ರೀಲ್ಸ್ ಹುಚ್ಚಿಗೆ ಬಿದ್ದ ಮಹಾಶಯ ಮಾಡಿದ್ದ ಹುಚ್ಚಾಟ ಏನು..? ರೀಲ್ಸ್ ಮಾಡುವವರೇ ಎಚ್ಚರ..ಎಚ್ಚರ..ಎಚ್ಚರ..!

ವಿಶ್ವದ ಮೂಲೆ ಮೂಲೆಯಲ್ಲಿ ಪ್ರವಾಹಾಸುರನ ಅಬ್ಬರ..!
ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ ವರುಣನ ಆರ್ಭಟ..!
ಉಕ್ಕಿ ಹರಿಯುತ್ತಿರೋ ನದಿಯಲ್ಲಿ ಕೊಚ್ಚಿ ಹೋದ ರಾಸು..!
 

First Published Jul 20, 2024, 8:51 AM IST | Last Updated Jul 20, 2024, 8:51 AM IST

ಇತ್ತೀಚೆಗೆ ಉಕ್ಕಿ ಹರಿದ ನೀರ ಮಧ್ಯೆ ಸಿಲುಕಿಕೊಂಡು ಕುಟುಂಬವೊಂದು ಕೊಚ್ಚಿ ಹೋದ ದೃಶ್ಯ ಕಣ್ಣ ಮುಂದೆಯೇ ಇದೆ. ಯಾರೂ ಕೂಡ ಇನ್ನೂ ಆ ಶಾಕ್‌ನಿಂದ ಹೊರಗೆ ಬಂದಿಲ್ಲ. ಆಗಲೇ ಇನ್ನೊಂದು ಅವಘಡ ಸಂಭವಿಸಿದೆ. ಈ ಘಟನೆಯಲ್ಲಿ ಯುವತಿ 300 ಅಡಿ ಎತ್ತರದಿಂದ ಬಿದ್ದು ಪ್ರಾಣವನ್ನೇ ಕಳೆದುಕೊಂಡಿದ್ದಾಳೆ. ಈ ಘಟನೆ ಮಹಾರಾಷ್ಟ್ರದ (Maharashtra) ರಾಯಗಡ ಜಿಲ್ಲೆಯಲ್ಲಿ ಈ ನಡೆದಿದೆ. ಮಳೆಗಾಲ(Rain) ಬೆಟ್ಟ-ಗುಡ್ಡಗಳು ಹಸಿರಿನಿಂದ ಕಂಗೊಳಿಸ್ತಿದೆ ಅಂತ ವಿಡಿಯೋ ಮಾಡಲು ಹೋಗಿದ್ದಳು ಅನ್ವಿ ಕಂಬಾರ್ ಅನ್ನೊ ಯುವತಿ. ಇನ್ನೇನು ಕ್ಯಾಮರಾ ಆನ್ ಮಾಡಿ ವಿಡಿಯೋ ರೆಕಾರ್ಡ್ ಮಾಡಬೇಕು ಅನ್ನೊ ಅಷ್ಟರಲ್ಲಿ 300 ಅಡಿ ಆಳದ ಕಂದಕಗೊಳಗೆ ಬಿದ್ದು ಸಾವನ್ನಪ್ಪಿದ್ದಾರೆ. ಕೇವಲ ಭಾರತದಲ್ಲಿ (India)ಮಾತ್ರ ಅಲ್ಲ ಜಗತ್ತಿನ ನಾನಾ ಭಾಗಗಳಲ್ಲೂ ಭಾರೀ ಮಳೆಯಾಗುತ್ತಿದೆ. ಬಲಿಷ್ಠ ರಾಷ್ಟ್ರಗಳು ಕೂಡ ಜಲಾಘಾತಕ್ಕೆ ಒಳಗಾಗಿ ಗಢಗಢನೆ ನಡುಗುತ್ತಿವೆ. ಅನೇಕ ಪ್ರದೇಶಗಳು ದ್ವೀಪದ ರೂಪ ಪಡೆದು ಜನರನ್ನ ರಕ್ಷಿಸುವುದೇ ದೊಡ್ಡ ಸವಾಲಾಗೋಗಿದೆ.

ಇದನ್ನೂ ವೀಕ್ಷಿಸಿ:  Today Horoscope: ಈ ರಾಶಿಯವರಿಗೆ ಇಂದು ಸಾಲಬಾಧೆ ಇರಲಿದ್ದು, ಆರೋಗ್ಯ ವ್ಯತ್ಯಾಸವಾಗಲಿದೆ..

Video Top Stories