
ಮೈಸೂರು: ನ್ಯೂ ಇಯರ್ ದಿನ ಪೆಟ್ರೋಲ್‌ಗಾಗಿ ಫೈಟ್..!
ಹೊಸ ವರ್ಷ ಆಚರಿಸಲು ಹುರುಪಿನಲ್ಲಿ ಹೊರಟವರು ಪೆಟ್ರೋಲ್ ಬಂಕ್‌ನಲ್ಲಿದ್ದ ಕ್ಯೂ ನೋಡಿ ಸುಸ್ತಾಗಿದ್ದಾರೆ. ಪೆಟ್ರೋಲ್ ತುಂಬಿಸಿಕೊಂಡು ಇನ್ನೇನು ಸುತ್ತಾಡಿ ಬರಬೇಕೆಂದು ಕೊಂಡಿದ್ದ ಜನರು ಪೆಟ್ರೋಲ್ ಬಂಕ್‌ಬಲ್ಲಿಯೇ ಜಗಳ ಮಾಡಿದ್ದಾರೆ.
ಮೈಸೂರು(ಜ.01): ಹೊಸ ವರ್ಷ ಆಚರಿಸಲು ಹುರುಪಿನಲ್ಲಿ ಹೊರಟವರು ಪೆಟ್ರೋಲ್ ಬಂಕ್‌ನಲ್ಲಿದ್ದ ಕ್ಯೂ ನೋಡಿ ಸುಸ್ತಾಗಿದ್ದಾರೆ. ಪೆಟ್ರೋಲ್ ತುಂಬಿಸಿಕೊಂಡು ಇನ್ನೇನು ಸುತ್ತಾಡಿ ಬರಬೇಕೆಂದುಕೊಂಡಿದ್ದ ಜನರು ಪೆಟ್ರೋಲ್ ಬಂಕ್‌ಬಲ್ಲಿಯೇ ಜಗಳ ಮಾಡಿದ್ದಾರೆ.
ಹೊಸ ವರ್ಷದ ಸಂಭ್ರಮಾಚರಣೆ ಹಿನ್ನಲೆ ಮೈಸೂರಿನಲ್ಲಿ ಮಧ್ಯರಾತ್ರಿ ಪೆಟ್ರೋಲ್ ಬಂಕ್‌ನಲ್ಲಿ ಗಲಾಟೆಯಾಗಿದೆ. ಮೈಸೂರಿನ ಮೆಟ್ರೋಪೋಲ್ ಬಳಿಯ ಹೆಚ್.ಪಿ. ಪೆಟ್ರೋಲ್ ಬಂಕ್ ಬಳಿ ಕ್ಯೂ ನಿಂತಿದ್ದು, ಪೆಟ್ರೋಲ್‌ಗಾಗಿ ವಾಹನ ಸವಾರರು, ಯುವಕರಿಂದ ಗಲಾಟೆ ನಡೆದಿದೆ.
ಹೊಸ ವರ್ಷದ ಎಫೆಕ್ಟ್, ಬೆತ್ತಲೆಯಾಗಿ ಕುಣಿದ ಭೂಪ: ವಾಯು ವಿಹಾರಿಗಳಿಗೆ ಶಾಕ್!
ಈ ವೇಳೆ ಕುಡಿತ ಮತ್ತಿನಲ್ಲಿ ವ್ಯಕ್ತಿ ಬೈಕ್ ಗಳ ಮೇಲೆ ಕಾರು ನುಗ್ಗಿಸಿದ್ದಾನೆ. ಎರಡು ದ್ವಿಚಕ್ರ ವಾಹನಗಳು ಜಖಂ ಆಗಿದ್ದು, ಕಾರು ಚಾಲಕನನ್ನು ಪೋಲಿಸರು ವಶಕ್ಕೆ ಪಡೆದಿದ್ದಾರೆ. ಸ್ಥಳಕ್ಕೆ ಆಗಮಿಸಿದ ದೇವರಾಜ ಠಾಣೆ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ದೇವರಾಜ ಸಂಚಾರಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ
ನಡೆದಿದೆ.