ಇದು ಏಷ್ಯಾನೆಟ್ ಸುವರ್ಣ ನ್ಯೂಸ್ ಬಿಗ್ 3ಯ ಪವರ್: ಶಾಸಕರ ಮುಂದೆಯೇ ಕುಡಿಯುವ ನೀರಿನ ವ್ಯವಸ್ಥೆ..!
75 ವರ್ಷದ ಸಮಸ್ಯೆ ಆ ಜಿಲ್ಲೆಯಲ್ಲಿ ಧೂಳ್ ಎಬ್ಬಿಸಿತ್ತು
ಆ ಕಡೇ ಮುಖ ಮಾಡದವರು ಎಲ್ಲರೂ ಓಡೋಡಿ ಬಂದ್ರು!
ಪಿಡಿಓನಿಂದ ಹಿಡಿದು ಶಾಸಕರವರೆಗೂ ಎಲ್ಲರೂ ದೌಡು
ಪ್ರಧಾನಿ ನರೇಂದ್ರ ಮೋದಿಯವರು ಕಟ್ಟ ಕಡೆಯ ಜನರಿಗೂ ಸರ್ಕಾರಿ ಸೌಲಭ್ಯ ಕಲ್ಪಿಸಬೇಕು ಅನ್ನೋ ಕನಸು ಕಂಡಿದ್ದರು. ಬಡವರಿಗಾಗಿ ರಾಜ್ಯ ಸರ್ಕಾರಗಳು ನೂರಾರು ಯೋಜನೆ ಜಾರಿಗೆ ತಂದಿವೆ. ಆದ್ರೆ, ಸ್ವಾತಂತ್ರ್ಯ ಬಂದು 75 ವರ್ಷ ಆದ್ರೂ ಅವರನ್ನ ಇನ್ನೂ ಹಾಗೇ ಇಟ್ಟಿದ್ದರು ಈ ರಾಜಕಾರಣಿಗಳು, ಅಧಿಕಾರಿಗಳು. ಅದು ಬೆಂಗಳೂರಿನಿಂದ ಕೇವಲ 60 ಕಿಲೋ ಮೀಟರ್ ದೂರದಲ್ಲಿರುವ ಗ್ರಾಮ. ಆದ್ರೂ, ಸಹ ಇನ್ನೂ ಅಲ್ಲಿನ ಅನಾಗರಿಕ ಪದ್ದತಿ ದೂರವಾಗಿಲ್ಲ. ಆ ಗ್ರಾಮದ ಹೋಬಳಿಯಲ್ಲೇ ಹುಟ್ಟಿ ಬೆಳೆದಿರುವ ಈಗಲೂ ಶಾಸಕರು, ಸಂಸದರು ಆಗಿರುವವರು ಸಹ ಅವರ ಸಮಸ್ಯೆ ಬಗೆಹರಿಸಿಲ್ಲ. ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ನೂಟವೆ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಪೆಮ್ಮನದೊಡ್ಡಿ ಅನ್ನೋ ಗ್ರಾಮದಲ್ಲಿ. ಐದಾರು ಕುಟುಂಬದ ಸುಮಾರು 50 ಜನರು ಇಂದಿಗೂ ಯಾವುದೇ ಮೂಲಭೂತ ಸೌಲಭ್ಯ ಇಲ್ಲದೇ ಜೀವನ ನಡೆಸುತ್ತಿದ್ದರು. ಈ ಎಲ್ಲಾ ಸಮಸ್ಯೆ ಬಗ್ಗೆ ಯಾವಾಗ ಬಿಗ್ 3ನಲ್ಲಿ ವರದಿ ಮಾಡಲಾಯಿತೋ, ಆಗ ಎಲ್ಲಾ ಸಮಸ್ಯೆಗೆ ಅಧಿಕಾರಿಗಳು ಸ್ಪಂದಿಸುತ್ತಿದ್ದಾರೆ. ರಾಜ್ಯದಿಂದ ದೆಲ್ಲಿ ತನಕ ನಮ್ಮ ಸುದ್ದಿಯ ಇಂಪ್ಯಾಕ್ಟ್ ಆಗಿದೆ ಎಂದು ಹೇಳಬಹುದು.
ಇದನ್ನೂ ವೀಕ್ಷಿಸಿ: ಮೋದಿಗೆ ಲೋಕಮಾನ್ಯ ಪ್ರಶಸ್ತಿ ಪ್ರದಾನ: ಶರದ್ ಪವಾರ್ ಈ ಕಾರ್ಯಕ್ರಮಕ್ಕೆ ಹೋಗಿದ್ದೇ ತಪ್ಪಾ..?