Dharwad: ಸಾವಿರಾರು ಮೊಟ್ಟೆಗಳನ್ನ ಗುಳುಂ ಮಾಡಿದ್ರಾ ಅಧಿಕಾರಿಗಳು?
* ಫಲಾನುಭವಿಗಳಿಗೆ ಸಮರ್ಪಕವಾಗಿ ಹಂಚಿಕೆಯಾಗದ ಮೊಟ್ಟೆ
* 5 ತಿಂಗಳಲ್ಲಿ ಕೊಟ್ಟಿದ್ದು ಕೇವಲ ಎರಡೇ ತಿಂಗಳ ಮೊಟ್ಟೆ ಮಾತ್ರ
* ಅಂಗನವಾಡಿ ಮಕ್ಕಳು, ಗರ್ಭಿಣಿಯರು, ಬಾಣಂತಿಯರಿಗಿರುವ ಯೋಜನೆ
ಧಾರವಾಡ(ನ.25): ಸರ್ಕಾರ ಮಕ್ಕಳಿಗೆ, ಮಹಿಳೆಯರಿಗೆ ಅಂತ ವಿಶೇಷ ಅನುದಾನದ ಮೂಲಕ ಹೊಸ ಹೊಸ ಯೋಜನೆಗಳನ್ನ ಜಾರಿಗೆ ತರುತ್ತೆ. ಆದ್ರೆ ಆ ಯೋಜನೆಗಳು ಮಾತ್ರ ಸರಿಯಾಗಿ ತಲುಪುತ್ತೋ ಇಲ್ಲವೋ ಅನ್ನೋದನ್ನ ಜನಪ್ರತಿನಿಧಿಗಳೇ ಗಮನಿಸಬೇಕು. ಇಲ್ಲದಿದ್ರೆ ಮಹಿಳೆಯರಿಗೆ ಮತ್ತು ಮಕ್ಕಳಿಗೆ ಸಿಗುವ ಯಾವ ಸೌಲಭ್ಯವೂ ಸಿಗದೆ ಪರದಾಡುವ ಸ್ಥಿತಿ ನಿರ್ಮಾಣವಾಗುತ್ತೆ.
ಹೌದು, ಧಾರವಾಡ ಜಿಲ್ಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಕುಟುಂಬ ಕಲ್ಯಾಣ ಇಲಾಖೆಯಿಂದ ಕೊಡುವ ಮೊಟ್ಟೆ ಸಹ ಸರಿಯಾಗಿ ಹಂಚಿಕೆಯಾಗಿಲ್ಲ. ಸಾವಿರಾರು ಮೊಟ್ಟೆಗಳನ್ನ ಗುಳುಂ ಮಾಡಿದ್ರಾ ಅನ್ನೋ ಶಂಕೆ ವ್ಯಕ್ತವಾಗುತ್ತಿದೆ. ಜಿಲ್ಲೆಯಾದ್ಯಂತ ಅಂಗನವಾಡಿ ಮಕ್ಕಳು ಸೇರಿದಂತೆ, ಗರ್ಭಿಣಿಯರು, ಬಾಣಂತಿಯರಿಗೆ ತಿಂಗಳಿಗೆ 24 ಮೊಟ್ಟೆಗಳನ್ನ ನೀಡಲಾಗುತ್ತೆ. ಅದರಂತೆ ಮಕ್ಕಳಿಗೆ ವಾರದಲ್ಲಿ 3 ಬಾರಿ ಮೊಟ್ಟೆ ವಿತರಣೆಯಾಗುತ್ತೆ. ಆದ್ರೆ ಕಳೆದ 5 ತಿಂಗಳಲ್ಲಿ ಸರಿಯಾದ ಮೊಟ್ಟೆಗಳ ಹಂಚಿಕೆ ಆಗಿಯೇ ಇಲ್ಲ. ಇದರ ಬಗ್ಗೆ ಖುದ್ದು ಜಿಲ್ಲಾಧಿಕಾರಿ ನಿತೀಶ್ ಪಾಟೀಲ್ ಸಹ ದಾಸ್ತಾನು ಕೊಠಡಿಗೆ ಭೇಟಿ ನೀಡಿದಾಗ ಮೊಟ್ಟೆ ವಿತರಣೆ ಬಗ್ಗೆ ಮಾಹಿತಿ ಪಡೆದಿದ್ದಾರೆ.
Karwar: ಕೈ ಮುಗಿತೀವಿ ಸೇತುವೆ ನಿರ್ಮಿಸಿಕೊಡಿ, ಸಚಿವ ಹೆಬ್ಬಾರ್‌ಗೆ ಬಾಲಕಿಯ ಮನವಿ
ಇನ್ನು ಕೋವಿಡ್ ಸಮಯದಲ್ಲಿ ನಮ್ಮನ್ನ ಯಾರು ಕೇಳೋರು ಅನ್ನೋ ಮಟ್ಟಕ್ಕೆ ತಲುಪಿದ್ದ ಕೆಲ ಅಧಿಕಾರಿಗಳು ಸರಿಯಾಗಿ ಮೊಟ್ಟೆ ವಿತರಣೆಯನ್ನೇ ಮಾಡಿಲ್ಲ. ಅದರಲ್ಲೂ ಗ್ರಾಮಾಂತರ ಭಾಗಗಳಲ್ಲಿ ಗರ್ಭಿಣಿಯರು ಮೊಟ್ಟೆ ಕೇಳಿದ್ರೆ ಸರಿಯಾಗಿ ವಿತರಣೆ ಸಹ ಆಗಿಲ್ಲ ಅನ್ನೋದು ಜನರು ಸಹ ಹೇಳಿಕೊಂಡಿದ್ದಾರೆ. ಪ್ರತಿ ಅಂಗನವಾಡಿಗೆ ಬಾಲ ವಿಕಾಸ ಸಮಿತಿ ರಚನೆ ಮಾಡಿ ಅದರ ಅಧ್ಯಕ್ಷ ಮತ್ತು ಅಂಗನವಾಡಿ ಶಿಕ್ಷಕಿಯ ಬ್ಯಾಂಕ್ ಖಾತೆಗೆ ಹಣ ಪ್ರತಿ ತಿಂಗಳು ಜಮವಾಣೆಯಾಗುತ್ತೆ. ಆದ್ರೆ ಕೊರೊನ ನಂತರ ಮೊಟ್ಟೆ ಹಣ ದುಬಾರಿಯಾಗಿದ್ದಕ್ಕೆ ಬಂದ ಹಣವನ್ನು ಸಹ ಹಾಗೆಯೇ ಇಟ್ಟುಕೊಂಡು, ಮೊಟ್ಟೆ ಖರೀದಿ ಸಹ ಮಾಡದೆ ಮಹಿಳೆಯರಿಗೆ ಮೊಟ್ಟೆಯನ್ನ ವಿತರಣೆ ಮಾಡಿಲ್ಲ.
ಒಟ್ಟಾರೆ ಮಕ್ಕಳಿಗೆ ಮಹಿಳೆಯರಿಗೆ ಆಗ ಸಿಗಬೇಕಿದ್ದ ಮೊಟ್ಟೆಯನ್ನ ಇದೀಗ ಕೊಡುವ ಪ್ರಯತ್ನ ಮಾಡುತ್ತಿದ್ದು, ಇದು ಎಷ್ಟರ ಮಟ್ಟಿಗೆ ಸರಿ ಅನ್ನೋದನ್ನ ಅಧಿಕಾರಿಗಳೇ ಮನವರಿಕೆ ಮಾಡಿಕೊಳ್ಳಬೇಕು. ದಣಿದಾಗ ನೀರು ಕೊಡದ ಅಧಿಕಾರಿಗಳು ದಣಿವಾರಿದ ಮೇಲೆ ಅನ್ನ ನೀಡೋಕೆ ಬಂದಂತಾಯಿತು ಅಧಿಕಾರಿಗಳ ಈ ಕಾರ್ಯ.