ಚೆಂದದ ಬದುಕು ಮುಗಿಸಿದ ಚಿತ್ರರಂಗದ ಕಲಾವತಿ ಲೀಲಾವತಿ!

ಇನ್ನೊಬ್ಬರಿಗಾಗಿಯೇ ಬದುಕಿದ ಶ್ರೇಷ್ಠ ನಟಿ ಲೀಲಾವತಿ ಶುಕ್ರವಾರ ನಿಧನರಾದರು. ಸ್ವಂತ ಖರ್ಚಿನಲ್ಲಿ ಒಂದು ಆಸ್ಪತ್ರೆ ಹಾಗೂ ಇನ್ನೊಂದು ಪಶು ಆಸ್ಪತ್ರೆಯನ್ನು ಕಟ್ಟಿದ ಮಹಾತಾಯಿ, ನೆಲಮಂಗಲದ ಖಾಸಗಿ ಆಸ್ಪತ್ರೆಯಲ್ಲಿ ಅಸುನೀಗಿದರು.
 

First Published Dec 8, 2023, 11:09 PM IST | Last Updated Dec 8, 2023, 11:09 PM IST

ಬೆಂಗಳೂರು (ಡಿ.8): ಹಿರಿಯ ನಟಿ ಲೀಲಾವತಿ ಶುಕ್ರವಾರ ಕೊನೆಯುಸಿರೆಳೆದರು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಲೀಲಾವತಿ, ನೆಲಮಂಗಲದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 85ನೇ ವಯಸ್ಸಾಗಿತ್ತು. ಪುತ್ರ ವಿನೋದ್ ರಾಜ್‌ ಅವರನ್ನು ಹಿರಿಯ ನಟಿ ಅಗಲಿದ್ದಾರೆ.  


1937ರಲ್ಲಿ ದಕ್ಷಿಣ ಕನ್ನಡದ ಬೆಳ್ತಂಗಡಿಯಲ್ಲಿ ಜನಿಸಿದ್ದ ನಟಿ ಲೀಲಾವತಿ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. 6ನೇ ವಯಸ್ಸಿನಲ್ಲಿಯೇ ತಂದೆ ತಾಯಿ ಕಳೆದುಕೊಂಡು ಅನಾಥರಾಗಿ, ಯಾರದ್ದೂ ಮನೆಯಲ್ಲಿ ಬಾಲ ಕಾರ್ಮಿಕರಾಗಿ ಚಿತ್ರಹಿಂಸೆ ಅನುಭವಿಸಿದ್ದ ಹಿರಿಯ ನಟಿ ಲೀಲಾವತಿ ಅವರ ಜೀವನವೇ ಕಲ್ಲು ಮುಳ್ಳಿನ ಹಾದಿ.

'ಯಾರೂ ಇಲ್ಲ, ನೀವೇ ಬಂಧುಬಳಗ..' ತಾಯಿಯ ನಿಧನದ ಬಳಿಕ ವಿನೋದ್‌ ರಾಜ್‌ ಕಣ್ಣೀರು

5 ಭಾಷೆಗಳಲ್ಲಿ ನಟಿಸಿದ ಕನ್ನಡದ ಮೊದಲ ನಟಿ ಎನಿಸಿರುವ ಲೀಲಾವತಿ ಅವರ ಅಂತಿಮ ದರ್ಶನಕ್ಕೆ ನೆಲಮಂಗಲದ ಅಂಬೇಡ್ಕರ್ ಗ್ರೌಂಡ್‌ನಲ್ಲಿ ವ್ಯವಸ್ಥೆ ಮಾಡಲಾಗಿದೆ. ಶನಿವಾರ  ಮಧ್ಯಾಹ್ನದವರೆಗೂ ಅಂತಿಮ ದರ್ಶನಕ್ಕೆ ವ್ಯವಸ್ಥೆ ಇರಲಿದೆ. ಬಳಿಕ ಅವರ ಸೋಲದೇವನಹಳ್ಳಿ ತೋಟದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

Video Top Stories