Asianet Suvarna News Asianet Suvarna News

ಕೆಮಿಕಲ್ ಎಂಜಿನಿಯರಿಂಗ್ ಬಿಟ್ಟು ಯೋಧರಾಗಿದ್ದು ಯಾಕೆ..? 23 ಕಿಮೀ ಅಂತಿಮಯಾತ್ರೆ..ಎಲ್ಲೆಲ್ಲೂ ಜನಸಾಗರ..!

ಪಂಚಭೂತಗಳಲ್ಲಿ ಲೀನರಾದ ವೀರ ಕನ್ನಡಿಗ ಪ್ರಾಂಜಲ್ 
ವೀರ ಯೋಧನಿಗಾಗಿ ಕಂಬನಿ ಮಿಡಿದ ಕರುನಾಡು..!
ಸರ್ಕಾರಿ ಗೌರವದೊಂದಿಗೆ ಪ್ರಾಂಜಲ್ ಅಂತ್ಯಕ್ರಿಯೆ..!

ಜಮ್ಮು-ಕಾಶ್ಮೀರದ (Jammu and Kashmir) ರಜೌರಿಯಲ್ಲಿ ಉಗ್ರರೊಂದಿಗೆ ನಡೆದ ಕಾದಾಟದಲ್ಲಿ ಹುತಾತ್ಮರಾದ ಕನ್ನಡಿಗ ಕ್ಯಾಪ್ಟನ್‌ ಪ್ರಾಂಜಲ್‌(Captain Pranjal) ಅವ್ರು ಪಂಚಭೂತಗಳಲ್ಲಿ ಲೀನರಾಗಿದ್ದಾರೆ. ಕ್ಯಾಪ್ಟನ್‌ ಪ್ರಾಂಜಲ್‌ ಅವ್ರ ಅಂತ್ಯಕ್ರಿಯೆ(Funeral) ಸೋಮಸುಂದರ ಪಾಳ್ಯ ಚಿತಾಗಾರದಲ್ಲಿ ನಡೆದಿದ್ದು, ಈ ಮೂಲಕ ಭಾರತಾಂಬೆಯ ಹೆಮ್ಮೆಯ ಪುತ್ರನಿಗೆ ಭಾವುಕ ವಿಧಾಯ ನೀಡಲಾಯಿತು. ಸಿಇಟಿ ಸೀಟ್ ಸಿಕ್ಕಿ ಕೆಮಿಕಲ್ ಎಂಜಿನಿಯರಿಂಗ್ ಕೋರ್ಸ್ ಮಾಡ್ತಿದ್ದ ಪ್ರಾಂಜಲ್, ಅದನ್ನು ಅರ್ಧಕ್ಕೆ ಬಿಟ್ಟು ಸೈನ್ಯಕ್ಕೆ ಸೇರಿದರು. ಕ್ಯಾಪ್ಟನ್ ಪ್ರಾಂಜಲ್. ದೇಶಸೇವೆಗೆ ಬದುಕು ಮುಡಿಪಿಟ್ಟಿದ್ದ ಕರ್ನಾಟಕದ(Karnataka) ವೀರಯೋಧ. ದೇಶದ ಭದ್ರೆತೆಗೆ ಅಪಾಯ ತರಲು ಸಂಚು ಹೂಡಿದ್ದ ಉಗ್ರರ ಜೊತೆಗೆ ಕಾಳಗ ನಡೆಸುತ್ತಲೇ ಜೀವ ಬಲಿದಾನ ನೀಡಿದ ಪರಾಕ್ರಮಿ. ಉಸಿರಿನ ಕೊನೆ ಕ್ಷಣದವರೆಗೂ ದೇಶಸೇವೆಗೈದ ಪ್ರಾಂಜಲ್ ಅಂತ್ಯ ಸಂಸ್ಕಾರವನ್ನು ಸೋಮಸುಂದರಪಾಳ್ಯ ಚಿತಾಗಾರದಲ್ಲಿ ನೆರವೇರಿಸಲಾಗಿದೆ. ನಂದನವನ ಬಡಾವಣೆಯಿಂದ 22 ಕಿಲೋಮೀಟರ್ ಅಂತಿಮಯಾತ್ರೆ ನಡೆಸಿ ಸೋಮಸುಂದರಪಾಳ್ಯ ಚಿತಾಗಾರದಲ್ಲಿ ಬ್ರಾಹ್ಮಣ ಸಂಪ್ರದಾಯದಂತೆ ಪ್ರಾಂಜಲ್ ಅಂತ್ರ ಸಂಸ್ಕಾರವನ್ನ ನೆರೆವೇರಿಸಲಾಯ್ತು. ರಕ್ತಪಿಪಾಸುಗಳ ಹುಟ್ಟಡಗಿಸಲು ರಜೌರಿಯಲ್ಲಿ ಕಾರ್ಯಾಚರಣೆಗಿಳಿದ ಭಾರತದ ಐವರು ಯೋಧರು ಉಗ್ರರ ಗುಂಡಿಗೆ ಉಸಿರು ಚೆಲ್ಲಿದ್ದಾರೆ. ದೇಶದ ರಕ್ಷಣೆಗಾಗಿ ಪ್ರಾಣವನ್ನೇ ಬಲಿದಾನ ಮಾಡಿದ ವೀರ ಯೋಧರಿಗೆ ಶನಿವಾರವೇ ಜಮ್ಮುವಿನಲ್ಲಿ ಗೌರವ ನಮನ ಸಲ್ಲಿಸಲಾಯ್ತು. ರಜೌರಿಯಲ್ಲಿ ಉಗ್ರರ ಜೊತೆಗಿನ ಕಾಳಗದಲ್ಲಿ ಕರ್ನಾಟಕದ ವೀರ ಯೋಧ ಕೂಡ ಹುತಾತ್ಮರಾಗಿದ್ದಾರೆ. ಕ್ಯಾಪ್ಟನ್ ಪ್ರಾಂಜಲ್ ಪಾರ್ಥಿವ ಶನಿವಾರ ತವರಿಗೆ ಆಗಮಿಸಿದೆ. ಜಮ್ಮುವಿನಿಂದ ಬೆಂಗಳೂರಿನ HAL ವಿಮಾನ ನಿಲ್ದಾಣಕ್ಕೆ ಪ್ರಾಂಜಲ್ ಪಾರ್ಥಿವ ತರಲಾಯ್ತು. ಹೆಚ್ಎಎಲ್ ಏರ್ಪೋರ್ಟ್‌ಗೆ ಬಂದ ಪ್ರಾಂಜಲ್ ಪಾರ್ಥಿವ ಕಂಡು ಪೋಷಕರು ಹಾಗೂ ಕುಟುಂಬಸ್ಥರು ಕಣ್ಣೀರಿಟ್ಟರು. ಅಗಲಿದ ಮಗನನ್ನ ನೆನೆದು ಹೆತ್ತೊಡಲು ಶೋಕ ಸಾಗರದಲ್ಲಿ ಮುಳುಗಿತು.

ಇದನ್ನೂ ವೀಕ್ಷಿಸಿ:  ವೀರ ಯೋಧ ಕ್ಯಾಪ್ಟನ್‌ ಪ್ರಾಂಜಲ್‌ಗಾಗಿ ಕಂಬನಿ ಮಿಡಿದ ಕರುನಾಡು!

Video Top Stories