ರಾಘವೇಂದ್ರ ಶ್ರೀಗಳ ಮಠದಲ್ಲಿ ಕೃಷ್ಣ ಜನ್ಮಾಷ್ಟಮಿ: ಮುದ್ದು ಮಕ್ಕಳ ಜೊತೆ ಶ್ರೀಗಳು ಭಾಗಿ

ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಯಿತು.
 

Share this Video
  • FB
  • Linkdin
  • Whatsapp

ರಾಯಚೂರು: ಮಂತ್ರಾಲಯದಲ್ಲಿ ಕೃಷ್ಣ ಜನ್ಮಾಷ್ಟಮಿಯ ಸಂಭ್ರಮ ಮನೆ ಮಾಡಿತ್ತು. ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಕೃಷ್ಣ ಜನ್ಮಾಷ್ಟಮಿ ಆಚರಣೆ ಮಾಡಲಾಯಿತು. ಮುದ್ದು ಮಕ್ಕಳ ಜೊತೆಗೆ ಮಂತ್ರಾಲಯ(Mantralaya) ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಕೃಷ್ಣ ‌ಜನ್ಮಾಷ್ಟಮಿ ಆಚರಣೆ ಮಾಡಿದರು. ಮುದ್ದು ಮಕ್ಕಳು ಕೃಷ್ಣನ(Krishna) ವೇಷಭೂಷಣ ತೊಟ್ಟು ಶ್ರೀಗಳ ಜೊತೆಗೆ ಕೃಷ್ಣ ಜನ್ಮಾಷ್ಟಮಿ (Krishna Janmashtami) ಆಚರಣೆ ಮಾಡಿದರು. ಆ ಬಳಿಕ ಶ್ರೀ ಮಠದ ಹೊರಭಾಗದಲ್ಲಿ ಮೊಸರು ಕುಡಿಕೆ ಒಡೆಯುವ ಸ್ಪರ್ಧೆ ಏರ್ಪಡಿಸಲಾಗಿತ್ತು. ಇದರಲ್ಲಿ ಶ್ರೀ ಮಠದ ಸಂಸ್ಕೃತ ಪಾಠ ಶಾಲೆಯ ಮಕ್ಕಳು ಸ್ಪರ್ಧೆಯಲ್ಲಿ ಭಾಗಿಯಾಗಿದ್ದು, ಮಕ್ಕಳೊಂದಿಗೆ ಶ್ರೀಗಳು ಮೊಸರು ಕುಡಿಕೆ ಒಡೆದು ಸಂಭ್ರಮಿಸಿದರು. 

ಇದನ್ನೂ ವೀಕ್ಷಿಸಿ:  ಮಾಲ್, ಸೂಪರ್ ಮಾರ್ಕೆಟ್‌ಗಳಲ್ಲೂ ಸಿಗುತ್ತಾ ಎಣ್ಣೆ..? ಸರ್ಕಾರದ ಚಿಂತನೆಗೆ ಬಾರ್ ಮಾಲೀಕರ ಅಸಮಾಧಾನ!

Related Video