ಪಂಚರಾಜ್ಯ ಫಲಿತಾಂಶ..I.N.D.I.A ಮೈತ್ರಿ ಮೇಲೆ ಏನು ಪರಿಣಾಮ ?

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಹುಟ್ಟಿಕೊಂಡಿರುವ ವಿಪಕ್ಷಗಳ ಇಂಡಿಯಾ ಒಕ್ಕೂಟದಲ್ಲಿ ಒಡಕಿನ ಧ್ವನಿಗಳು ಕೇಳಿಬಂದಿವೆ.
 

Share this Video
  • FB
  • Linkdin
  • Whatsapp

ಮೂರು ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌(COngress) ಹೀನಾಯವಾಗಿ ಸೋತು ಬಿಜೆಪಿ(BJP) ಭಾರಿ ಬಹುಮತ ಗಳಿಸಿದ ಬೆನ್ನಲ್ಲೇ ಲೋಕಸಭೆ ಚುನಾವಣೆಯಲ್ಲಿ(Loksabha election) ಬಿಜೆಪಿಯನ್ನು ಸೋಲಿಸಲು ಹುಟ್ಟಿಕೊಂಡಿರುವ ವಿಪಕ್ಷಗಳ ಇಂಡಿಯಾ ಒಕ್ಕೂಟದಲ್ಲಿ ಒಡಕಿನ ಧ್ವನಿಗಳು ಕೇಳಿಬಂದಿವೆ. ಅಲ್ಲದೆ ಈ ಸೋಲು ಇಂಡಿಯಾ ಒಕ್ಕೂಟದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂಬ ಅಭಿಪ್ರಾಯಗಳೂ ಪ್ರತಿಧ್ವನಿಸಿವೆ. ಈ ಬಗ್ಗೆ ಜಮ್ಮು ಕಾಶ್ಮೀರ ಮಾಜಿ ಸಿಎಂ ಓಮರ್ ಅಬ್ದುಲ್ಲಾ(Omar Abdullah) ಮಾತನಾಡಿದ್ದು, ಬಿಜೆಪಿಗೆ ಶುಭಾಶಯ ಹೇಳಲೇ ಬೇಕು. ನಾವು ಇದನ್ನ ಯೋಚಿಸಿರಲಿಲ್ಲ. ನಮಗೆ ಸ್ನೇಹಿತರು ಹೇಳಿದ್ರು, ಛತ್ತೀಸ್‌ಗಢ,ಮಧ್ಯಪ್ರದೇಶ, ತೆಲಂಗಾಣ, ರಾಜಸ್ಥಾನದಲ್ಲಿ ಗೆಲ್ಲುತ್ತೇವೆ ಎಂದು. ಆದ್ರೆ ಫಲಿತಾಂಶ ಬಂದಾಗ ತೆಲಂಗಾಣ ಬಿಟ್ಟು ಎಲ್ಲಾ ಸೋತಿದ್ದಾರೆ. ಡಿಸೆಂಬರ್ 6ಕ್ಕೆ ಇಂಡಿಯಾ ನಾಯಕರನ್ನ ಊಟಕ್ಕೆ ಕರೆದಿದ್ದಾರೆ. 3 ತಿಂಗಳ ಬಳಿಕ ಇವರಿಗೆ ಇಂಡಿಯಾ ಕೂಟ ನೆನಪಾಗಿದೆ. ನೋಡೋಣ ಏನು ಮಾತಾಡ್ತಾರೆ. ಇದೇ ಥರ ಆದ್ರೆ ನಾವು ಉಳಿಯೋದಿಲ್ಲ ಎಂದು ಅವರು ಹೇಳಿದ್ದಾರೆ.

ಇದನ್ನೂ ವೀಕ್ಷಿಸಿ: ತೆಲಂಗಾಣ ಸಿಎಂ ಆಯ್ಕೆ ಕಗ್ಗಂಟು : ದೆಹಲಿಗೆ ಹಾರಿದ ಡಿಕೆಶಿ, ಇಂದು ಸೋನಿಯಾ ನಿವಾಸದಲ್ಲಿ ಫೈನಲ್ ಸಭೆ

Related Video