Asianet Suvarna News Asianet Suvarna News

ಗರ್ಭಿಣಿಯರ ತುತ್ತಿಗೂ ಕುತ್ತು, ಅಕ್ಕಿ ಕದಿಯುವ ಅಧಿಕಾರಿಗಳ ಗೋಲ್ಮಾಲ್

ಸರ್ಕಾರ ಗರ್ಭಿಣಿ ಹಾಗೂ ಮಕ್ಕಳಿಗಾಗಿ ಅಕ್ಕಿ, ಧಾನ್ಯ ಕೊಟ್ಟರೆ ಅಧಿಕಾರಿಗಳು ಅದನ್ನೂ ಬಿಡದೆ ಗುಳುಂ ಮಾಡಿದ್ದಾರೆ. ಗರ್ಭಿಣಿಯರ ತುತ್ತಿಗೂ ಕನ್ನ ಹಾಕಿರುವ ಅಧಿಕಾರಿಗಳ ಗೋಲ್ಮಾಲ್ ಬಯಲಾಗಿದೆ.

officers steal rice which was allotted to pregnant woman in davanagere
Author
Bangalore, First Published Jan 1, 2020, 1:07 PM IST
  • Facebook
  • Twitter
  • Whatsapp

ದಾವಣಗೆರೆ(ಜ.01): ಸರ್ಕಾರ ಗರ್ಭಿಣಿ ಹಾಗೂ ಮಕ್ಕಳಿಗಾಗಿ ಅಕ್ಕಿ, ಧಾನ್ಯ ಕೊಟ್ಟರೆ ಅಧಿಕಾರಿಗಳು ಅದನ್ನೂ ಬಿಡದೆ ಗುಳುಂ ಮಾಡಿದ್ದಾರೆ. ಗರ್ಭಿಣಿಯರ ತುತ್ತಿಗೂ ಕನ್ನ ಹಾಕಿರುವ ಅಧಿಕಾರಿಗಳ ಗೋಲ್ಮಾಲ್ ಬಯಲಾಗಿದೆ.

ಜಗಳೂರು ಸಿಡಿಪಿಓ ಕಚೇರಿಯಲ್ಲಿ ಅಧಿಕಾರಿಗಳ ಗೋಲ್ಮಾಲ್ ಬಯಲಾಗಿದ್ದು, ಅಧಿಕಾರಿಗಳ ಅಕ್ರಮಕ್ಕೆ ಇನ್ನೂ ಬ್ರೇಕ್ ಬಿದ್ದಿಲ್ಲ. ಸಿಡಿಪಿಓ ಗೋಡೌನ್‌ನಲ್ಲಿದ್ದ ಗರ್ಭಿಣಿಯರು ಮತ್ತು ಮಕ್ಕಳ ಅಕ್ಕಿಗೆ ಕನ್ನ ಹಾಕಲಾಗಿದೆ.

ಉಡುಪಿಯಲ್ಲಿ ಅಪರೂಪದ ಬಿಳಿಗೂಬೆ ರಕ್ಷಣೆ

ಕಳೆದ ಸೆಪ್ಟಂಬರ್ ತಿಂಗಳಲ್ಲಿ ಪೂರೈಕೆಯಾಗಿದ್ದ ಮೂರನೇ ತ್ರೈ ಮಾಸಿಕ ಅಕ್ಕಿಯನ್ನೇ ಕದ್ದು ಸಾಗಿಸಿದ ಅಧಿಕಾರಿಗಳು, 2335  ಚೀಲ ಅಕ್ಕಿಯಲ್ಲಿ 508 ಕ್ಕು ಹೆಚ್ಚು ಚೀಲ ಅಕ್ಕಿ ಅಕ್ರಮವಾಗಿ ಮಾರಾಟ ಮಾಡಿದ್ದಾರೆ.

ದಾವಣಗೆರೆ ಉಪನಿರ್ದೇಶಕರು  ಭೇಟಿ ನೀಡಿದಾಗಲೇ ಅಕ್ರಮ ಬಯಲಾಗಿದ್ದು, ಉಪನಿರ್ದೇಶಕ ವಿಜಯ್ ಕುಮಾರ್ ಗೋಡೌನ್‌ ಸೀಜ್ ಮಾಡಿದ್ದಾರೆ. ಜಗಳೂರಿನ ಸಿಡಿಪಿಓ ಬಾರತಿ ಬಣಕಾರ್ ಅಲ್ಲಿನ ಎಫ್‌ಡಿಎ ನಾಗರಾಜ್ ಅವರೂ ಅಕ್ರಮದಲ್ಲಿ ಭಾಗಿಯಾಗಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ.

ಉತ್ತರ ಕರ್ನಾಟಕಕ್ಕೆ ಅನ್ಯಾಯ: ಹೊಸ ವರ್ಷದಂದೇ ಪ್ರತ್ಯೇಕ ರಾಜ್ಯದ ಕೂಗು

25 ಸಾವಿರಕ್ಕು ಹೆಚ್ಚು ಕೆಜಿ ಅಕ್ಕಿ ಕಾಳ ಸಂತೆಯಲ್ಲಿ ಮಾರಾಟ ಮಾಡಿದ್ದು, ಎಂಎಸ್‌ಪಿಟಿಸಿ (ಪೂರಕ ಅಹಾರ ಉತ್ಪಾದನಾ ಘಟಕ)ಕ್ಕು ಸಿಗದೇ ಅಕ್ಕಿ ಮಾಯವಾಗಿದೆ. ಗರ್ಭಿಣಿಯರು ಹಾಗು ಮಕ್ಕಳಿಗೆ ಸರ್ಕಾರ ಕೆಜಿ ಗಟ್ಟಲೇ ಅಕ್ಕಿ ಪೂರೈಸುತ್ತದೆ. ಆದರೆ ಅಧಿಕಾರಿಗಳು ಸರ್ಕಾರದ ಅಕ್ಕಿಯನ್ನು  ಟನ್ ಕ್ವಿಂಟಾಲ್ ಲೆಕ್ಕದಲ್ಲಿ ಮಾರುತ್ತಿರುವುದು ದುರದೃಷ್ಟಕರ.

Follow Us:
Download App:
  • android
  • ios