Shivamogga: ಗಾಯಾಳುಗಳ ನೆರವಿಗೆ ಗೃಹ ಸಚಿವ, ತಮ್ಮದೆ ಕಾರಿನಲ್ಲಿ ಕಳಿಸಿದರು

* ಮಾನವೀಯತೆ ಮೆರೆದ ಗೃಹ ಸಚಿವ ಆರಗ ಜ್ಞಾನೇಂದ್ರ
* ಸಚಿವರು ತೀರ್ಥಹಳ್ಳಿ ಯಿಂದ ಶಿವಮೊಗ್ಗಕ್ಕೆ ಬರುವಾಗ ನಡೆದ ಘಟನೆ
* ಮಂಡಗದ್ದೆ ಕಾಡಿನಲ್ಲಿ ಗೃಹ ಸಚಿವರು ಶಿವಮೊಗ್ಗ ಬರುವಾಗ  ನಡೆದಿದ್ದ ಘಟನೆ
* ರಸ್ತೆ ಅಪಘಾತ ದಲ್ಲಿ ಬಿದ್ದಿದ್ದ ಗಾಯಾಳುಗಳಿಗೆ ನೆರವು

Share this Video
  • FB
  • Linkdin
  • Whatsapp

ಶಿವಮೊಗ್ಗ(ನ. 13) ಗೃಹ ಸಚಿವ (Karnataka Home minister) ಆರಗ ಜ್ಞಾನೇಂದ್ರ (Araga Jnanendra) ಶಿವಮೊಗ್ಗಕ್ಕೆ (Shivmogga) ಬರುವಾಗ ಮಂಡಗದ್ದೆ ಬಳಿ ಕಾಡಿನಲ್ಲಿ ಬೈಕ್ ಅಪಘಾತವಾಗಿ (Acccident) ಎರಡು ಜನ ಗಂಭೀರ ಗಾಯಗೊಂಡಿದ್ದನ್ನು ಕಂಡಿದ್ದಾರೆ. ತಕ್ಷಣವೇ ತಮ್ಮ ವಾಹನ ನಿಲ್ಲಿಸಿ ಗಾಯಾಳು ಗಳ ನೆರವಿಗೆ ಧಾವಿಸಿದ್ದಾರೆ. ತಮ್ಮ ಎಸ್ಕಾರ್ಟ್ ವಾಹನದಲ್ಲಿ ಅಪಘಾತ ಕ್ಕೆ ಒಳಗಾದವರನ್ನು ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕಳಿಸಿಕೊಟ್ಟರು.

ವರದಿ ನಂತರ ಕುಟುಂಬದ ನೆರವಿಗೆ ಧಾವಿಸಿದ್ದ ಖಾದರ್

ಅಸ್ಪತ್ರೆಗೆ ಮಾಹಿತಿ ನೀಡಿ ಗಾಯಾಳು ಗಳಿಗೆ ಉತ್ತಮ ಚಿಕಿತ್ಸೆ ನೀಡಲು ಸೂಚನೆ ನೀಡಿದರು. ತೀರ್ಥಹಳ್ಳಿ ಮೂಲದ ಬೈಕ್ ಸವಾರರಿಬ್ಬರು ತೀವ್ರ ಗಾಯಾಳುಗಳಾಗಿದ್ದು ಮೆಗ್ಗಾನ್ ಅಸ್ಪತ್ರೆಯಲ್ಲಿ ಚಿಕಿತ್ಸೆ ಬಳಿಕ ಚೇತರಿಸಿ ಕೊಳ್ಳುತ್ತಿದ್ದಾರೆ. ಸಚಿವರೆ ಮುಂದಾಗಿ ನೆರವಿಗೆ ಧಾವಿಸಿದ್ದಾರೆ. ಗಾಯಾಳುಗಳ ಪೂರ್ವಾಪರ ವಿಚಾರಣೆ ನಡೆಸಿದ್ದಾರೆ. ಸಚಿವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. 

Related Video