ರಾಜ್ಯದಲ್ಲಿ ಇಂದು ರಾತ್ರಿಯಿಂದ ಹೆಲ್ತ್ ಎಮರ್ಜೆನ್ಸಿ: 8 ಗಂಟೆ ನಂತರ ಪೋರ್ಟ್ 108 ಅಂಬ್ಯೂಲೆನ್ಸ್ ಸೇವೆ ಇಲ್ಲ!

ಸರ್ಕಾರದ ವೇತನ ಕಡಿತ ಹಾಗೂ ವೇತನ ನೀಡದ ಹಿನ್ನೆಲೆ ಆಂಬುಲೆನ್ಸ್ ಸಿಬ್ಬಂದಿ ಮತ್ತೆ ಮುಷ್ಕರಕ್ಕೆ ಸಜ್ಜಾಗಿದ್ದಾರೆ. ರಾತ್ರಿ 8 ಗಂಟೆ ನಂತರ ಪೋರ್ಟ್ 108 ಅಂಬ್ಯೂಲೆನ್ಸ್ ಸೇವೆ ಸಿಗುವುದಿಲ್ಲ. 

First Published May 6, 2024, 12:42 PM IST | Last Updated May 6, 2024, 12:43 PM IST

ರಾಜ್ಯದಲ್ಲಿ ಇಂದು ರಾತ್ರಿಯಿಂದ ಹೆಲ್ತ್ ಎಮರ್ಜೆನ್ಸಿ(Health emergency) ಇರಲಿದ್ದು, ರಾತ್ರಿ 8 ಗಂಟೆ ನಂತರ ಪೋರ್ಟ್ 108 ಅಂಬ್ಯೂಲೆನ್ಸ್ (Ambulance) ಸೇವೆ ಸಿಗುವುದಿಲ್ಲ. ಸಿಲಿಕಾನ್ ಸಿಟಿ(Bengaluru) ಜನರಿಗೆ ಸರ್ಕಾರದ 108 ಅಂಬ್ಯೂಲೆನ್ಸ್ ಸಿಗಲ್ಲ. ಸರ್ಕಾರದ ವೇತನ ಕಡಿತ ಹಾಗೂ ವೇತನ ನೀಡದ ಹಿನ್ನೆಲೆ ಆರೋಗ್ಯ ಕವಚ 108 ಆಂಬುಲೆನ್ಸ್ ಸಿಬ್ಬಂದಿ ಮತ್ತೆ ಮುಷ್ಕರಕ್ಕೆ ಸಜ್ಜಾಗಿದ್ದಾರೆ. ಇಂದು ರಾತ್ರಿ 8 ಗಂಟೆಯಿಂದ ರಾಜ್ಯ ವ್ಯಾಪ್ತಿ ಅಂಬ್ಯೂಲೆನ್ಸ್ ಸೇವೆ ಬಂದ್ ಆಗಲಿದೆ. ಜಿವಿಕೆ ಸಂಸ್ಥೆ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಸಿಬ್ಬಂದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೂರು ತಿಂಗಳ ವೇತನ ಬಾಕಿ ಹಿನ್ನೆಲೆ ಮುಷ್ಕರಕ್ಕೆ ಸಿಬ್ಬಂದಿ ಸಜ್ಜಾಗಿದ್ದಾರೆ. ವೇತನ ಸಿಗದೇ 108 ಸಿಬ್ಬಂದಿ ಜೀವನ ಹೈರಾಣಾಗಿದ್ದು, ಇಂದು ರಾತ್ರಿಯಿಂದ ಮುಷ್ಕರದ ಎಚ್ಚರಿಕೆಯನ್ನು ನೀಡಲಾಗಿದೆ. ಫೆಬ್ರವರಿ, ಮಾರ್ಚ್, ಏಪ್ರಿಲ್ ತಿಂಗಳ ವೇತನ ಬಾಕಿ ಇದ್ದು, ಈಗಾಗಲೇ ಡಿಸೆಂಬರ್, ಜನವರಿ ತಿಂಗಳ ವೇತನವನ್ನು 30 ಸಾವಿರದಿಂದ ಕಡಿತ ಮಾಡಿ ಕೇವಲ 12 ಸಾವಿರ ವೇತನ ನೀಡಿದ ಜಿವಿಕೆ ಸಂಸ್ಥೆ ನೀಡಿದೆ. ಸೋಮವಾರ ರಾತ್ರಿ 8 ಗಂಟೆಯಿಂದ  ರಾಜ್ಯದ 3,500 ಅರೋಗ್ಯ ಕವಚ ಸಿಬ್ಬಂದಿಯಿಂದ ಮುಷ್ಕರ ನಡೆಸಲಾಗುವುದು.

ಇದನ್ನೂ ವೀಕ್ಷಿಸಿ:  ಪ್ರೈಡ್ ಇಂಡಿಯಾ ಅವಾರ್ಡ್: ಹೆಸರಾಂತ ಕೇಬಲ್‌ ಉದ್ಯಮಿ ಶಿವಪ್ರಸಾದ್‌ಗೆ ಪ್ರಶಸ್ತಿ