Today Horoscope: ಈ ರಾಶಿಯವರಿಗೆ ಇಂದು ಸಂಗಾತಿ ಜೊತೆ ಅಸಮಾಧಾನ ಬರಲಿದ್ದು, ಸಾಲ ಬಾಧೆ ಕಾಡಲಿದೆ..
ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.
ಶ್ರೀ ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯನ, ಗ್ರೀಷ್ಮ ಋತು, ಆಷಾಢ ಮಾಸ, ಶುಕ್ಲ ಪಕ್ಷ, ಶುಕ್ರವಾರ, ತ್ರಯೋದಶಿ ತಿಥಿ, ಮೂಲ ನಕ್ಷತ್ರ.
ಇಂದು ಆಷಾಢ ಶುಕ್ರವಾರವಿದ್ದು, ಮಹಾಲಕ್ಷ್ಮೀ ಪೂಜೆ ಮಾಡಿ. ಅಲ್ಲದೇ ಇಂದು ಬುಧ ಸಿಂಹ ರಾಶಿಯನ್ನು ಪ್ರವೇಶ ಮಾಡುತ್ತಾನೆ. ಸಿಂಹ ರಾಶಿಯವರಿಗೆ ಆರೋಗ್ಯ ಬಾಧೆ ಕಾಡಲಿದ್ದು, ಬುದ್ಧಿಬಲದ ದಿನ. ಹಣಕಾಸಿನ ಆದಾಯದ ಸೂಚನೆ. ಕುಟುಂಬ ಸಹಕಾರ. ವೃತ್ತಿಯಲ್ಲಿ ಅನುಕೂಲ. ಆದಿತ್ಯ ಹೃದಯ ಪಠಿಸಿ. ಕನ್ಯಾ ರಾಶಿಯವರಿಗೆ ಕಣ್ಣಿನ ಬಾಧೆ. ಕೃಷಿಕರಿಗೆ ಅನುಕೂಲ. ಹಾಲು-ಹೈನುಗಾರರಿಗೆ ಅನುಕೂಲ. ಬಂಧು-ಮಿತ್ರರ ಸಹಕಾರ. ಆದಿತ್ಯ ಹೃದಯ ಪಠಿಸಿ.
ಇದನ್ನೂ ವೀಕ್ಷಿಸಿ: ರೀಲ್ ಹೀರೋ ಅಕ್ಷಯ್ ಕುಮಾರ್ ರಿಯಲ್ ಕೆಲಸಕ್ಕೆ ಮೆಚ್ಚುಗೆ: ವೀಡಿಯೋ ವೈರಲ್