Asianet Suvarna News Asianet Suvarna News

ಬಿಗ್‌ 3ಯಲ್ಲಿ ಯವ ರೈತ ಆತ್ಮಹತ್ಯೆ ವರದಿ: ಕೃಷಿ ಸಚಿವರ ಮಾತಿಗೆ ಬೆಲೆನೇ ಕೊಡ್ತಿಲ್ವಾ ಅಧಿಕಾರಿಗಳು ?

ಮಂಡ್ಯದ ಯುವ ರೈತ ಸಂದೇಶ್‌ ಸಾಲಬಾಧೆ ತಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆದ್ರೆ ಆತನ ತಂದೆ ತಾಯಿಗೆ ಕೃಷಿ ಅಧಿಕಾರಿಗಳು ಪರಿಹಾರದ ಹಣ ನೀಡಲು ಸತಾಯಿಸುತ್ತಿದ್ದಾರೆ.

ಮಂಡ್ಯ: ಇಂದಿನ ಬಿಗ್‌ 3ಯಲ್ಲಿ ಮಂಡ್ಯದ(Mandya) ರೈತನೊಬ್ಬನ ಬಗ್ಗೆ ವರದಿ ಮಾಡಲಾಗಿತ್ತು. ಈ ವರದಿ ನೋಡಿದ ಕೃಷಿ ಸಚಿವ ಚಲುವರಾಯಸ್ವಾಮಿ(Minister Chaluvarayaswamy) ಇದಕ್ಕೆ ಸ್ಪಂದಿಸಿದ್ದಾರೆ. ಆದ್ರೆ ಸಚಿವರ ಮಾತಿಗೆ ಕೃಷಿ ಅಧಿಕಾರಿಗಳು ಬೆಲೆನೇ ಕೊಡ್ತಿಲ್ವಾ ಎಂಬ ಅನುಮಾನ ಇದೀಗ ಮೂಡಿದೆ. ಇಂತಹ ಕೇಸ್‌ಗಳಲ್ಲಿ ನಾವು ಅನ್ನದಾತರ(Farmer) ಪರ ಇರುತ್ತೇವೆ ಎಂದು ಸಚಿವರು ಹೇಳಿದ್ದರು. ಪರಿಹಾರ ಕೊಡಲು ಸಮಸ್ಯೆ ಆದರೆ, ಸರ್ಕಾರದ ಗಮನಕ್ಕೆ ತನ್ನಿ ಎಂದು ಸಹ ಹೇಳಿದ್ದಾರೆ. ಸಚಿವರು ಹೇಳಿದ ಬಳಿಕವೂ ಅಧಿಕಾರಿಗಳು ಸುಮ್ಮನೆ ಕುಳಿತಿದ್ದಾರೆ ಎನ್ನಲಾಗ್ತಿದೆ. 25 ವರ್ಷದ ಯುವ ರೈತ ಸಂದೇಶ್‌. ಕೃಷಿ (Agriculture) ಮಾಡಿ ಬದುಕು ಕಟ್ಟಿಕೊಳ್ಳುವ ಕನಸು ಕಂಡಿದ್ದ. ಆದರೆ ಸಾಲ, ಸೋಲ ಮಾಡಿ ಬೆಳೆದಿದ್ದ ಬೆಳೆ ಕೈ ಕೊಟ್ಟಿತ್ತು. ಲಕ್ಷಾಂತರ ರೂಪಾಯಿ ಸಾಲದ ಸುಳಿಗೆ ಸಿಲುಕಿದ ಆತ ಕಡೆಗೆ ಆತ್ಮಹತ್ಯೆಗೆ ಶರಣಾಗಿದ್ದ. ಇತ್ತ ಮಗನನ್ನು ಕಳೆದುಕೊಂಡು ಸಾಲದ ಹೊರೆ ಹೊತ್ತ ಇಡೀ ಕುಟುಂಬ ಬೀದಿಗೆ ಬಿದ್ದಿದೆ. ಮೃತ ರೈತನ ಕುಟುಂಬಕ್ಕೆ ಪರಿಹಾರ ಕೊಡಬೇಕಿದ್ದ ಅಧಿಕಾರಗಳು ವಿಳಂಬ ಅರ್ಜಿ ಎಂಬ ಕಾರಣ ನೀಡಿ ಮಾನವೀಯತೆ ಮರೆತಿದ್ದಾರೆ. ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಮೃತ ರೈತನ ಪೋಷಕರು ಕಚೇರಿಯಿಂದ ಕಚೇರಿಗೆ ಅಲೆಯುತ್ತಾ ಪರಿಹಾರಕ್ಕಾಗಿ ಅಂಗಲಾಚುತ್ತಿದ್ದಾರೆ.

ಇದನ್ನೂ ವೀಕ್ಷಿಸಿ:  ಹೊತ್ತಿ ಉರಿದಿದ್ದೇಕೆ ಹರಿಯಾಣ ?: ದೊಂಬಿ.. ಗಲಾಟೆಗೆ “ಆ” ಒಂದು ವಿಡಿಯೊ ಕಾರಣನಾ ?

Video Top Stories