Asianet Suvarna News Asianet Suvarna News

Hemant Soren: ಜಾರ್ಖಾಂಡ್‌ನಲ್ಲಿ ಆಪರೇಷನ್ ಪಾಲಿಟಿಕ್ಸ್: ಚಂಪಾಯ್ ಸೊರೇನ್ ನೂತನ ಸಿಎಂ..?

ಚಂಪಾಯ್ ಸೊರೇನ್ ಜಾರ್ಖಾಂಡ್‌ನ ನೂತನ ಸಿಎಂ..?
ಶಾಸಕಾಂಗ ಸಭೆಯಲ್ಲಿ ನಿರ್ಧಾರ ಕೈಗೊಂಡ ಶಾಸಕರು
ಚಂಪಾಯ್ಗೆ ಬೆಂಬಲ ವ್ಯಕ್ತಪಡಿಸಿದ ವಿಡಿಯೋ ರಿಲೀಸ್

ಭೂ ಹಗರಣದಲ್ಲಿ  ಜಾರ್ಖಂಡ್ ಸಿಎಂಗೆ ಹೇಮಂತ್ ಸೊರೇನ್‌(Hemant Soren) ಜೈಲು ಪಾಲಾಗಿದ್ದಾರೆ. 10 ದಿನ ವಶಕ್ಕೆ ನೀಡುವಂತೆ ಕೋರ್ಟ್‌ಗೆ ಇಡಿ ಮನವಿ ಮಾಡಿದೆ. ಹೇಮಂತ್ ಸೊರೇನ್‌ಗೆ 1 ದಿನ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಇಡಿ(ED) ಬಂಧನ ಪ್ರಶ್ನಿಸಿ ಸೊರೇನ್ ಸುಪ್ರೀಂ ಮೊರೆ ಹೋಗಿದ್ದಾರೆ. ಇಡಿ ಅಧಿಕಾರಿಗಳು ನನ್ನ ಬಂಧಿಸಿರುವುದು ಸರಿಯಿಲ್ಲ ಎಂದು ದೂರು ನೀಡಿದ್ದಾರೆ. ಇದರ ಅರ್ಜಿ ವಿಚಾರಣೆ ಇಂದು ನಡೆಯಲಿದೆ. ಚಂಪಾಯ್ ಸೊರೇನ್(Champai Soren) ಜಾರ್ಖಾಂಡ್‌ನ ನೂತನ ಸಿಎಂ ಆಗುವ ಸಾಧ್ಯತೆ ಇದೆ. ಶಾಸಕಾಂಗ ಸಭೆಯಲ್ಲಿ ಶಾಸಕರು ಈ ಬಗ್ಗೆ ನಿರ್ಧಾರ ಕೈಗೊಂಡಿದ್ದಾರೆ. ಚಂಪಾಯ್‌ಗೆ ಬೆಂಬಲ ವ್ಯಕ್ತಪಡಿಸಿದ ವಿಡಿಯೋ ರಿಲೀಸ್ ಮಾಡಲಾಗಿದೆ. ಪದಗ್ರಹಣಕ್ಕೆ ರಾಜ್ಯಪಾಲರಿಗೆ ಮನವಿ ಮಾಡಲಾಗಿದೆ. ಆದ್ರೆ ಗೌವರ್ನರ್‌ ಯಾವುದೇ ದಿನಾಂಕ ನೀಡಿಲ್ಲ. ಹೀಗಾಗಿ ಕ್ಷಣ ಕ್ಷಣಕ್ಕೂ ಜಾರ್ಖಾಂಡ್ ರಾಜಕೀಯ ಕುತೂಹಲ ಕೆರಳಿಸಿದೆ. ಈ ಮಧ್ಯೆ JMM ಶಾಸಕರಿಗೆ ಆಪರೇಷನ್ ಕಮಲ ಭಯ ಶುರುವಾಗಿದ್ದು, ಜಾಖಂಡ್‌ನಲ್ಲಿ ರೆಸಾರ್ಟ್ ಪಾಲಿಟಿಕ್ಸ್ ಗರಿಗೆದರಿದೆ. ಬಹುತೇಕ ಶಾಸಕರು ಹೈದಾರಬಾದ್‌ಗೆ ಶಿಫ್ಟ್ ಆಗಿದ್ದಾರೆ. 

ಇದನ್ನೂ ವೀಕ್ಷಿಸಿ:  B Shivaram: ಬಿಜೆಪಿಗಿಂತ ಹೆಚ್ಚು ಭ್ರಷ್ಟಚಾರ ಕಾಂಗ್ರೆಸ್‌ನಲ್ಲೇ ನಡೆಯುತ್ತಿದೆ: ಬಿ.ಶಿವರಾಂ ಗಂಭೀರ ಆರೋಪ

Video Top Stories