ಬೆಳಗಾವಿ: ಗಂಡು ಚಿರತೆ ಸರೆಗೆ ಬೋನುಗಳಿಗೆ ಹೆಣ್ಣು ಚಿರತೆ ಯೂರಿನ್‌ ಸ್ಪ್ರೇ

ಬೆಳಗಾವಿಯಲ್ಲಿ ಚಿರತೆ ಹಿಡಿಯಲು ಕೈಗೊಂಡ ಹಲವು ಪ್ರಯತ್ನಗಳು ವಿಫಲವಾದ ಹಿನ್ನೆಲೆಯಲ್ಲಿ ಈಗ ಚಿರತೆ ಬೋನಿಗೆ ಹೆಣ್ಣು ಚಿರತೆಯ ಮೂತ್ರವನ್ನು ಸಿಂಪಡಿಸಲಾಗಿದೆ.

First Published Aug 26, 2022, 6:22 PM IST | Last Updated Aug 26, 2022, 6:22 PM IST


ಬೆಳಗಾವಿ: ಕಳೆದ 21 ದಿನಗಳಿಂದ ಕುಂದಾನಗರಿ ಬೆಳಗಾವಿ ಜನರ ನಿದ್ದೆಗೆಡಿಸಿರುವ ಚಿರತೆ ಮೊನ್ನೆ ರಾತ್ರಿ ಟ್ರ್ಯಾಪ್ ಕ್ಯಾಮರಾದಲ್ಲಿ ಸೆರೆಯಾಗಿದೆ. ಕಳೆದ 21 ದಿನಗಳಿಂದ ಬೆಳಗಾವಿ ಜನರ ನಿದ್ದೆಗೆಡಿಸಿರುವ ಈ ಚಿರತೆ ಅರಣ್ಯ ಇಲಾಖೆ ಅಧಿಕಾರಿಗಳೆದುರೇ ಬೆಳಗಾವಿ ಹಿಂಡಲಗಾ ಮಧ್ಯೆ ಇರುವ ಕ್ಲಬ್ ರಸ್ತೆಯಿಂದ ಗಾಲ್ಫ್ ಮೈದಾನಕ್ಕೆ ನುಗ್ಗಿತ್ತು‌. ನಿನ್ನೆ ರಾತ್ರಿ ಗಾಲ್ಫ್‌ ಮೈದಾನದಲ್ಲಿ ಅಳವಡಿಸಿದ್ದ ಟ್ರ್ಯಾಪ್ ಕ್ಯಾಮರಾದಲ್ಲಿ ಇದು ಕಾಣಿಸಿಕೊಂಡಿದೆ. ಚಿರತೆ ಪೋಟೋ ಆಧರಿಸಿ ಅದೇ ಭಾಗದಲ್ಲಿ ಇಂದು ಕಾರ್ಯಾಚರಣೆ ಆರಂಭಿಸಲಾಯಿತು. ಇದಕ್ಕೂ ‌ಮುನ್ನ ಗಾಲ್ಪ್ ಮೈದಾನದ ಸುತ್ತ ಬೆಳೆದ ಗಿಡಗಂಟಿಗಳನ್ನು ಐದು ಜೆಸಿಬಿಗಳ ಸಹಾಯದಿಂದ ತೆರವು ಮಾಡಲಾಯಿತು. ಇದಲ್ಲದೇ ಹಂದಿ ಹಿಡಿಯುವವರು ಹಾಗೂ ಆನೆಗಳನ್ನು ಕೂಡ ಈ ಚಿರತೆಯನ್ನು ಸೆರೆ ಹಿಡಿಯಲು ಕರೆಸಲಾಗಿತ್ತು. ಆದರೆ ಯಾವುದು ಫಲ ನೀಡದ ಹಿನ್ನೆಲೆಯಲ್ಲಿ ಬೋನಿಗೆ ಹೆಣ್ಣು ಚಿರತೆಯ ಮೂತ್ರವನ್ನು ಸಿಂಪಡಿಸಲು ನಿರ್ಧರಿಸಲಾಗಿದೆ. 

Video Top Stories