ ಶಾಸಕರು, ಇದೀಗ ದತ್ತ ಪೀಠಕ್ಕೂ ಜೆಡಿಎಸ್ ಶಾಸರು ಒಟ್ಟಾಗಿ ತೆರಳುವ ಸಾಧ್ಯತೆ ಇದೆ ಎನ್ನಲಾಗ್ತಿದೆ.

ಇದನ್ನೂ ವೀಕ್ಷಿಸಿ:  ಸಚಿವ ಜಮೀರ್‌ಗೆ ಶುರುವಾಯ್ತು ಅಕ್ರಮ ಆಸ್ತಿ ಸಂಕಷ್ಟ: ಎಫ್ಐಆರ್ ರದ್ದಿಗೆ ಹೈಕೋರ್ಟ್ ನಿರಾಕರಣೆ

 

Video Top Stories