ಮೈಸೂರು(ಡಿ.09): ಎಷ್ಟುಬಾರಿ ಸಿದ್ದರಾಮಯ್ಯ ತೊಡೆ ತಟ್ಟಿಬಿದ್ದು ಹೋಗಿಲ್ಲ. ಸದನದಲ್ಲಿ ಎಷ್ಟುಬಾರಿ ಕಿರುಚಾಡಿ, ನಾನೇ ಮುಖ್ಯಮಂತ್ರಿ ಎಂದಿದ್ದರು. ಆದರೆ ಬಿಜೆಪಿಗೆ 105 ಸ್ಥಾನ ಬಂತು. ಕುಮಾರಸ್ವಾಮಿ, ನಿಮ್ಮಪ್ಪನಾಣೆ ಸಿಎಂ ಆಗಲ್ಲ ಎಂದಿದ್ದರು. ಕುಮಾರಸ್ವಾಮಿ ಪ್ರಮಾಣ ಸ್ವೀಕರಿಸುವಾಗ ಮೂಲೆಯಲ್ಲಿ ತೂಕಡಿಸುತ್ತಾ ಕುಳಿತಿದ್ದರು ಎಂದು ಸಂಸದ ವಿ. ಶ್ರೀನಿವಾಸಪ್ರಸಾದ್‌ ಹೇಳಿದ್ದಾರೆ.

ಮೈಸೂರಿನಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಸಭೆ, ಲೋಕಸಭೆಯಂತೆ ಉಪಚುನಾವಣೆಯಲ್ಲಿಯೂ ಬಿಜೆಪಿ ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲುವುದರಿಂದ ಸಿದ್ದರಾಮಯ್ಯ ವೈಟ್‌ ವಾಶ್‌ ಆಗುತ್ತಾರೆ ಎಂದಿದ್ದಾರೆ.

ಮೈಸೂರು: 'ಮೋದಿ ಸರ್ಕಾರದಿಂದ ದೇಶ ಮಾರಲು ಸಿದ್ಧತೆ'..!

ಲೋಕಸಭಾ ಚುನಾವಣೆಯಲ್ಲಿ ರಾಹುಲ್‌ ಗಾಂಧಿಯನ್ನು ಪ್ರಧಾನಿ ಮಾಡುತ್ತೇನೆ ಎಂದಿದ್ದರು. ಎನ್‌ಡಿಎ ಅಧಿಕಾರಕ್ಕೆ ಬರುವುದಿಲ್ಲ ಎಂದಿದ್ದರು. ಆದರೆ ಅಮೇಥಿಯಲ್ಲಿ ರಾಹುಲ್‌ ಸೋತರು. ರಾಜ್ಯದಿಂದ 25 ಮಂದಿ ಬಿಜೆಪಿ ಸಂಸದರು ಗೆದ್ದರು. ಕಾಂಗ್ರೆಸ್‌ ಒಂದೇ ಸ್ಥಾನ ಪಡೆದು ಮುಳುಗಿ ಹೋಯಿತಾ? ಎಂದಿದ್ದಾರೆ.

ಈ ಉಪಚುನಾವಣೆ ಫಲಿತಾಂಶಕ್ಕಾಗಿ ಇಡೀ ರಾಜ್ಯದಲ್ಲಿ ಎಲ್ಲ ಕುತೂಹಲದಿಂದ ಕಾಯುತ್ತಿದ್ದಾರೆ. ರಾಜಕೀಯ ಪಕ್ಷಗಳು, ಮುಖಂಡರು ಕಾಯುತ್ತಿದ್ದಾರೆ. ಇದೊಂದು ವಿಶೇಷ ಉಪಚುನಾವಣೆ. 15 ಕ್ಷೇತ್ರಗಳಿಗೆ 2 ತಿಂಗಳ ಕಾಲ ವಾದ ವಿವಾದ ನಡೆದು, ಸುಪ್ರಿಂ ಕೋರ್ಟ್‌ ತೀರ್ಪಿನಿಂದ ಉಪ ಚುನಾವಣೆ ಬಂದಿದೆ. ಬಿಜೆಪಿ ಗೆಲುವು ಸಾಧಿಸಲಿದೆ. ಯಾರು ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷವನ್ನು ಯಾವ ಕಾರಣಕ್ಕಾಗಿ ಬಿಟ್ಟು ಬಂದಿದ್ದಾರೆಯೋ ಅವರು ಗೆಲ್ಲುತ್ತಾರೆ. ಪಕ್ಷ ಬಿಟ್ಟುಬಂದವರು ಪಕ್ಷ ಬಿಟ್ಟಕಾರಣ ಮತ್ತು ನೋವನ್ನು ತಿಳಿಸಿದ್ದಾರೆ. ಇನ್ನೇನಿದ್ದರೂ ಜನತೆಗೆ ಬಿಟ್ಟಿದ್ದು, ಹೆಚ್ಚು ಸ್ಥಾನ ಬಿಜೆಪಿ ಗೆಲ್ಲುವುದರಲ್ಲಿ ಸಂಶಯವೇ ಇಲ್ಲ. ನಾವು ಹೇಳುವುದನ್ನು ಹೇಳಿ ಆಗಿದೆ. ನಮ್ಮನ್ನು ಏಕೆ ಅನರ್ಹಗೊಳಿಸಿದ್ದು, ಅನುಭವಿಸಿದ ನೋವು ಒಂದುಕಡೆ ವ್ಯಕ್ತಪಡಿಸಿದ್ದಾರೆ. ಮತ್ತೊಂದು ಕಡೆ ಇವರು ಜನತೆಗೆ ಅನ್ಯಾಯ ಮಾಡಿದ್ದಾರೆ. ಒಂದು ಕಡೆ ಅನರ್ಹಗೊಳಿಸಿದ್ದಾರೆ ಎಂದಿದ್ದಾರೆ.

ಬೈ ಎಲೆಕ್ಷನ್ ರಿಸಲ್ಟ್: ಹಾರಿದ ಕಾಗೆ, ಮತ್ತೆ 'ಶ್ರೀಮಂತ'