KS Eshwarappa: ಡಿ.ಕೆ. ಸುರೇಶ್‌ ರಸ್ತೆಯಲ್ಲಿ ಹೋಗುವ ದಾಸಪ್ಪನಂತೆ ಮಾತನಾಡಿದ್ರೆ ಹೇಗೆ? ಕೆ.ಎಸ್‌.ಈಶ್ವರಪ್ಪ

ಒಂದು ತಾಯಿ ಮಗನಿಗೆ ಅನ್ನ ಹಾಕುವಾಗ ಸ್ವಲ್ಪ ಕಡಿಮೆ ಬಿದ್ದರೆ ತಾಯಿ ಬೇಡ ಎಂದರೆ ಹೇಗೆ? ಎಂದು ಡಿಕೆ ಸುರೇಶ್‌ ಪ್ರತ್ಯೇಕ ರಾಷ್ಟ್ರದ ಹೇಳಿಕೆಗೆ ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ತಿರುಗೇಟು ನೀಡಿದ್ದಾರೆ.

First Published Feb 2, 2024, 12:24 PM IST | Last Updated Feb 2, 2024, 12:25 PM IST

ಶಿವಮೊಗ್ಗ: ಪ್ರತ್ಯೇಕ ರಾಷ್ಟ್ರದ ಬಗ್ಗೆ ಸಂಸದ ಡಿ.ಕೆ.  ಸುರೇಶ್ ನೀಡಿರುವ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ(KS Eshwarappa) ತಿರುಗೇಟು ನೀಡಿದ್ದಾರೆ. ಸಂಸದ ಡಿ.ಕೆ. ಸುರೇಶ್‌ (DK Suresh) ರಸ್ತೆಯಲ್ಲಿ ಹೋಗುವ ದಾಸಪ್ಪನಂತೆ ಮಾತನಾಡಿದರೆ ಹೇಗೆ? ಸಂಸದರು  ಲೋಕಸಭಾ ಅಧಿವೇಶನ ನಡೆಯುತ್ತದೆ ಅಲ್ಲಿ ಪ್ರಶ್ನೆ ಮಾಡಿ. ನಾನೊಬ್ಬ ಸಂಸದನಿದ್ದೇನೆ ಬದುಕಿದ್ದೇನೆ ಎಂದು ತೋರಿಸಲು ಈ ರೀತಿ ಮಾತನಾಡಿದ್ದಾರೆ ಎಂದು ಹೇಳಿದರು. ಅದಕ್ಕಾಗಿ ಅವರನ್ನು ರಾಷ್ಟ್ರ ದ್ರೋಹಿ ಎಂದು ಕರೆದಿರುವುದು. ಒಂದು ತಾಯಿ ಮಗನಿಗೆ ಅನ್ನ ಹಾಕುವಾಗ ಸ್ವಲ್ಪ ಕಡಿಮೆ ಬಿದ್ದರೆ ತಾಯಿ ಬೇಡ ಎಂದರೆ ಹೇಗೆ? ಭಾರತ್  ಜೋಡೋ ಎಂದವರು ಭಾರತ್ ತೋಡೋ ಮಾಡುತ್ತಿದ್ದಾರೆ. ದೇಶವನ್ನು ಒಡೆದಿದ್ದು ಕಾಂಗ್ರೆಸ್ ಹೌದು ಅಲ್ಲವೋ ಎಂಬುದನ್ನು ಚುನಾವಣೆ ಸಂದರ್ಭದಲ್ಲಿ ಚರ್ಚೆ ಮಾಡೋಣ. ಡಿಕೆ ಸುರೇಶ್ ಹೇಳಿಕೆಯನ್ನು ಡಿಕೆ ಶಿವಕುಮಾರ್(DK Shivakumar) ಸಮರ್ಥನೆ ಮಾಡಿದ್ದನ್ನು ದೇಶದ ಜನತೆ ಒಪ್ಪುವುದಿಲ್ಲ. ಕಾಂಗ್ರೆಸ್ (COngress) ಪಕ್ಷದಲ್ಲಿ ಯಾರು ಬೇಕಾದರೂ ಏನು ಬೇಕಾದರೂ ಮಾತನಾಡಬಹುದು. ದೇಶ ಮತ್ತು ರಾಜ್ಯದಲ್ಲಿ ಅಶಿಸ್ತಿನಿಂದ ಕೂಡಿದ ಪಕ್ಷ ಕಾಂಗ್ರೆಸ್ ಎಂದು ಕಿಡಿಕಾರಿದರು.

ಇದನ್ನೂ ವೀಕ್ಷಿಸಿ:  Hemant Soren: ಜಾರ್ಖಾಂಡ್‌ನಲ್ಲಿ ಆಪರೇಷನ್ ಪಾಲಿಟಿಕ್ಸ್: ಚಂಪಾಯ್ ಸೊರೇನ್ ನೂತನ ಸಿಎಂ..?

Video Top Stories