Asianet Suvarna News Asianet Suvarna News

ಬೆತ್ತಲೆಯಾಗಿ ಕುಣಿದ ಭೂಪ: ವಾಯು ವಿಹಾರಿಗಳಿಗೆ ಶಾಕ್!

ಹೊಸ ವರ್ಷದ ಎಫೆಕ್ಟ್, ಬೆತ್ತಲೆಯಾಗಿ ಕುಣಿದ ಭೂಪ| ಬೆಳ್ಳೆಂಬೆಳಗ್ಗೆ ವಾಯು ವಿಹಾರಿಗಳಿಗಳಿಗೆ ಶಾಕ್ ಕೊಟ್ಟ ಅನಾಮಿಕ| ವಿಜಯಪುರ ಜಿಲ್ಲಾಡಳಿತದ ಕಚೇರಿ‌ ಮುಂಭಾಗದ ರಸ್ತೆಯಲ್ಲಿ  ಬೆತ್ತಲೆ ಓಡಾಡಿದ ವ್ಯಕ್ತಿ| ಬೆಳಗಿನ ಜಾವದಲ್ಲಿ ರಸ್ತೆಮೇಲೆ ಬೆತ್ತಲೆಯಾಗಿ ಕುಣಿದ ಭೂಪ.

New Year 2020 Vijayapura Naked Man Walking Outdoors Denies To Wear Dress
Author
Bangalore, First Published Jan 1, 2020, 1:34 PM IST
  • Facebook
  • Twitter
  • Whatsapp

ವಿಜಯಪುರ[ಜ.01]: ಹೊಸ ವರ್ಷವನ್ನು ಎಲ್ಲರೂ ಎಲ್ಲರೂ ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ. ಆದರೆ ಇಲ್ಲೊಬ್ಬ ಭೂಪ ಹೊಸ ವರ್ಷದಂದು ಬೆಳ್ಳಂ ಬೆಳಗ್ಗೆ ಬಟ್ಟೆ ಧರಿಸದೆ ರಸ್ತೆ ಎಲ್ಲಾ ಬೆತ್ತಲೆಯಾಗಿ ಓಡಾಡಿ ವಾಯುವಿಹಾರಿಗಳಿಗೆ ಶಾಕ್ ಕೊಟ್ಟ ಘಟನೆ ವಿಜಯಪುರದಲ್ಲಿ ನಡೆದಿದೆ.

"

ಹೌದು ವಿಜಯಪುರ ಜಿಲ್ಲಾಡಳಿತದ ಕಚೇರಿ‌ ಮುಂಭಾಗದ ರಸ್ತೆಯಲ್ಲಿ ವ್ಯಕ್ತಿಯೊಬ್ಬ ಬೆಳಗಿನ ಜಾವ ಬೆತ್ತಲೆಯಾಗಿ ಓಡಾಡಿದ್ದಾನೆ. ಮರಾಠಿ ಭಾಷಿಕನಾದ ಈ ಅನಾಮಿಕ ವ್ಯಕ್ತಿ ಹುಚ್ಚನಂತೆ ಕುಣಿದಾಡಿದ್ದು, ಇದನ್ನು ಕಂಡ ವಾಯು ವಿಹಾರಿಗಳು ಬೆಚ್ಚಿ ಬಿದ್ದಿದ್ದಾರೆ. ಬಟ್ಟೆ ತೊಟ್ಟುಕೊಳ್ಳುವಂತೆ ಹೇಳಿದರೂ ಆತ ನಿರಾಕರಿಸಿದ್ದಾನೆ. ತೀವ್ರ ಒತ್ತಾಯದ ಬಳಿಕ ರಟ್ಟಿನ ಬಾಕ್ಸ್ ಸುತ್ತಿಕೊಂಡಿದ್ದಾನೆ.

ಆ ಅನಾಮಿಕ ವ್ಯಕ್ತಿ ಕುಡಿದ ಅಮಲಿನಲ್ಲಿ ಬೆತ್ತಲೆ ಕುಣಿದಾಡಿದ್ದಾನೋ ಅಥವಾ ಬುದ್ದಿಭ್ರಮಣೆಯಾಗಿದ್ದಾನೋ ಎಂಬುದು ಸ್ಪಷ್ಟವಾಗಿಲ್ಲ. ಹೊಷ ವರ್ಷದ ಅಂಗವಾಗಿ ಕುಡಿದು ಹೀಗೆಲ್ಲ ಹುಚ್ಚಾಟ ಮಾಡಿರಬೇಕು ಎಂಬುವುದು ಜನರ ಅಭಿಪ್ರಾಯ

Follow Us:
Download App:
  • android
  • ios