ಸಚಿವ ಜಮೀರ್‌ಗೆ ಶುರುವಾಯ್ತು ಅಕ್ರಮ ಆಸ್ತಿ ಸಂಕಷ್ಟ: ಎಫ್ಐಆರ್ ರದ್ದಿಗೆ ಹೈಕೋರ್ಟ್ ನಿರಾಕರಣೆ
ಕಾಂಗ್ರೆಸ್‌ನ ಮತ್ತೊಬ್ಬ ಸಚಿವನಿಗೆ ಅಕ್ರಮ ಆಸ್ತಿ ಸಂಕಷ್ಟ ಎದುರಾಗಿದೆ. ಜಮೀರ್ ಲೋಕಾಯುಕ್ತದಲ್ಲಿ ದಾಖಲಾಗಿದ್ದ FIR ರದ್ದು ಮಾಡುವಂತೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ರು. ಎರಡು ಕಡೆ ವಾದ ಆಲಿಸಿದ ಹೈಕೋರ್ಟ್ ಎಫ್ಐಆರ್ ರದ್ದು ಮಾಡಲು ನಿರಾಕರಿಸಿದ್ದು, ಜಮೀರ್ ಅಹಮ್ಮದ್‌ಗೆ ಸಂಕಷ್ಟ ಶುರುವಾಗಿದೆ.
ಕಾಂಗ್ರೆಸ್ ಸಚಿವ ಜಮೀರ್ ಅಹಮ್ಮದ್‌ಗೆ(Zameer Ahmed Khan) ಸಂಕಷ್ಟ ಶುರುವಾಗಿದೆ. ಅಕ್ರಮ ಆಸ್ತಿಗಳಿಕೆಯೇ ಕುತ್ತು ತಂದಿದೆ. 2022ರ ಫೆಬ್ರವರಿಯಲ್ಲಿ ACB ಅಧಿಕಾರಿಗಳು ಜಮೀರ್ ಮನೆ ದಾಳಿ(Raid) ನಡೆಸಿದ್ರು. ಈ ವೇಳೆ 80.44 ಕೋಟಿ ರೂ. ಮೌಲ್ಯದ ಆದಾಯ ಮೀರಿ ಅಕ್ರಮ ಆಸ್ತಿ ಸಂಪಾದಿಸಿದ್ದಾರೆ ಅಂತಾ ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿತ್ತು. ACB ಅಧಿಕಾರಿಗಳೇ ಜಮೀರ್ ವಿರುದ್ಧ FIR ದಾಖಲಿಸಿದ್ರು. ಎಫ್ಐಆರ್ ರದ್ದು ಕೋರಿ ಜಮೀರ್ ಹೈಕೋರ್ಟ್(Highcourt) ಮೆಟ್ಟಿಲೇರಿದ್ದರು. ಪ್ರಾಥಮಿಕ ತನಿಖೆಯನ್ನೇ ಮಾಡದೆ ಜಮೀರ್ ಮೇಲೆ FIR ದಾಖಲಿಸಿದ್ದಾಗಿ ವಾದಿಸಿದ ಜಮೀರ್ ಪರ ವಕೀಲರು, ಎಫ್ಐಆರ್ ರದ್ದು ಮಾಡುವಂತೆ ಮನವಿ ಮಾಡಿದ್ರು. ಇದಕ್ಕೆ ಲೋಕಾಯುಕ್ತ ಪರ ವಕೀಲರು ಪ್ರತಿವಾದ ಮಾಡಿದರು. ವಾದ-ಪ್ರತಿವಾದ ಆಲಿಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಪೀಠ ಜಮೀರ್ ಅರ್ಜಿಯನ್ನು ವಜಾಗೊಳಿಸಿದ್ದು, ಸಚಿವರಿಗೆ ಸಂಕಷ್ಟ ತಂದಿಟ್ಟಿದೆ.
IMA ವಂಚನೆ ಕೇಸ್ ತನಿಖೆ ಮಾಡಿದ್ದ ED ಅಧಿಕಾರಿಗಳು..ಮನ್ಸೂರ್‌ಖಾನ್‌ನಿಂದ ಜಮೀರ್ 9.38 ಕೋಟಿ ಹಣ ಪಡೆದಿದ್ದಾರೆ ಅನ್ನೋ ವಿಷಯ ಬಯಲಾಗಿತ್ತು. ಬಳಿಕ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಜನಪ್ರತಿನಿಧಿ ಕೋರ್ಟ್‌ನಲ್ಲಿ ಕೇಸ್ ದಾಖಲಿಸಿದ್ರು. ನಂತ್ರ ಜಮೀರ್ ಶಾಸಕರಾಗಿದ್ರಿಂದ ಕೇಸ್‌ನ್ನು ACBಗೆ ವರ್ಗಾವಣೆ ಮಾಡಲಾಗಿತ್ತು..ಫೆಬ್ರವರಿಯಲ್ಲಿ ಭ್ರಷ್ಟಚಾರ ನಿಗ್ರಹ ದಳದ ಅಧಿಕಾರಿಗಳು ಜಮೀರ್ ಮನೆ ಮೇಲೆ ದಾಳಿ ಮಾಡಿದ್ರು. ಈ ವೇಳೆ 80.44 ಕೋಟಿ ಆದಾಯಕ್ಕೂ ಮೀರಿ ಅಕ್ರಮ ಆಸ್ತಿ ಸಂಪಾದನೆ ಮಾಡಿರೋದು ಬೆಳಕಿಗೆ ಬಂದಿತ್ತು. ಬಳಿಕ 2022ರ ಮೇ ತಿಂಗಳಲ್ಲಿ ACB ಟೀಂ FIR ದಾಖಲಿಸಿದ್ರು.ನಂತ್ರ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ACB ರದ್ದುಮಾಡಿ ಲೋಕಾಯುಕ್ತ ನೇಮಕವಾಗಿತ್ತು..ಇಲ್ಲಿಗೆ ಕೇಸ್ ಕೂಡ ವರ್ಗಾವಣೆ ಆಗಿತ್ತು. ಹೈಕೋರ್ಟ್ ಅರ್ಜಿ ವಜಾಗೊಳಿಸಿದ್ರಿಂದ ಜಮೀರ್ ಲೋಕಾಯುಕ್ತ ತನಿಖೆ ಎದುರಿಸಬೇಕಾದ ಅನಿವಾರ್ಯತೆ ಎದುರಾಗಿದೆ.
ಇದನ್ನೂ ವೀಕ್ಷಿಸಿ: ಅಧಿಕಾರಿಗಳ ನಿರ್ಲಕ್ಷ್ಯ..ಅರ್ಧಕ್ಕೆ ನಿಂತ ಮನೆ ಕಾಮಗಾರಿ: ಗುಡಿಸಲುಗಳಲ್ಲೇ ದಿನದೂಡುತ್ತಿರುವ ಆದಿವಾಸಿ ಕುಟುಂಬ