Asianet Suvarna News Asianet Suvarna News

ವಿಶ್ವನಾಥ್ ವರಿ ಮಾಡ್ಬೇಡ ಎಂದ್ರು ಸಿಎಂ, ಸೋಲಿನ ಬಗ್ಗೆ ಹಳ್ಳಿಹಕ್ಕಿ ಮಾತು..!

ಎಲ್ಲ ಅಭ್ಯರ್ಥಿಗಳೂ ನಿರೀಕ್ಷೆ ಇಟ್ಟುಕೊಂಡಿರುತ್ತಾರೆ. ಕೆಲವೊಮ್ಮೆ ನಿರೀಕ್ಷೆ ಹುಸಿಯಾಗುತ್ತದೆ. ಕೆಲವೊಮ್ಮೆ ಒಳ್ಳೆಯದಾಗುತ್ತದೆ. ರಾಜಕೀಯದಲ್ಲಿ ಇದು ಸಹಜ. ಚುನಾವಣೆಯಲ್ಲಂತೂ ಇದು ಸಾಮಾನ್ಯ ಎಂದು ಹುಣಸೂರು ಪರಾಜಿತ ಬಿಜೆಪಿ ಅಭ್ಯರ್ಥಿ ಎಚ್. ವಿಶ್ವನಾಥ್ ಹೇಳಿದ್ದಾರೆ.

First Published Dec 9, 2019, 4:08 PM IST | Last Updated Dec 9, 2019, 4:08 PM IST

ಮೈಸೂರು(ಡಿ.09): ಎಲ್ಲ ಅಭ್ಯರ್ಥಿಗಳೂ ನಿರೀಕ್ಷೆ ಇಟ್ಟುಕೊಂಡಿರುತ್ತಾರೆ. ಕೆಲವೊಮ್ಮೆ ನಿರೀಕ್ಷೆ ಹುಸಿಯಾಗುತ್ತದೆ. ಕೆಲವೊಮ್ಮೆ ಒಳ್ಳೆಯದಾಗುತ್ತದೆ. ರಾಜಕೀಯದಲ್ಲಿ ಇದು ಸಹಜ. ಚುನಾವಣೆಯಲ್ಲಂತೂ ಇದು ಸಾಮಾನ್ಯ ಎಂದು ಹುಣಸೂರು ಪರಾಜಿತ ಬಿಜೆಪಿ ಅಭ್ಯರ್ಥಿ ಎಚ್. ವಿಶ್ವನಾಥ್ ಹೇಳಿದ್ದಾರೆ.

ಚುನಾವಣಾ ಫಲಿತಾಂಶದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಮೈತ್ರಿ ಸರ್ಕಾರದ ಪತನವೇ ಸೋಲಿಗೆ ಪ್ರಮುಖ ಕಾರಣ. ಜೆಡಿಎಸ್ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳು ಮೈತ್ರಿ ಸರ್ಕಾರದ ಪತನ ಗಂಭೀರವಾಗಿ ತೆಗೆದುಕೊಂಡರು. ಮೈತ್ರಿ ಸರ್ಕಾರದ ಸೋಲಿನ ಹಿನ್ನೆಲೆ ನನ್ನ ಸೋಲಿಗೆ ಕಾರಣ. ಇದು ಚುನಾವಣೆ. ಏನಾಗುತ್ತದೆಯೋ ಅದನ್ನು ಒಪ್ಪಿಕೊಳ್ಳಬೇಕು ಎಂದು ಎಚ್. ವಿಶ್ವನಾಥ್ ಹೇಳಿದ್ದಾರೆ.

ಬೈ ಎಲೆಕ್ಷನ್ ರಿಸಲ್ಟ್: ಅನರ್ಹರು ಈಗ ಅರ್ಹರು, ಸೋತ್ರೂ ವಿಶ್ವನಾಥ್‌ಗೆ ಸಿಕ್ತು ಭರವಸೆ

ದೊಡ್ಡ ಅಂತರದಲ್ಲಿ ವಿಶ್ವನಾಥ್ ಸೋಲನುಭವಿಸುವುದರ ಹಿಂದೆ ಜಿ.ಟಿ. ದೇವೇಗೌಡರ ಪಾತ್ರ ದೊಡ್ಡದು ಎನ್ನುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಜಿಟಿಡಿ ಜೆಡಿಎಸ್‌ನಲ್ಲಿದ್ದಾರೆ. ಅಲ್ಲಿದ್ದುಕೊಂಡು ಈ ಕೆಲಸ ಮಾಡಬಾರದಾಗಿತ್ತು. ಜಿಟಿಡಿ ಪಕ್ಷ ದ್ರೋಹ ಮಾಡಿದ್ದಾರೆ. ನಾವು ರಾಜೀನಾಮೆ ಕೊಟ್ಟು ನಮ್ಮ ದಾರಿ ಹಿಡಿದೆವು. ಆದ್ರೆ ಅವರು ಪಕ್ಷದೊಳಗಿದ್ದುಕೊಂಡೇ ಕೆಲಸ ಮಾಡಿದ್ರು. ಅವರ ದಳ್ಳುರಿ, ದ್ವೇಷ ಸೋಲಿಗೆ ಕಾರಣವಾಗಿದೆ.

ಮೈಸೂರು: 'ತೊಡೆ ತಟ್ಟಿ ಬಿದ್ದ ಸಿದ್ದರಾಮಯ್ಯ'..!.

ಸಿಎಂ ಮಾತನಾಡಿದ್ದಾರೆ. ವಿಶ್ವನಾಥ್ ಏನೂ ವರಿ ಮಾಡ್ಬೇಡ. ನಾನು ನಿಮ್ಮ ಜೊತೆ ಇದ್ದೇನೆ. ನಿಮ್ಮ ಕ್ಷೇತ್ರದ ಕೆಲಸ ಮಾಡು ಎಂದಿದ್ದಾರೆ. ಕುಮಾರಸ್ವಾಮಿ, ಸಿದ್ದರಾಮಯ್ಯ ಸೇರಿ ನನ್ನನ್ನು ಮುಗಿಸೋದಿಕ್ಕಾಗಲ್ಲ. ನನ್ನನ್ನು ಮುಗಿಸಬೇಕಾಗಿದ್ದರೆ ಜನ ಮುಗಿಸಬೇಕು ಎಂದಿದ್ದಾರೆ. ರಾಜಕೀಯ, ಸಾರ್ವಜನಿಕ ಜೀವನ. ಜನರ ಕಷ್ಟ, ಸುಖ ಸ್ಪಂದನೆ, ಅಧಿಕಾರ ಇದ್ದರೂ, ಇರದೇ ಇದ್ದರೂ ಸದಾ ಜನರ ಕಷ್ಟಕ್ಕೆ ಸ್ಪಂದಿಸುತ್ತೇನೆ ಎಂದಿದ್ದಾರೆ.

Video Top Stories