ರಾಮದುರ್ಗದಲ್ಲಿ 'ಕೈ'ನಾಯಕರ ನಡುವೆ ಟಿಕೆಟ್‌ ಫೈಟ್‌

ರಾಮದುರ್ಗದಲ್ಲಿ ಕಾಂಗ್ರೆಸ್‌ ಟಿಕೆಟ್‌ಗಾಗಿ ಅಭ್ಯರ್ಥಿಗಳು ಕಸರತ್ತು ನಡೆಸುತ್ತಿದ್ದು , ಚಿಕ್ಕರೇವಣ್ಣಗೆ ಟಿಕೆಟ್‌ ಕೊಡುವಂತೆ  ಕಾರ್ಯಕರ್ತರು ಒತ್ತಾಯಿಸುತ್ತಿದ್ದಾರೆ.

Share this Video
  • FB
  • Linkdin
  • Whatsapp

ರಾಜ್ಯ ಕಾಂಗ್ರೆಸ್‌ಗೆ ಟಿಕೆಟ್‌ ಹಂಚಿಕೆ ಕಗ್ಗಂಟಾಗಿದ್ದು, ಚುನಾವಣೆ ಸಮೀಪಿಸುತ್ತಿದ್ದರೂ ಆಕಾಂಕ್ಷಿಗಳ ತೀವ್ರ ಪೈಪೋಟಿ ನಡೆಯುತ್ತಿದೆ. ರಾಮದುರ್ಗದಲ್ಲಿ ಕಾಂಗ್ರೆಸ್‌ ಟಿಕೆಟ್‌ಗಾಗಿ ಅಭ್ಯರ್ಥಿಗಳು ಕಸರತ್ತು ನಡೆಸುತ್ತಿದ್ದು , ಚಿಕ್ಕರೇವಣ್ಣಗೆ ಟಿಕೆಟ್‌ ಕೊಡುವಂತೆ ಕಾರ್ಯಕರ್ತರು ಒತ್ತಾಯಿಸುತ್ತಿದ್ದಾರೆ. ಸಿದ್ದರಾಮಯ್ಯ ಪ್ರಜಾಧ್ವನಿ ಸಮಾವೇಶ ಮುಗಿಸಿ ಹೋಟೆಲ್‌ಗೆ ಆಗಮಿಸುತ್ತಿದ್ದಾಗ ಚಿಕ್ಕರೇವಣ್ಣ ಬೆಂಬಲಿಗರು ಬೆಳಗಾವಿಯಲ್ಲಿ ಮುತ್ತಿಗೆ ಹಾಕಿದ್ದಾರೆ. ನೂರಕ್ಕೂ ಹೆಚ್ಚು ಕ್ರೂಸರ್‌ಗಳಲ್ಲಿ ಬಂದಿರುವ ಚಿಕ್ಕರೇವಣ್ಣ ಬೆಂಬಲಿಗರು ಅಶೋಕ್‌ ಪಟ್ಟಣ್‌ಗೆ ರಾಮದುರ್ಗದಲ್ಲಿ ಟಿಕೆಟ್‌ ನೀಡದಂತೆ ಒತ್ತಾಯ ಮಾಡಿ ಉಳಿದ ಐವರು ಆಕಾಂಕ್ಷಿಗಳ ಪೈಕಿ ಒಬ್ಬರಿಗೆ ಟಿಕೆಟ್‌ ನೀಡುವಂತೆ ಆಗ್ರಹ ಮಾಡಿದ್ದಾರೆ, ಚಿಕ್ಕರೇವಣ್ಣ ರಾಜೇಂದ್ರ ಪಾಟೀಲ್‌ ಕೃಷ್ಣ ಮುಂಬರೆಡ್ಡಿ ಸಿ ಬಿ ಪಾಟೀಲ್‌ ಅರ್ಜುನ್‌ ಗುಡ್ಡದ ಈ ಐವರಲ್ಲಿ ಒಬ್ಬರಿಗೆ ಟಿಕೆಟ್‌ ನೀಡುವಂತೆ ಒತ್ತಾಯಿಸಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video