Asianet Suvarna News Asianet Suvarna News

ಸೂರಜ್‌ ರೇವಣ್ಣ ಪ್ರಕರಣ: ಹೋ ಏನಾಗಿದೆ, ಅವರು ಹಗರಣದಲ್ಲಿ ಸಿಕ್ರಾ? ಹಾಗಾದ್ರೆ ಶಿಕ್ಷೆ ಕಾದಿದೆ ಎಂದ ಜಿ.ಟಿ.ದೇವೇಗೌಡ

ಸೂರಜ್ ರೇವಣ್ಣ ಬಂಧನದ ಬಗ್ಗೆ ನನಗೆ ಮಾಹಿತಿ ಇಲ್ಲ. ತಪ್ಪು ಮಾಡಿದವರ ಪರ ನಾವು ಯಾವುತ್ತು ನಿಲಲ್ಲ ಎಂದು ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ ಹೇಳಿದ್ದಾರೆ.
 

ಸೂರಜ್ ರೇವಣ್ಣ(Suraj Revanna) ಬಂಧನ ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿ ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ(GT Deve Gowda) ಮಾತನಾಡಿದ್ದು, ಸೂರಜ್ ರೇವಣ್ಣ ಬಂಧನದ ಬಗ್ಗೆ ನನಗೆ ಮಾಹಿತಿ ಇಲ್ಲ. ನಿನ್ನೆಯಿಂದ ನಾನು ಹಲವು ಕಾರ್ಯಕ್ರಮಗಳಲ್ಲಿ ಬ್ಯೂಸಿ ಇದ್ದೆ. ಬೆಳಗ್ಗೆ ಪತ್ರಿಕೆ, ಟಿ.ವಿ ನೋಡಲು ಸಾಧ್ಯವಾಗಲಿಲ್ಲ. ಹೀಗಾಗಿ ಈ‌ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ಪ್ರಜ್ವಲ್ ರೇವಣ್ಣ ವಿಚಾರದಲ್ಲೂ ನಮ್ಮ ಹಸ್ತಕ್ಷೇಪ ಇರಲಿಲ್ಲ. ತಪ್ಪು ಮಾಡಿದ್ರೆ ಶಿಕ್ಷೆಯಾಗಲಿ. ತಪ್ಪು ಮಾಡಿದವರ ಪರ ನಾವು ಯಾವುತ್ತು ನಿಲಲ್ಲ. ನನ್ನ ಮಗನೇ ಇರಲಿ, ನನ್ನ ಸಂಬಂಧಿಗಳೇ ಇರಲಿ ಯಾರೇ ತಪ್ಪು ಮಾಡಿದ್ರು ತಪ್ಪೆ. ಜನತದಾಳ ಯಾವತ್ತು ತಪ್ಪು ಮಾಡಿದವರ ಪರ ನಿಲ್ಲುವುದಿಲ್ಲ. ಸೂರಜ್ ರೇವಣ್ಣ ಬಂಧನದಿಂದ ಪಕ್ಷಕ್ಕೆ ಯಾಕೆ ಮುಜುಗರ. ರಾಜ್ಯದಲ್ಲಿ ಯಾರೋ ಒಬ್ಬ ತಪ್ಪು ಮಾಡಿದರೇ ಅದಕ್ಕೆ ಆರೂವರೆ ಕೋಟಿ ಜನ ಕಾರಣನಾ ? ಅಲ್ಲ ತಾನೇ ಇದು ಕೂಡ ಹಾಗೆ ಎಂದು ಮೈಸೂರಿನಲ್ಲಿ ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ ಹೇಳಿದ್ದಾರೆ.

ಇದನ್ನೂ ವೀಕ್ಷಿಸಿ:  ಸಲಿಂಗ ಕಾಮ ಆರೋಪ: ಈ ಬಗ್ಗೆ ಮಾತಾಡೋಕೆ ನಮಗೂ ಮುಜುಗರವಾಗುತ್ತೆ ಎಂದ ಚಲುವರಾಯಸ್ವಾಮಿ

Video Top Stories