ಮೋದಿಗೆ ಲೋಕಮಾನ್ಯ ಪ್ರಶಸ್ತಿ ಪ್ರದಾನ: ಶರದ್ ಪವಾರ್ ಈ ಕಾರ್ಯಕ್ರಮಕ್ಕೆ ಹೋಗಿದ್ದೇ ತಪ್ಪಾ..?

ಪ್ರಧಾನಿ ಮೋದಿಗೆ ‘ತಿಲಕ್ ರಾಷ್ಟ್ರ ಪ್ರಶಸ್ತಿ’ ಪ್ರದಾನ
ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಶರದ್ ಪವಾರ್ ಭಾಗಿ
ಈ ಪ್ರಶಸ್ತಿ ಪ್ರದಾನ ವಿರೋಧಿಸಿದ I.N.D.I.A.ನಾಯಕರು

Share this Video
  • FB
  • Linkdin
  • Whatsapp

ಮಹಾರಾಷ್ಟ್ರ ಸರ್ಕಾರ, ಪ್ರಧಾನಿ ನರೇಂದ್ರ ಮೋದಿಯವರಿಗೆ (Prime Minister Modi) ಲೋಕಮಾನ್ಯ ತಿಲಕ ರಾಷ್ಟ್ರೀಯ ಪ್ರಶಸ್ತಿ ಪ್ರದಾನ(Lokmanya Tilak National award) ಮಾಡಿತು. ಪ್ರಧಾನಿ ನರೇಂದ್ರ ಮೋದಿಯವರಿಗೆ ಈ ಪ್ರಶಸ್ತಿ ಸಂದಿರುವುದು ಖುಷಿ ವಿಚಾರವೇ. ಆದ್ರೆ, ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕೆಲ ನಾಯಕರ ವಿರುದ್ಧ ವಿರೋಧ ಕೇಳಿ ಬರ್ತಿದೆ. ಲೋಕಮಾನ್ಯ ಬಾಲ ಗಂಗಾಧರ ತಿಲಕ ಅವರ 103ನೇ ಪುಣ್ಯತಿಥಿ. ತಿಲಕರ ಈ ಪುಣ್ಯತಿಥಿ ನೆನಪಿಗಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ, ಲೋಕಮಾನ್ಯ ತಿಲಕ್ ರಾಷ್ಟ್ರ ಪ್ರಶಸ್ತಿ ಪ್ರದಾನ ಮಾಡಲಾಯಿತು. ಈ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಮಹಾರಾಷ್ಟ್ರದ ಪುಣೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.ಮಹಾರಾಷ್ಟ್ರದ ಪುಣೆ ಮೂಲದ, ತಿಲಕ್ ಸ್ಮಾರಕ ಮಂದಿರ ಟ್ರಸ್ಟ್ ವತಿಯಿಂದ ಈ ಪ್ರಶಸ್ತಿ ಪ್ರದಾನ ಮಾಡಲಾಗಿತ್ತು. ಹೀಗಾಗಿ, ಮಹಾರಾಷ್ಟ್ರದಲ್ಲಿ ನಡೆದ ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ, ಅಲ್ಲಿನ ಪ್ರಮುಖ ರಾಜಕೀಯ ನಾಯಕರು ಹಾಜರಿದ್ದರು. ಈ ಪ್ರಮುಖ ನಾಯಕರದಲ್ಲಿ NCP, ಅಂದ್ರೆ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿಯ ಅಧ್ಯಕ್ಷರಾದ ಶರದ್ ಪವಾರ್(Sharad Pawar) ಅವ್ರು ಸಹ ಹಾಜರಿದ್ದರು. ಶರದ್ ಪವಾರ್ ಅವರ ಹಾಜರಾತಿಗೆ ಮಹಾಘಟಬಂಧನ್ ವಿರೋಧಿಸುತ್ತಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನೂ ವೀಕ್ಷಿಸಿ:  ಗೃಹಲಕ್ಷ್ಮಿ ಯೋಜನೆ ಮಧ್ಯಮ ವರ್ಗದವರಿಗೆ ಸಿಗುವಂತೆ ಮಾಡಲು ಚಿಂತನೆ : ಲಕ್ಷ್ಮಿ ಹೆಬ್ಬಾಳ್ಕರ್‌

Related Video