Asianet Suvarna News Asianet Suvarna News

Bengaluru: ದಾಸರಹಳ್ಳಿ ವ್ಯಾಪ್ತಿ ಫ್ಲೆಕ್ಸ್‌, ಬ್ಯಾನರ್‌ ಹಾವಳಿ; ಹೆಚ್ಚುತ್ತಿವೆ ಅಪಘಾತ!

ಚುನಾವಣೆ ಸನಿಹವಾಗುತ್ತಿದ್ದಂತೆ ಬೆಂಗಳೂರಿನ ಬೀದಿಗಳಲ್ಲಿ ಫ್ಲೆಕ್ಸ್ ಬ್ಯಾನರ್‌ ಅಬ್ಬರ ಜೋರಾಗಿದೆ. ನಗರದ ಹಲವು ಕಡೆಗಳಲ್ಲಿ ಸಚಿವರು, ಶಾಸಕರ ಸಾಧನೆಗಳನ್ನು ಬಿಂಬಿಸುವ ಹಾಗೂ ಹುಟ್ಟುಹಬ್ಬಗಳಿಗೆ ಶುಭ ಕೋರುವ ಬ್ಯಾನರ್‌ ಹಾಗೂ ಫ್ಲೆಕ್ಸ್ ಗಳ ಹಾವಳಿ ಹೆಚ್ಚಾಗಿದ್ದು, ಇದರಿಂದ ಹಲವು ಕಡೆ ಅಪಘಾತಗಳು ಹೆಚ್ಚಿವೆ. 

Bengaluru bbmp Dasarhalli coverage flex banner rav
Author
First Published Jan 2, 2023, 10:40 AM IST

ಪ್ರಶಾಂತ ಕೆ.ಸಿ.

 ಪೀಣ್ಯ ದಾಸರಹಳ್ಳಿ (ಜ.2) : ಚುನಾವಣೆ ಸನಿಹವಾಗುತ್ತಿದ್ದಂತೆ ಬೆಂಗಳೂರಿನ ಬೀದಿಗಳಲ್ಲಿ ಫ್ಲೆಕ್ಸ್ ಬ್ಯಾನರ್‌ ಅಬ್ಬರ ಜೋರಾಗಿದೆ. ನಗರದ ಹಲವು ಕಡೆಗಳಲ್ಲಿ ಸಚಿವರು, ಶಾಸಕರ ಸಾಧನೆಗಳನ್ನು ಬಿಂಬಿಸುವ ಹಾಗೂ ಹುಟ್ಟುಹಬ್ಬಗಳಿಗೆ ಶುಭ ಕೋರುವ ಬ್ಯಾನರ್‌ ಹಾಗೂ ಫ್ಲೆಕ್ಸ್ ಗಳು ಅಲ್ಲಲ್ಲಿ ರಾರಾಜಿಸುತ್ತಿವೆ. ಫ್ಲೆಕ್ಸ್ ಬ್ಯಾನರ್‌ ಹಾವಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಹೈಕೋರ್ಚ್‌ ಆದೇಶ ಇದ್ದರೂ ಇವೆಲ್ಲಕ್ಕೂ ಡೋಂಡ್‌ ಕೇರ್‌ ಎಂಬ ರೀತಿಯಲ್ಲಿ ರಾಜಕಾರಣಿಗಳು ಹಾಗೂ ಅವರ ಅಭಿಮಾನಿಗಳು ವರ್ತಿಸುತ್ತಿದ್ದಾರೆ.

ದಾಸರಹಳ್ಳಿ)(Dasarahalli) ವಿಧಾನಸಭಾ ಕ್ಷೇತ್ರ(assembly constituency)ದಾದ್ಯಂತ ಫ್ಲೆಕ್ಸ್(Flex), ಬ್ಯಾನರ್‌((Banners)ಗಳಿಗೆ ಕಡಿವಾಣ ಬಿದ್ದಿಲ್ಲ. ಇದರಿಂದ ನಗರದ ಸೌಂದರ್ಯಕ್ಕೆ ಧಕ್ಕೆ ಎದುರಾಗಿದೆ. ಬಿಬಿಎಂಪಿ(BBMP) ಅಧಿಕಾರಿಗಳು ಪುರಸಭೆ ಅಧಿಕಾರಿಗಳು ಯಾವುದೇ ಕ್ರಮ ಜರುಗಿಸದೆ ಕಣ್ಮುಚ್ಚಿಕುಳಿತುಕೊಂಡು ಕೂತಿದ್ದಾರೆ. ಕ್ಷೇತ್ರದ ಪ್ರಮುಖ ವೃತ್ತ, ರಸ್ತೆ ವಿಭಜಕಗಳ ಮೇಲೆ ಆಳೆತ್ತೆರದ ಫ್ಲೆP್ಸ…, ಬ್ಯಾನರ್‌ ಅಳವಡಿಸುತ್ತಿದ್ದು, ರಸ್ತೆ ತಿರುವಿನಲ್ಲಿ ವಾಹನ ಸವಾರರು ಎದುರಿನ ವಾಹನ ಕಾಣದೆ ತೊಂದರೆ ಅನುಭವಿಸುತ್ತಿದ್ದಾರೆ.

ವರ್ಷದ ಮೊದಲ ದಿನಕ್ಕೆ ‘ಗುಂಡಿ ಮುಕ್ತ ರಸ್ತೆ’ ಪಾಲಿಕೆ ಟಾಸ್ಕ್ ಠುಸ್...

ಪ್ರತಿಯೊಂದು ಕಾರ್ಯಕ್ರಮಕ್ಕೂ ಜಾಹೀರಾತು ಅಳವಡಿಸುವ ಪರಿಪಾಠ ನಗರದಲ್ಲಿ ಬೆಳೆದುಬಂದಿದೆ. ಫ್ಲೆಕ್ಸ್‌ಗಳಿಗೆ ಹಾಲಿನ ಅಭಿಷೇಕ ಮಾಡುವ ಮೂಲಕ ತಮ್ಮ ನಾಯಕರನ್ನು ಮೆಚ್ಚಿಸುವ ಕೆಲಸವನ್ನು ಹಿಂಬಾಲಕರು ಮಾಡುತ್ತಿದ್ದಾರೆ. ಜಾತ್ರೆ, ರಾಜಕೀಯ ಸಮಾರಂಭ, ರಾಜಕೀಯ ನಾಯಕರ ಜನ್ಮದಿನ, ರಾಜ್ಯ ಹಾಗೂ ರಾಷ್ಟ್ರಮಟ್ಟದ ನಾಯಕರು ನಗರಕ್ಕೆ ಆಗಮಿಸುವಾಗ ಹಾಗೂ ವಿವಿಧ ರಾಜಕೀಯ ಪಕ್ಷಗಳ ಸಮಾವೇಶದ ವೇಳೆ ಅತಿ ಹೆಚ್ಚು ಫ್ಲೆP್ಸ…, ಬ್ಯಾನರ್‌ಗಳನ್ನು ಅಳವಡಿಸಲಾಗುತ್ತಿದೆ. ಇದರಿಂದ ಅನೇಕರಿಗೆ ಕಿರಿಕಿರಿಯಾಗುತ್ತಿದೆ.

ಅಕ್ರಮಕ್ಕಿಲ್ಲ ಕಡಿವಾಣ

ಕ್ಷೇತ್ರದಾದ್ಯಂತ ಪರವಾನಗಿ ಇಲ್ಲದೇ ಫ್ಲೆಕ್ಸ್, ಬ್ಯಾನರ್  ರ್‌ಗಳನ್ನು ಅಳವಡಿಸುವುದು ಸಾಮಾನ್ಯವಾಗಿದೆ. ಜಾಹೀರಾತು ಫಲಕಗಳಿಂದ ಬರುವ ಆದಾಯವನ್ನು ಖಾಸಗಿ ವ್ಯಕ್ತಿಗಳೇ ಪಡೆಯುತ್ತಿದ್ದಾರೆಯೇ ಹೊರತು ತೆರಿಗೆ ಪಾವತಿಸುತ್ತಿಲ್ಲ. ಅಲ್ಲದೇ ಇದರಿಂದ ಆಯಾ ಸ್ಥಳೀಯ ಸಂಸ್ಥೆಗಳಿಗೆ ಬರಬೇಕಾದ ವರಮಾನವೂ ಇಲ್ಲದಂತೆ ಆಗಿದೆ.

ನಗರ ಸೌಂದರ್ಯಕ್ಕೆ ಧಕ್ಕೆ: ಕೆಲವು ಕಡೆ ಜಾಹೀರಾತು ತೆರವುಗೊಳಿಸದೆ ಹಾಗೇ ಬಿಟ್ಟಿದ್ದು, ವಿದ್ಯುತ್‌ ಕಂಬಗಳಲ್ಲಿ ನೇತಾಡುತ್ತಿವೆ. ಅಧಿಕಾರಿಗಳ ಕಣ್ಣುತಪ್ಪಿಸಿ ರಾಜಕೀಯ ಪಕ್ಷಗಳ ಕಾರ್ಯಕರ್ತರು ರಾತ್ರೋರಾತ್ರಿ ನಗರದಲ್ಲಿ ಫ್ಲೆP್ಸ…, ಬ್ಯಾನರ್‌ ಅಳವಡಿಸಿ ನಗರದ ಸೌಂದರ್ಯವನ್ನು ಹಾಳು ಮಾಡುತ್ತಿದ್ದಾರೆ. ಕ್ರಮ ಕೈಗೊಳ್ಳಬೇಕಾದ ಅಧಿಕಾರಿಗಳು ಸುಮ್ಮನೆ ಕುಳಿತಿದ್ದಾರೆ ಎನ್ನುವ ಆರೋಪ ಕೇಳಿ ಬರುತ್ತಿದೆ. ಅಪಘಾತಕ್ಕೆ ಕಾರಣ: ಕ್ಷೇತ್ರದ ವಿವಿಧೆಡೆ ಅಳವಡಿಸಿರುವ ಫ್ಲೆಕ್ಸ್‌, ಬ್ಯಾನರ್‌ನಿಂದ ಸಣ್ಣಪುಟ್ಟಅಪಘಾತಗಳೂ ಸಂಭವಿಸುತ್ತಿವೆ. ರಸ್ತೆ ವಿಭಜಕ ಮತ್ತು ಪ್ರಮುಖ ವೃತ್ತಗಳಲ್ಲಿ ಅಳವಡಿಸಿರುವ ಜಾಹೀರಾತಿನಿಂದ ವಾಹನ ಸವಾರರು ಫ್ಲೆಕ್ಸ್‌, ಬ್ಯಾನರ್‌ ನೋಡುತ್ತಾ ಪ್ರಯಾಣಿಸುವಾಗ ಅಪಘಾತಗಳು ನಡೆಯುತ್ತಿವೆ.

Bengaluru: ಬಳ್ಳಾರಿ ರಸ್ತೆಗಾಗಿ 54 ಮರಕ್ಕೆ ಕೊಡಲಿ: ನಾಗರಿಕರು ಬೇಸರ

ಪರಿಸರಕ್ಕೆ ಮಾರಕವಾಗಿರುವ ಫ್ಲೆಕ್ಸ್‌, ಬ್ಯಾನರ್‌ಗಳನ್ನು ಸರ್ಕಾರ ನಿಷೇಧಿಸಿದೆ. ಈ ಬಗ್ಗೆ ನ್ಯಾಯಾಲಯಗಳು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿವೆ. ಆದರೂ ಅನಧಿಕೃತವಾಗಿ ಫ್ಲೆಕ್ಸ್‌, ಬ್ಯಾನರ್‌ ಅಳವಡಿಸುವುದನ್ನು ನಿಲ್ಲಿಸಲು ಸಾಧ್ಯವಾಗಿಲ್ಲ.

Follow Us:
Download App:
  • android
  • ios