ಇಂದಿನಿಂದ ಶಿವಮೊಗ್ಗದಲ್ಲಿ ವಿಮಾನ ಪ್ರಯಾಣ ಆರಂಭ: ಬೆಂಗಳೂರು TO ಶಿವಮೊಗ್ಗಕ್ಕೆ ಹಾರಾಟ
ಮಲೆನಾಡಿನ ಬಾನಂಗಳದಲ್ಲಿ ಲೋಹದ ಹಕ್ಕಿಗಳ ಹಾರಾಟಕ್ಕೆ ಕೊನೆಗೂ ಮುಹೂರ್ತ ಫಿಕ್ಸ್ ಆಗಿದೆ. ಇಂದಿನಿಂದ ವಿಮಾನಯಾನ ಆರಂಭಗೊಳ್ಳಲಿದೆ.
ಮಲೆನಾಡಿನ ಬಾನಂಗಳದಲ್ಲಿ ಲೋಹದ ಹಕ್ಕಿಗಳ ಹಾರಾಟಕ್ಕೆ ಕೊನೆಗೂ ಮುಹೂರ್ತ ಫಿಕ್ಸ್ ಆಗಿದೆ. ಇಂದಿನಿಂದಲೇ ವಿಮಾನಗಳ ಹಾರಾಟ ಆರಂಭವಾಗಲಿದೆ. ಬೆಳಗ್ಗೆ 9.50ಕ್ಕೆ ಬೆಂಗಳೂರಿನಿಂದ(Bengaluru) ಮೊದಲ ಇಂಡಿಗೋ ವಿಮಾನ(Flight) ಟೇಕ್ಅಪ್ ಆಗಲಿದ್ದು, 11.10ಕ್ಕೆ ಶಿವಮೊಗ್ಗದಲ್ಲಿ ಲ್ಯಾಂಡ್ ಆಗಲಿದೆ. ಮಾಜಿ ಸಿಎಂ ಬಿಎಸ್‌ವೈ ಸಚಿವ ಎಂ.ಬಿ ಪಾಟೀಲ್ ಸೇರಿದಂತೆ ಗಣ್ಯರು ಮೊದಲ ವಿಮಾನದಲ್ಲಿ ಶಿವಮೊಗ್ಗಕ್ಕೆ ಬಂದಿಳಿಯಲಿದ್ದಾರೆ. ನಂತರ ಇದೇ ವಿಮಾನ 11.25ಕ್ಕೆ ಶಿವಮೊಗ್ಗದಿಂದ(Shivamogga) ಹೊರಟು 12:25ಕ್ಕೆ ಬೆಂಗಳೂರು ತಲುಪಲಿದೆ. ಶಿವಮೊಗ್ಗದ ಸೋಗಾನೆಯಲ್ಲಿ ಸುಮಾರು 775 ಎಕರೆ ಪ್ರದೇಶದಲ್ಲಿ 450 ಕೋಟಿ ವೆಚ್ಚದಲ್ಲಿ ವಿಮಾನ ನಿಲ್ದಾಣ ನಿರ್ಮಾಣಗೊಂಡಿದೆ. ಫೆಬ್ರವರಿ 27ರಂದು ಪ್ರಧಾನಿ ನರೇಂದ್ರ ಮೋದಿ(PM Modi) ವಿಮಾನ ನಿಲ್ದಾಣವಲೋಕಾರ್ಪಣೆ ಮಾಡಿದ್ದರು. ಇಂದಿನಿಂದ ವಿಮಾನ ಹಾರಾಟಕ್ಕೆ ಏರ್ಪೋರ್ಟ್ ಮುಕ್ತವಾಗಿದೆ. ಶಿವಮೊಗ್ಗದಿಂದ ಬೆಂಗಳೂರು ಮಧ್ಯೆ ವಿಮಾನ ಹಾರಾಟ ಆರಂಭವಾಗಿ ಬಳಿಕ ಗೋವಾ, ಚೆನ್ನೈ, ದೆಹಲಿ ಸೇರಿದಂತೆ 8ಕ್ಕೂ ಹೆಚ್ಚು ಮಾರ್ಗಗಳಿಗೆ ವಿಮಾನ ಹಾರಾಟ ವಿಸ್ತಾರವಾಗಲಿದೆ. ಇಂಡಿಗೋ, ಸ್ಟಾರ್ ಏರ್ಲೈನ್ಸ್, ಸ್ಪೈಸ್ ಮೊದಲಾದ ವಿಮಾನಯಾನ ಸಂಸ್ಥೆಗಳ ವಿಮಾನ ಸಂಚಾರ ನಡೆಸಲಿವೆ. ಮಧ್ಯ ಕರ್ನಾಟಕದ ಆರ್ಥಿಕ ಬೆಳೆಗಳಾದ ಅಡಿಕೆ, ಕಾಫಿ , ಸಾಂಬಾರ ಪದಾರ್ಥ ಮೊದಲಾದವುಗಳ ಸಾಗಾಣಿಕೆಗೆ ಕಾರ್ಗೋ ವಿಮಾನ ನಿಲ್ದಾಣವಾಗಿಯೂ ರೂಪುಗೊಳ್ಳಲಿದೆ.
ಇದನ್ನೂ ವೀಕ್ಷಿಸಿ: ಗುಮ್ಮಟನಗರಿಯಲ್ಲಿ ಇನ್ಮುಂದೆ ಹೆಲ್ಮೆಟ್ ಕಡ್ಡಾಯ: ಸಾವಿನ ಪ್ರಮಾಣ ತಗ್ಗಿಸಲು ಪೊಲೀಸರ ರೂಲ್ಸ್