ಗುಮ್ಮಟನಗರಿಯಲ್ಲಿ ಇನ್ಮುಂದೆ ಹೆಲ್ಮೆಟ್‌ ಕಡ್ಡಾಯ: ಸಾವಿನ ಪ್ರಮಾಣ ತಗ್ಗಿಸಲು ಪೊಲೀಸರ ರೂಲ್ಸ್

ಗುಮ್ಮಟನಗರಿ ವಿಜಯಪುರದಲ್ಲಿ ವಿಪರೀತ ಬಿಸಿಲು ಅನ್ನೋ ಕಾರಣಕ್ಕೆ ಹೆಲ್ಮೆಟ್‌ ಕಡ್ಡಾಯವಾಗಿರಲಿಲ್ಲ. ಹೀಗಾಗಿ ಬೈಕ್‌ ಅಪಘಾತಗಳಲ್ಲಿ ಸಾವನ್ನಪ್ಪುವವರ ಸಂಖ್ಯೆ ಹೆಚ್ಚಾಗಿತ್ತು. ಅದ್ರಲ್ಲೂ ಯುವಕರು ಹೈವೇಗಳಲ್ಲಿ ಮನಬಂದಂತೆ ಬೈಕ್‌ ಚಲಾಯಿಸಿ ಹೆಡ್‌ ಇಂಜುರಿಗಳಿಂದ ಸಾವನ್ನಪ್ಪುತ್ತಿದ್ರು. ಸದ್ಯ ಎಚ್ಚೆತ್ತ ಪೊಲೀಸ್‌ ಇಲಾಖೆ ಇನ್ಮುಂದೆ ಹೆಲ್ಮೆಟ್‌ ಕಡ್ಡಾಯಗೊಳಿಸಿ ಆದೇಶಿಸಿದೆ. 

First Published Aug 31, 2023, 11:03 AM IST | Last Updated Aug 31, 2023, 11:04 AM IST

ವಿಜಯಪುರ ಬಿಸಿಲನಾಡು.. ಇಲ್ಲಿನ ಬಿಸಿಲ ಝಳಕ್ಕೆ ಜನ ಮನೆಯಿಂದ ಹೊರ ಬರಲು ಭಯಪಡ್ತಾರೆ. ಬೇಸಿಗೆಯಲ್ಲಂತೂ 45 ಡಿಗ್ರಿಗಿಂತಲೂ ಹೆಚ್ಚು ಬಿಸಿಲಿನ ತಾಪ ಇರುತ್ತೆ. ಇಂಥ ಬಿಸಿಲಿನ ಮಧ್ಯೆ ಹೆಲ್ಮೆಟ್‌(helmet) ಧರಿಸಿದ್ರೆ ಚರ್ಮ ಕಾಯಿಲೆ, ತಲೆ ಕೂದಲು ಉದುರುವಿಕೆಯಂತ ಸಮಸ್ಯೆಗಳು ಕಂಡು ಬರ್ತಿದ್ವು.. ಇದೇ ಕಾರಣಕ್ಕೆ ಜಿಲ್ಲೆಯಲ್ಲಿ ಹೆಲ್ಮೆಟ್ ಕಡ್ಡಾಯ ನಿಯಮ ಸಡಿಲಿಸಲಾಗಿತ್ತು. ಆದ್ರೀಗ ಹೆಚ್ಚುತ್ತಿರುವ ಡೆಡ್ಲಿ ಆಕ್ಸಿಡೆಂಟ್(Accident) ಕಾರಣಕ್ಕೆ ಹೆಲ್ಮೆಟ್ ಕಡ್ಡಾಯಗೊಳಿಸಲಾಗಿದೆ. ವಿಜಯಪುರ ನಗರ ಸೇರಿದಂತೆ ಹೈವೇಗಳಲ್ಲಿ ಬೈಕ್‌(Bike) ಅಪಘಾತಗಳಲ್ಲಿ ಸಾವನ್ನಪ್ಪುವವರ ಸಂಖ್ಯೆ ಹೆಚ್ಚಾಗುತ್ತಿದೆ.. ಅದ್ರಲ್ಲೂ ಹೆಡ್‌ ಇಂಜ್ಯೂರಿಗಳೇ ಬೈಕ್‌ ಸವಾರರ ಸಾವಿಗೆ ಕಾರಣವಾಗಿವೆ. ಹೀಗಾಗಿ ಸೆಪ್ಟೆಂಬರ್ 5ರಿಂದ ಹೆಲ್ಮೆಟ್ ಕಡ್ಡಾಯವಾಗಿ ಜಾರಿಯಾಗುತ್ತಿದೆ. ಹೆಲ್ಮೆಟ್‌ ಇಲ್ಲದೆ ಸಂಚರಿಸುತ್ತಿರೋ ಬೈಕ್‌ ಸವಾರರನ್ನು ತಡೆದು ಹೆಲ್ಮೆಟ್ ಕಡ್ಡಾಯದ ಬಗ್ಗೆ ಮಾಹಿತಿ ನೀಡುತ್ತಿರುವ ಪೊಲೀಸರು, ಸೆಪ್ಟೆಂಬ್ರ 5ರ ನಂತರ ಹೆಮ್ಲೆಟ್ ಇಲ್ಲದೆ ಬೀದಿಗಿಳಿದ್ರೆ ದಂಡ ಫಿಕ್ಸ್ ಎನ್ನುತ್ತಿದ್ದಾರೆ. ಹೆಲ್ಮೆಟ್ ಕಡ್ಡಾಯ ನಿಯಮವನ್ನು ಪ್ರಜ್ಞಾವಂತ ಬೈಕ್ ಸವಾರರು ಕೂಡ ಸ್ವಾಗತಿಸುತ್ತಿದ್ದಾರೆ.

ಇದನ್ನೂ ವೀಕ್ಷಿಸಿ:  77ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ: ಸಾಂಸ್ಕೃತಿಕ ಕಾರ್ಯಕ್ರಮ..ಸಾಧಕರು, ಯೋಧರಿಗೆ ಸನ್ಮಾನ

Video Top Stories