
Gadag: ಮೆಣಸಿನಕಾಯಿಗೆ ಬಂಗಾರದ ಬೆಲೆ: ರೈತನಿಗೆ ನ್ಯೂ ಇಯರ್ 'ಬಂಪರ್ ಗಿಫ್ಟ್'
ಮೆಣಸಿನ ಕಾಯಿ ಬೆಳೆದ ರೈತನಿಗೆ ಹೊಸ ವರ್ಷದ ಗಿಫ್ಟ್ ಸಿಕ್ಕಿದ್ದು, ಕ್ವಿಂಟಲ್ ಕೆಂಪು ಮೆಣಸಿನಕಾಯಿಗೆ ಬರೋಬ್ಬರಿ 70,199 ರೂಪಾಯಿ ಬೆಲೆ ಸಿಕ್ಕಿದೆ.
ದಾಖಲೆ ಬೆಲೆಗೆ ಕೆಂಪು ಮೆಣಸಿನಕಾಯಿ ಮಾರಾಟವಾಗಿದ್ದು, ಕೆ.ಜಿಗೆ 700 ರೂಪಾಯಿಯಂತೆ ರೈತನ ಬಳಿ ವರ್ತಕರು ಖರೀದಿ ಮಾಡಿದ್ದಾರೆ. ಗದಗ ಎಪಿಎಂಸಿ ಮೆಣಸಿನಕಾಯಿ ಮಾರ್ಕೆಟ್'ನಲ್ಲಿ ಭರ್ಜರಿ ವ್ಯಾಪಾರ ನಡೆದಿದೆ. ಗದಗ ತಾಲೂಕಿನಲ್ಲಿ ಕೋಟುಮಚಗಿ ಗ್ರಾಮದ ರೈತ ಶರಣಪ್ಪ ಜಗ್ಗಲ್ ಮೆಣಸಿನಕಾಯಿ ಬೆಳೆದಿದ್ದರು. 4 ಎಕರೆ ಜಮೀನಲ್ಲಿ ಮೆಣಸಿನಕಾಯಿ ಬೆಳೆದಿರೋ ರೈತ ಶರಣಪ್ಪ ಜಗ್ಗಲ್, ಕಾಶ್ಮೀರ ಡಬ್ಬಿ ಹೆಸರಿನ ಮೆಣಸಿನ ಬೀಜ ಬಿತ್ತನೆ ಮಾಡಿ ಭರ್ಜರಿ ಲಾಭ ಗಳಿಸಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ