Asianet Suvarna News Asianet Suvarna News

ಮತ್ತೊಮ್ಮೆ ಸಾಫ್ಟ್ ಹಿಂದುತ್ವ ಪ್ರದರ್ಶನಕ್ಕೆ ಮುಂದಾದ್ರ ಹೆಚ್‌ಡಿಕೆ ? ಕಲ್ಲಡ್ಕ ಪ್ರಭಾಕರ್ ಶಾಲೆಗೆ ಭೇಟಿ !

ಪ್ರಭಾಕರ ಭಟ್ ವಿರುದ್ಧವೇ ಹಲವು ಬಾರಿ ಗುಡುಗಿದ್ದ ಕುಮಾರಸ್ವಾಮಿ
ಈಗ ಕಲ್ಲಡ್ಕ ಶಾಲೆಯ ಕ್ರೀಡೋತ್ಸವದಲ್ಲೇ ಭಾಗಿಯಾಗುತ್ತಿರುವ ಎಚ್ಡಿಕೆ
ಕಲ್ಲಡ್ಕ ಪ್ರಭಾಕರ ಭಟ್ ಅಧ್ಯಕ್ಷತೆಯಲ್ಲಿ ನಡೆಯಲಿರೋ ಕ್ರೀಡೋತ್ಸವ

First Published Dec 5, 2023, 11:41 AM IST | Last Updated Dec 5, 2023, 11:41 AM IST

ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡ ಬಳಿಕ ಹಿಂದುತ್ವದೆಡೆಗೆ ಮಾಜಿ ಸಿಎಂ ಹೆಚ್‌.ಡಿ. ಕುಮಾರಸ್ವಾಮಿ ವಾಲುತ್ತಿದ್ದಂತೆ ಕಾಣುತ್ತಿದೆ. ಮತ್ತೊಮ್ಮೆ ಸಾಫ್ಟ್ ಹಿಂದುತ್ವ ಪ್ರದರ್ಶನಕ್ಕೆ ಹೆಚ್‌ಡಿಕೆ ಮುಂದಾದ್ರ ಎಂಬ ಪ್ರಶ್ನೆ ಉದ್ಭವಿಸಿದೆ. ಹೆಚ್‌.ಡಿ.ಕುಮಾರಸ್ವಾಮಿ ದತ್ತಮಾಲೆ ವಿಚಾರ ಬೆನ್ನಲ್ಲೇ ಕಲ್ಲಡ್ಕ ಪ್ರಭಾಕರ್‌ ಶಾಲೆಗೆ ಭೇಟಿ ನೀಡಲಿದ್ದಾರೆ ಎಂದು ತಿಳಿದುಬಂದಿದೆ. ಕಲ್ಲಡ್ಕ ಶ್ರೀರಾಮ ಶಾಲೆಯ(Kalladka Sri Rama School) ಕ್ರೀಡೋತ್ಸವಕ್ಕೆ ಹೆಚ್‌ಡಿಕೆ ಚೀಫ್ ಗೆಸ್ಟ್ ಆಗಿ ಹೋಗಲಿದ್ದಾರೆ. ಹೆಚ್‌ಡಿಕೆಗೆ RSS ಮುಖಂಡ ಕಲ್ಲಡ್ಕ ಪ್ರಭಾಕರ ಭಟ್(Kalladka Prabhakar Bhat) ಆಹ್ವಾನ ನೀಡಿದ್ದಾರೆ. ಡೆಸೆಂಬರ್ 9, ಶನಿವಾರ ಸಂಜೆ ಅದ್ದೂರಿ ಕ್ರೀಡೋತ್ಸವ ನಡೆಯಲಿದೆ. ದ‌ಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರ. ಹೆಚ್‌ಡಿಕೆ ಮತ್ತು ಕಲ್ಲಡ್ಕ ಭಟ್ ನಡುವೆ ಸೈದ್ದಾಂತಿಕ ಭಿನ್ನಾಬಿಪ್ರಾಯವಿದೆ. ಹಿಂದೆ ಆರ್ಎಸ್ಎಸ್ ನಿಷೇಧದ ಬಗ್ಗೆ ಹೆಚ್‌ಡಿಕೆ ಹೇಳಿಕೆ ನೀಡಿದ್ದರು. ಹೆಚ್‌ಡಿಕೆ ಜೊತೆ ಬಿಜೆಪಿ ಶಾಸಕ ಯತ್ನಾಳ್ ಭಾಗಿಯಾಗಲಿದ್ದಾರೆ. ಕಲ್ಲಡ್ಕ ಪ್ರಭಾಕರ ಭಟ್ ಅಧ್ಯಕ್ಷತೆಯಲ್ಲಿ ನಡೆಯಲಿರೋ ಕ್ರೀಡೋತ್ಸವ.

ಇದನ್ನೂ ವೀಕ್ಷಿಸಿ:  ಪಂಚರಾಜ್ಯ ಫಲಿತಾಂಶ..I.N.D.I.A ಮೈತ್ರಿ ಮೇಲೆ ಏನು ಪರಿಣಾಮ ?