ರಾಜ್ಯ ರಾಜಧಾನಿಯಲ್ಲೂ ಕರಾವಳಿಯ ಕ್ರೀಡೆಯ ಕಂಪು..! ಪುನೀತ್-ರಾಜ್ ಹೆಸರಲ್ಲಿ ನಡೆಯುತ್ತೆ ಅದ್ಧೂರಿ ಕಂಬಳ..!

ಬೆಂಗಳೂರು ಕಂಬಳಕ್ಕೆ ಭರದ ಸಿದ್ಧತೆ ನಡೆಯುತ್ತಿವೆ. ಕಂಬಳದ ಜೋಡುಕೆರೆಗಳಿಗೆ ಹೆಸರು ಕೂಡ ಫೈನಲ್ ಆಗಿದೆ. ಕರುನಾಡ ರಾಜಕುಮಾರ ಪುನೀತ್‌ಗೆ ಗೌರವ ಸಲ್ಲಿಸೋ ನಿಟ್ಟಿನಲ್ಲಿ ಬೆಂಗಳೂರು ಕಂಬಳಕ್ಕೆ ಅಪ್ಪು ಹೆಸರನ್ನೇ ಇಟ್ಟಿದ್ದಾರೆ. 
 

Share this Video
  • FB
  • Linkdin
  • Whatsapp

ಕರಾವಳಿಯ ಮೈನವರಿಳಿಸೋ ಸ್ಪರ್ಧೆ ಅಂದ್ರೆ ಅದು ಕಂಬಳ(Kambala).ಇದೇ ಮೊದಲ ಬಾರಿಗೆ ರಾಜ್ಯ ರಾಜಧಾನಿಯಲ್ಲಿ ಕಂಬಳ ಆಯೋಜನೆಗೊಳ್ತಿದೆ. ಈಗಾಗಲೇ ಕೆರೆ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ವಿಶೇಷವೆಂದರೆ ಬೆಂಗಳೂರು(Bengaluru) ಕಂಬಳದ ಜೋಡುಕೆರೆಗಳಿಗೆ ಕರುನಾಡ ಮನೆಮಗ ಪುನೀತ್(Puneeth Rajkumar) ಮತ್ತು ರಾಜಕುಮಾರ್(Rajkumar) ಹೆಸರನ್ನ ಕಂಬಳಕ್ಕೆ ಇಡಲು ನಿರ್ಧರಿಸಿದ್ದಾರೆ. ಕಂಬಳ ಆಯೋಜಕರ ನಿರ್ಧಾರ ರಾಜ್‌ಕುಮಾರ್ ಮತ್ತು ಅಪ್ಪು ಅಭಿಮಾನಿಗಳ ಹರ್ಷಕ್ಕೂ ಕಾರಣವಾಗಿದೆ. ಬೆಂಗಳೂರು ಕಂಬಳ ನಮ್ಮ ಕಂಬಳ ಎಂಬ ಟ್ಯಾಗ್‌ಲೈನ್‌ನೊಂದಿಗೆ ನಡೆಯುತ್ತಿರುವ ಜೋಡುಕೆರೆ ಕಂಬಳಕ್ಕೆ ಇಷ್ಟು ದಿನ ಹೆಸರು ಫಿಕ್ಸ್ ಆಗಿರಲಿಲ್ಲ. ಕರಾವಳಿಯಲ್ಲಿ ನಡೆಯುವ ಕಂಬಳ ಕೆರೆಗಳಿಗೆ ಸೂರ್ಯ-ಚಂದ್ರ, ಕೋಟಿ-ಚೆನ್ನಯ, ರಾಮ-ಲಕ್ಷ್ಮಣ, ಕಾಂತಬಾರೆ-ಬೂದಬಾರೆ ಎಂಬಿತ್ಯಾದಿ ಹೆಸರುಗಳಿವೆ. ಆದ್ರೆ, ಬೆಂಗಳೂರಲ್ಲಿ ನಡೆಯುತ್ತಿರೋ ಮೊದಲ ಕಂಬಳಕ್ಕೆ ಯಾವ ಹೆಸರಿಡಬ್ಕೇಕು ಎಂಬ ಕುತೂಹಲ ಎಲ್ಲರಲ್ಲೂ ಇತ್ತು. ಸದ್ಯ ಬೆಂಗಳೂರು ಕಂಬಳಕ್ಕೆ ಕನ್ನಡದ ಕಣ್ಮಣಿ ರಾಜ್‌ಕುಮಾರ್ ಮತ್ತು ಪುನೀತ್ ಹೆಸರುಗಳನ್ನು ಸೇರಿಸಿ ಪುನೀತ್-ರಾಜ್ ಕಂಬಳ ಎಂದು ನಾಮಕರಣ ಮಾಡಲಾಗಿದೆ.ಈಗಾಗಲೇ ಬೆಂಗಳೂರು ಕಂಬಳದ ಸಿದ್ಧತೆ ಪೂರ್ಣಗೊಂಡಿದ್ದು ಕಂಬಳ ಕೆರೆಗಾಗಿ ಮತ್ತು ಇತರ ಬಳಕೆಗಾಗಿ ಪ್ಯಾಲೇಸ್ ಗ್ರೌಂಡ್‌ನಲ್ಲಿ 2 ಬೋರ್‌ವೆಲ್ ಕೊರೆಸಲಾಗಿದೆ. 2 ಬೋರ್‌ವೆಲ್‌ನಲ್ಲೂ ಯಥೇಚ್ಛವಾಗಿ ನೀರು ದೊರಕಿದ್ದು ಕಂಬಳಕ್ಕೆ ಪೂರಕ ವಾತಾವರಣ ನಿರ್ಮಾಣವಾಗಿದೆ. ಒಂದು ಕಾಲದಲ್ಲಿ ಸರ್ಕಸ್ ನಡೆಯುತ್ತಿದ್ದ ಈ ಗ್ರೌಂಡ್ ಕ್ರಮೇಣ ಕಸದ ರಾಶಿ, ಮುಳ್ಳುಗಂಟೆಗಳಿಂದ ಹಾಳಾಗಿತ್ತು. ಈಗ ಕಂಬಳಕ್ಕಾಗಿ ಗ್ರೌಂಡ್ ಸ್ವಚ್ಚಗೊಳಿಸಲಾಗಿದೆ. 

ಇದನ್ನೂ ವೀಕ್ಷಿಸಿ: ಪ್ರೀತಿಸಿ ನಿಖಾ ಆದವರಿಗೆ ಕುಟುಂಬಸ್ಥರಿಂದ ಕೊಲೆ ಬೆದರಿಕೆ: ರಕ್ಷಣೆಗಾಗಿ ಎಸ್ಪಿ ಕಚೇರಿ ಮೆಟ್ಟಿಲು ಹತ್ತಿದ ಲವ್‌ ಬರ್ಡ್ಸ್!

Related Video