ಸಿಎಂ ಅನುಭವಿಸಿದ್ದ ಪಂಚೆ ಅವಮಾನದ ಆ ಕಥೆ ಏನು? ಪಂಚೆ ಹಾಕೋರೆಲ್ಲಾ ಬಡವರಲ್ಲ, ಪ್ಯಾಂಟ್ ಹಾಕೋರೆಲ್ಲಾ ಶ್ರೀಮಂತರಲ್ಲ..!

ಪಂಚೆ ಬ್ರಾಂಡ್ ಹಿಸ್ಟರಿಯೇ.. ರೋಮಾಂಚಕ.. ಇದು ಪಂಚೆ ವಿಷ್ಯ..!
ವಿಧಾನಸೌಧ ಮೆಟ್ಟಿಲೇರಿದ ಪಂಚೆ ಮ್ಯಾಟ್ರು..ಸದನದಲ್ಲಿ ಭಾರಿ ಚರ್ಚೆ..!
ಪಂಚೆ ತೊಟ್ಟ ರೈತನಿಗೆ ಅವಮಾನಿಸಿದ್ದಕ್ಕೆ ಕ್ರಮ.. ಜಿಟಿ ಮಾಲ್ ಲಾಕ್..!

Share this Video
  • FB
  • Linkdin
  • Whatsapp

ಪಂಚೆ..ರಾಜ್ಯದಲ್ಲಿ ಈಗ ಪಂಚೆಯದ್ದೇ ಸುದ್ದಿ. ಎಲ್ಲಿ ನೋಡಿದ್ರು ಪಂಚೆ(Dhoti) ಈಗ ಟ್ರೆಂಡ್ ಆಗ್ತಿದೆ. ಪಂಚೆ ತೊಟ್ಟ ರೈತನಿಗೆ(Farmer) ಅವಮಾನ ಮಾಡಿದ ಜಿಟಿಮಾಲ್(GT Mall) ಸಿಬ್ಬಂದಿ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗ್ತಿದ್ದಂತೆ ಇದೀಗ ಸದನದಲ್ಲೂ ಈ ಪಂಚೆ ಬಗ್ಗೆ ಚರ್ಚೆಯಾಗಿದೆ. ಆ ಬೆನ್ನಲ್ಲೇ ಪಂಚೆಗೆ ಅವಮಾನ ಮಾಡಿದ ಜಿಟಿ ಮಾಲ್‌ಗೆ 7 ದಿನ ಬೀಗ ಹಾಕಲು ಬಿಬಿಎಂಪಿ(BBMP) ಮುಂದಾಗಿದೆ. ಅಷ್ಟೆ ಲ್ದೆ ಈ ಪಂಚೆ ಬಿಸಿ ಸಿಎಂ ಸಿದ್ದರಾಮಯ್ಯನವರಿಗೂ ತಟ್ಟಿದ್ದಂತೆ. ಹಳ್ಳಿ ಮಂದಿಗೆ ಅದೊಂದು ಆಸೆ ಇರುತ್ತೆ. ದೊಡ್ಡ ದೊಡ್ಡ ಮಾಲ್ ನೋಡ್ಬೇಕು. ಒಳಗೆಲ್ಲ ಸುತ್ತಾಡ್ಬೇಕು ಅಂತ ಕನಸು ಕಾಣ್ತಾರೆ. ಅದ್ರಂತೆ ಮಕ್ಕಳು ಅವ್ರನ್ನ ಬೆಂಗಳೂರಿಗೆ (Bengaluru) ಕರೆಸಿಕೊಂಡು ಪೋಷಕರನ್ನ ಮಾಲ್‌ಗೆ ಕರ್ಕೊಂಡು ಹೋಗ್ತಾರೆ. ಆದ್ರೆ ಮಾಲ್ ನೋಡ್ಬೇಕು ಅಂತ ಅಂದುಕೊಂಡಿದ್ದವರಿಗೆ ಅದೇ ಮಾಲ್ ಸಿಬ್ಬಂದಿ ಒಳಗೆ ಬಿಡದೆ ಅವಮಾನ ಮಾಡಿದ್ರೆ ಹೇಗಿರುತ್ತೆ ಹೇಳಿ. ಅಂಥಹದ್ದೆ ಘಟನೆ ಜಿಟಿ ಮಾಲ್ ನಲ್ಲಿ ಜುಲೈ 16 ರಂದು ನಡೆದಿದೆ. ಹಾವೇರಿ ಜಿಲ್ಲೆಯ ಅರೇಮಲ್ಲಾಪುರ ಗ್ರಾಮದ ನಾಗರಾಜ್ ,ತಮ್ಮ ತಂದೆ ತಾಯಿ ಜೊತೆ ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರೋ ಜಿ.ಟಿ. ಮಾಲ್ಗೆ ಸಿನಿಮಾ ನೋಡೋಕೆ ಬಂದಿದ್ರು. ಹೀಗೆ ಮಾಲ್ ಒಳಗೆ ಎಂಟ್ರಿ ಕೊಡ್ತಿದ್ದಂತೆ ಸೆಕ್ಯೂರಿಟಿ ಸಿಬ್ಬಂದಿ ನಾಗರಾಜ್ ತಂದೆ ಫಕೀರಪ್ಪಗೆ ಪಂಚೆ ತೊಟ್ಟಿದ್ದಾರೆ. ಮಾಲ್ನ ಒಳಗೆ ಪಂಚೆ ತೊಟ್ಟವರಿಗೆ ಪ್ರವೇಶವಿಲ್ಲ ಅಂತ ಅಲ್ಲೇ ತಡೆದಿದ್ದಾರೆ. ಇದನ್ನ ಪ್ರಶ್ನಿಸಿದ ಬಳಿಕ ಎಂಟ್ರಿ ಕೊಟ್ಟ ಮಾಲ್ ಮ್ಯಾನೇಜರ್ ಕೂಡಾ ಅದೇ ರಾಗ ತೆಗೆದಿದ್ದರು. 

ಇದನ್ನೂ ವೀಕ್ಷಿಸಿ: Today Horoscope: ಈ ರಾಶಿಯವರಿಗೆ ಇಂದು ಸಂಗಾತಿ ಜೊತೆ ಅಸಮಾಧಾನ ಬರಲಿದ್ದು, ಸಾಲ ಬಾಧೆ ಕಾಡಲಿದೆ..

Related Video