Asianet Suvarna News Asianet Suvarna News

ಕಾರವಾರ: ದೈವ ನರ್ತನದ ವೇಳೆಯೇ ಸುಂದರ ಮಹಿಳೆಯೊಂದಿಗೆ ಮದುವೆ ಫಿಕ್ಸ್ ಮಾಡಿಕೊಂಡ ಪಾತ್ರಿ

ದೇವಿ ದರ್ಶನವನ್ನು ನೋಡಲು ಬಂದಿದ್ದ ವಿವಾಹಿತ ಮಹಿಳೆಯನ್ನು ದೈವ ಆಹ್ವಾಹನೆಯಾಗಿದ್ದ ಪಾತ್ರಿಯಿಂದ ಈ ಬಾಲಕಿಯನ್ನ ಈ ಬಾಲಕ (ತನ್ನನ್ನು ತೋರಿಸಿಕೊಂಡು) ಮದುವೆಯಾಗುವುದಾಗಿ ಘೋಷಣೆ ಮಾಡಿರುವ ಘಟನೆ ನಡೆದಿದೆ. 

ಉತ್ತರ ಕನ್ನಡ (ಫೆ.04): ಬೆಳಗಾವಿಯಿಂದ ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲೂಕಿನ ಅಂಬರಕೊಡ್ಲೆ ಗ್ರಾಮಕ್ಕೆ ದೇವಿ ದರ್ಶನವನ್ನು ನೋಡಲು ಬಂದಿದ್ದ ವಿವಾಹಿತ ಮಹಿಳೆಯನ್ನು ದೈವ ಆಹ್ವಾಹನೆಯಾಗಿದ್ದ ಪಾತ್ರಿಯಿಂದ ಈ ಬಾಲಕಿಯನ್ನ ಈ ಬಾಲಕ (ತನ್ನನ್ನು ತೋರಿಸಿಕೊಂಡು) ಮದುವೆಯಾಗುವುದಾಗಿ ಘೋಷಣೆ ಮಾಡಿರುವ ಘಟನೆ ನಡೆದಿದೆ. 

ಹೌದು, ಅಂಕೋಲಾದಲ್ಲಿ ವಿಚಿತ್ರ ರೀತಿಯಲ್ಲಿ ಮದುವೆ ಫಿಕ್ಸ್ ಮಾಡಿಕೊಂಡಿದ್ದಾರೆ. ಈಗಾಗಲೇ ಮದುವೆಯಾಗಿರುವ ಮಹಿಳೆಯನ್ನೇ ವರಿಸುವುದಾಗಿ ವಾಗ್ದಾನವಿತ್ತಿದ್ದಾರೆ. ಇವತ್ತಿನಿಂದ ಈ ಬಾಲಕಿ ನನ್ನ ಅರ್ಧಾಂಗಿಯಾಗಿ, ಅರ್ಧನಾರೀಶ್ವರಿಯಾಗಿ ನನ್ನ ಹೃದಯದಲ್ಲಿ ನೆಲೆಸುತ್ತಾಳೆ. ಇಂದು ಅಥವಾ ನಾಳೆ ಧರ್ಮಸ್ಥಳ, ಮಂತ್ರಾಲಯ, ಇದೇ ಸ್ಥಳದಲ್ಲಿ ಈ ಬಾಲಕಿ ಕೊರಳಿಗೆ ಈ ಬಾಲಕನ ಕೈಯಿಂದ ತಾಳಿ ಬೀಳುತ್ತೆ ಇದು ಸತ್ಯ ಸತ್ಯ ಎಂದು ದೈವ ನರ್ತಕ ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

Sunil Shetty ದಂಪತಿಯ ಅಂತರ್​ಧರ್ಮೀಯ ರೋಚಕ ಪ್ರೇಮ್​ ಕಹಾನಿ!

ದೇವತಾ ಕಾರ್ಯದಲ್ಲಿ ಪಂಚೆಯನ್ನುಟ್ಟು ಮೈ ಮೇಲೆ ಅರಶಿಣ ಚೆಲ್ಲಿಕೊಳ್ಳುತ್ತಾ, ಕಾಂತಾರ ಸ್ಟೈಲ್‌ನಲ್ಲಿ ಓ... ಎಂದು ಕೂಗುತ್ತಿದ್ದ ನರ್ತಕ.. ಅಡಿಕೆ ಹಿಂಗಾರದಿಂದ ಬಡಿದುಕೊಳ್ಳುತ್ತಾ ಚಿತ್ರ ವಿಚಿತ್ರವಾಗಿ ನರ್ತನ ಮಾಡಿದ ಪಾತ್ರಿ.. ಬ್ಯಾಂಡ್, ಢಮರು, ಡಕ್ಕೆ, ತಾಳದ ಲಯಕ್ಕೆ ನರ್ತನ ಮಾಡುತ್ತಿದ್ದಾರೆ. ವಿವಾಹಿತ ಮಹಿಳೆಯನ್ನ ವರಿಸುವ ಸಲುವಾಗಿ ದೇವರನ್ನು ಬಳಸಿಕೊಂಡಿದ್ದಾರೆ. ಪಾತ್ರಿಯ ಕೃತ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರಿಂದ ಟೀಕೆ ವ್ಯಕ್ತವಾಗಿದೆ. ಆದರೆ, ಪಾತ್ರಿಗೂ ಮದುವೆಯಾಗಿದ್ದು, ಹೆಂಡತಿ ಬಿಟ್ಟು ಹೋಗಿದ್ದಾಳೆ. ವಿವಾಹಿತ ಮಹಿಳೆಯೂ ಪತಿಯನ್ನು ಬಿಟ್ಟಿರುವ ಮಾಹಿತಿ. ದೇವರ ಹೆಸರಿನಲ್ಲಿ ಮದುವೆಯಾಗಲು ವಿಚಿತ್ರವಾಗಿ ಪಾತ್ರಿ ನಡಿಸಿದ್ದಾರೆ ಎಂದು ಹೇಳುತ್ತಿದ್ದಾರೆ. ಆದರೆ, ಪಾತ್ರಿಯ ಮೇಲೆ ದುರ್ಗಾದೇವಿ ಆಹ್ವಾನವಾಗುತ್ತದೆ ಎಂದು ಭಕ್ತರು ನಂಬಿದ್ದು, ಇದು ದೇವಿಯ ಮಹಿಮೆ ಎಂದು ಹಲವರು ಹೇಳುತ್ತಿದ್ದಾರೆ. 

Video Top Stories