
ಮಹಾರಾಷ್ಟ್ರದಲ್ಲಿ ವರುಣನ ಆರ್ಭಟ: ಚಿಕ್ಕೋಡಿಯಲ್ಲಿ ಪ್ರವಾಹ ಭೀತಿ
ಭಾರಿ ಮಳೆಗೆ ಉಕ್ಕಿ ಹರಿಯುತ್ತಿರುವ ನದಿಗಳು| ಮಳೆಗೆ ನಾಸಿಕ್‌ನ ಹಲವು ಭಾಗಗಳು ಜಲಾವೃತ|ಪ್ರವಾಹಕ್ಕೆ ವಾಹನವೊಂದು ಕೊಚ್ಚಿ ಹೋಗಿದೆ|ವಾಹನ ಸವಾರರು ಪರದಾಟ|
ಬೆಳಗಾವಿ(ಜೂ.13): ಮಹಾಮಾರಿ ಕೊರೋನಾ ಅಟ್ಟಹಾಸಕ್ಕೆ ಮಹಾರಾಷ್ಟ್ರ ನಲುಗಿ ಹೋಗಿದೆ. ಈ ಮಧ್ಯೆ ವರುಣನ ಆರ್ಭಟಕ್ಕೆ ನದಿಗಳು ಉಕ್ಕಿ ಹರಿಯುತ್ತಿವೆ. ಹೌದು, ನಿನ್ನೆ ಸುರಿದ ಭಾರೀ ಮಳೆಗೆ ನಾಸಿಕ್‌ನ ಹಲವು ಭಾಗಗಳು ಜಲಾವೃತವಾಗಿವೆ. ಗೋದಾವರಿ ನದಿ ಉಕ್ಕಿ ಹರಿಯುತ್ತಿದೆ. ಪ್ರವಾಹಕ್ಕೆ ವಾಹನವೊಂದು ಕೊಚ್ಚಿ ಹೋಗಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಮಹಾಭಾರತ ಧಾರಾವಾಹಿಗೆ ಮೆಚ್ಚುಗೆ; ಶ್ರೀಕೃಷ್ಣ ಸಾರವನ್ನು ಶ್ಲಾಘಿಸಿದ ಸಿಎಂ
ಭಾರೀ ಮಳೆ ಸುರಿದ ಪರಿಣಾಮ ವಾಹನ ಸವಾರರು ಹೈರಾಣಾಗಿದ್ದಾರೆ. ಇನ್ನು ಮಹಾರಾಷ್ಟ್ರದಲ್ಲಿ ಸುರಿದ ಭಾರಿ ಮಳೆಗೆ ಬೆಳಗಾವಿ ಚಿಕ್ಕೋಡಿ ತಾಲೂಕಿನಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಇಲ್ಲೂ ಕೂಡ ಕೃಷ್ಣಾ ನದಿ ತುಂಬಿ ಹರಿಯುತ್ತಿದೆ.