Asianet Suvarna News Asianet Suvarna News

ಅರಮನೆ ಮೈದಾನದಲ್ಲಿ ಅತಿ ದೊಡ್ಡ ಫರ್ನಿಚರ್‌ ಎಕ್ಸ್‌ಪೋ: ಹೈಫೈ ಫರ್ನಿಚರರ್ಸ್‌..ಬಗೆ ಬಗೆಯ ವುಡ್‌ ವರ್ಕ್‌

ಜೀವನದಲ್ಲಿ ಒಂದು ಕನಸಿನ ಮನೆ ಕಟ್ಟಬೇಕು. ಆ ಮನೆಗೆ ಒಳ್ಳೊಳ್ಳೆ ಫರ್ನಿಚರ್ ಖರೀದಿಸಿ ಮನೆ ಅಂದ ಚೆಂದ ಹೆಚ್ಚಿಸಬೇಕು. ಇಂತ ಆಸೆ ನಿಮಗೂ ಇರ್ಬೇಕಲ್ವಾ..? ಅಂಥವರಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಹಾಗೂ ಕನ್ನಡ ಪ್ರಭ ಸಹಯೋಗದೊಂದಿಗೆ ಬೆಂಗಳೂರಿನ ಪ್ಯಾಲೇಸ್ ಮೈದಾನದಲ್ಲಿ ಫರ್ನಿಚರ್ ಎಕ್ಸ್ಪೋ ಆಯೋಜಿಸಲಾಗಿದೆ.

ಐಷಾರಾಮಿ ಸೋಫಾ.. ಅಟ್ರ್ಯಾಕ್ಟಿವ್ ಡೈನಿಂಗ್ ಟೇಬಲ್. ಹೈಫೈ ಫರ್ನಿಚರರ್ಸ್. ಬಗೆ ಬಗೆಯ ವುಡ್ ವರ್ಕ್. ಹೋಮ್ ಡೆಕೋರ್, ಕಾರ್ಪೆಟ್, ವಾಲ್ ಪೇಪರ್. ಎಲ್ಲವೂ ಒಂದೇ ಸ್ಟಾಟಲ್ಲಿ ಸಿಗುತ್ತೆ. ಅದು ಕೂಡ ಏಷ್ಯಾನೆಟ್ ಸುವರ್ಣ ನ್ಯೂಸ್ ಹಾಗೂ ಕನ್ನಡ ಪ್ರಭ ಆಯೋಜಿಸಿರೋ ಬೆಂಗಳೂರಿನ(Bengaluru) ಅತೀ ದೊಡ್ಡ ಫರ್ನೀಚರ್ ಎಕ್ಸ್ಪೋದಲ್ಲಿ(Furniture expo). ಅರಮನೆ ಮೈದಾನದ  ಕಿಂಗ್ಸ್ ಕೋರ್ಟ್ ನಲ್ಲಿ ಅತಿ ದೊಡ್ಡ ಫರ್ನಿಚರ್ ಎಕ್ಸ್ಪೋ ಆರಂಭವಾಗಿದ್ದು, ಶುಕ್ರವಾರ ಚಿತ್ರ ನಟ ಚಿಕ್ಕಣ್ಣ(actor Chikkanna) ಚಾಲನೆ ನೀಡಿದ್ರು. 4 ದಿನಗಳ ಕಾಲ ನಡೆಯುವ ಬೃಹತ್ ಎಕ್ಸ್ಪೋದಲ್ಲಿ 70ರಿಂದ 75 ಸ್ಟಾಲ್‌ಗಳನ್ನ ತೆರೆಯಲಾಗಿದ್ದು, ವಿವಿಧ ಪೀಠೋಪಕರಣಗಳು ಗ್ರಾಹಕರ ಕೈಬೀಸಿ ಕರೆಯುತ್ತಿವೆ. ಎಕ್ಸ್ಪೋಗೆ ಚಾಲನೆ ನೀಡಿ ಸುತ್ತಾಡಿದ ನಟ ಚಿಕ್ಕಣ್ಣ ವೆರೈಟಿ ಫರ್ನಿಚರ್ಗಳನ್ನು ನೋಡಿ ಫಿದಾ ಆದರು. ಎಕ್ಸ್ಪೋ ಉದ್ಘಾಟನೆಯಾಗಿದ್ದು ಮೊದಲ ದಿನವೇ ಉತ್ತಮ ರೆಸ್ಫಾನ್ಸ್ ಸಿಕ್ಕಿದೆ. ಎಕ್ಸ್‌ಪೋದಲ್ಲಿ 500 ರೂಪಾಯಿಗಳಿಂದ 30 ಲಕ್ಷದವರೆಗಿನ ವಸ್ತುಗಳು ಇವೆ. ಮಲೇಷ್ಯಾ, ಸಿಂಗಾಪುರ, ದುಬೈಗೆಲ್ಲ ಎಕ್ಸ್ಪೋರ್ಟ್ ಆಗುವ ಹೈಫೈ ಫರ್ನಿಚರ್ಗಳು ಇಲ್ಲಿ ಸಿಗುತ್ತವೆ. ಉತ್ಕೃಷ್ಟ ಗುಣಮಟ್ಟದ ಈ ಪೀಠೋಪಕರಣಗಳ ಎಕ್ಸ್ಚೇಂಜ್ ಮತ್ತು ಮಾರಾಟಗಳ ಮೇಲೆ ವಿಶೇಷ ರಿಯಾಯಿತಿಗಳು ಕೂಡ ದೊರೆಯಲಿದೆ. 70% ವರೆಗೂ ಡಿಸ್ಕೌಂಟ್ ದೊರೆಯಲಿದ್ದು ಗ್ರಾಹಕರಿಗೆ ಫರ್ನಿಚರ ಖರೀದಿಗೆ ಇದು ಸುವರ್ಣವಕಾಶ.

ಇದನ್ನೂ ವೀಕ್ಷಿಸಿ:  ಚೆಂದದ ಬದುಕು ಮುಗಿಸಿದ ಚಿತ್ರರಂಗದ ಕಲಾವತಿ ಲೀಲಾವತಿ!