Shivamogga: ಶಿವಮೊಗ್ಗದಲ್ಲಿ ಮುಸ್ಲಿಂ ಏರಿಯಾಗಳೇ ಟಾರ್ಗೆಟ್: ಆತಂಕ ಸೃಷ್ಟಿಸಿದ ಜಮ್ಮು & ಕಾಶ್ಮೀರ ಗ್ಯಾಂಗ್

ಶಿವಮೊಗ್ಗದಲ್ಲಿ ಜಮ್ಮು & ಕಾಶ್ಮೀರ ಯುವಕರ ಗ್ಯಾಂಗ್‌ ಸುತ್ತಾಟ ನಡೆಸಿದ್ದು, ಮಲೆನಾಡಿನಲ್ಲಿ ಬುರ್ಖಾಧಾರಿ ಗ್ಯಾಂಗ್‌ ಆತಂಕ ಸೃಷ್ಟಿಸಿದೆ.

Share this Video
  • FB
  • Linkdin
  • Whatsapp

ಶಿವಮೊಗ್ಗ: ಶಿವಮೊಗ್ಗ ನಗರದ ಮುಸ್ಲಿಂ ಏರಿಯಾಗಳೇ ಜಮ್ಮು & ಕಾಶ್ಮೀರ ಯುವಕರ ಗ್ಯಾಂಗ್‌ ಮೇನ್‌ ಟಾರ್ಗೆಟ್‌ ಆಗಿದ್ದು, ಮುಸ್ಲಿಂ ಮನೆಗಳಿಗೆ ಹೋಗಿ ಹಣ ನೀಡಿ ಎಂದು ಯುವತಿ-ಯುವಕ ಹೇಳುತ್ತಿದ್ದಾರೆ. ಜಮ್ಮು & ಕಾಶ್ಮೀರದಿಂದ ಬಂದಿದ್ದೇವೆ ಎಂದು ಹೇಳಿ ಹಣ ವಸೂಲಿ ಮಾಡುತ್ತಿದ್ದು, ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದೆ. ಸ್ಥಳೀಯರು ಯುವತಿ-ಯುವಕರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ನಾಲ್ವರು ಕಾಶ್ಮೀರ ಯುವಕರು ಹಾಗೂ ಇಬ್ಬರು ಬುರ್ಖಾಧಾರಿ ಯುವತಿಯರನ್ನು ವಶಕ್ಕೆ ಪಡೆಯಲಾಗಿದೆ. ಇಡೀ ರಾಜ್ಯಾದ್ಯಂತ ಇದೇ ರೀತಿ ಕಾಶ್ಮೀರ ಗ್ಯಾಂಗ್ ಸಂಚಾರದ ಬಗ್ಗೆ ಮಾಹಿತಿ ಇದ್ದು, ಪೊಲೀಸ್ ಇಲಾಖೆ ತಕ್ಷಣವೇ ಕ್ರಮ ಕೈಗೊಳ್ಳಲು ಸಾರ್ವಜನಿಕರ ಆಗ್ರಹಿಸಿದ್ದಾರೆ. ದೊಡ್ಡಪೇಟೆ ಪೊಲೀಸ್‌ ಠಾಣೆಯಲ್ಲಿ ಕಾಶ್ಮೀರಿ ಗ್ಯಾಂಗ್‌ ವಿಚಾರಣೆ ನಡೆಯುತ್ತಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video