ಹೊತ್ತಿ ಉರಿದಿದ್ದೇಕೆ ಹರಿಯಾಣ ?: ದೊಂಬಿ.. ಗಲಾಟೆಗೆ “ಆ” ಒಂದು ವಿಡಿಯೊ ಕಾರಣನಾ ?
ಕೋಮು ಸಂಘರ್ಷದ ಕಿಡಿಗೆ ಹರಿಯಾಣ ಧಗ.. ಧಗ..!
ದೊಂಬಿ.. ಗಲಾಟೆಗೆ ಕಾರಣ “ಆ” ಒಂದು ವಿಡಿಯೊ..!
ಕೋಮು ಗಲಭೆಯಿಂದ ಮುಸ್ಲಿಮರಿಗೆ ಬಹಿಷ್ಕಾರ..!
ರಾಷ್ಟ್ರ ರಾಜಧಾನಿ ದೆಹಲಿಗೆ ಅಂಟಿಕೊಂಡೇ ಇರುವ ಹರಿಯಾಣ(Haryana) ಹೊತ್ತಿ ಉರಿಯುತ್ತಿದೆ. ಯೋಗಿ ಬಾಬಾನ ಉತ್ತರ ಪ್ರದೇಶದ ಪಕ್ಕದ ರಾಜ್ಯದಲ್ಲಿ ಕೋಮು ದಳ್ಳುರಿಯ ಕಿಡಿ ಧಗಧಗಿಸ್ತಾ ಇದೆ. ಆ ಕಿಡಿಗೆ ಆರು ಜನ ಬಲಿಯಾಗಿದ್ದಾರೆ, 200ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಹಿಂದೂ-ಮುಸ್ಲಿಂ ಕೋಮು ಗಲಭೆ(communal conflict) ಈ ದೇಶಕ್ಕೇನು ಹೊಸತೇನಲ್ಲ. ಹರಿಯಾಣದಲ್ಲೂ ಈಗ ನಡೀತಾ ಇರೋದೂ ಅದೇ ಕೋಮು-ಗಲಭೆ, ಕೋಮು ದಳ್ಳುರಿ. ಹರಿಯಾಣದ ಮೂರು ಜಿಲ್ಲೆಗಳ ಬಹುತೇಕ ಪ್ರದೇಶಗಳಲ್ಲಿ ಕೋಮು ದಳ್ಳುರಿ ಹೊತ್ತಿಕೊಂಡಿದೆ. ಬೆಂಕಿ ಹೊತ್ತಿಕೊಳ್ಳೋದಕ್ಕೆ ಒಂದು ಸಣ್ಣ ಕಿಡಿ ಸಾಕು.. ಹರಿಯಾಣದಲ್ಲಿ ಆಗಿದ್ದೂ ಅದೇ. ಜುಲೈ 31ರಂದು ಹರಿಯಾಯಾಣದ ನುಹ್ ಜಿಲ್ಲೆಯಲ್ಲಿ ಶುರುವಾದ ಗಲಭೆ, ಪಕ್ಕದ 3 ಜಿಲ್ಲೆಗಳಿಗೂ ವ್ಯಾಪಿಸಿ ಬಿಟ್ಟಿದೆ. ಅಷ್ಟೇ ಅಲ್ಲ, ಕೋಮು-ಗಲಭೆಯೀಗ ಧರ್ಮದಂಗಲ್‌ಗೂ ತಿರುಗಿ ಬಿಟ್ಟಿದೆ. ಮುಸ್ಲಿಮ್ ವ್ಯಾಪಾರಿಗಳ(Muslim) ಮೇಲೆ ಬಹಿಷ್ಕಾರ ಹೇರುವಂತೆ 50 ಪಂಚಾಯತ್‌ಗಳು ಸ್ಥಳೀಯ ಪೊಲೀಸ್ ಮತ್ತು ಜಿಲ್ಲಾಡಳಿತಕ್ಕೆ ಪತ್ರ ಬರೆದಿವೆ. ಮುಸ್ಲಿಂ ಸಮುದಾಯದವರಿಗೆ ಮನೆ ಮತ್ತು ಅಂಗಡಿಗಳನ್ನು ಬಾಡಿಗೆಗೆ ನೀಡದಂತೆ ಕರೆ ಕೊಡಲಾಗಿದೆ. ಬೀದಿ ಬದಿ ವ್ಯಾಪಾರಿಗಳು ಊರು ಪ್ರವೇಶಿಸುವ ಮುನ್ನ ಅವರ ಐಡಿ ಪ್ರೂಫ್ ಪರೀಕ್ಷಿಸಲು ಸ್ಥಳೀಯರಿಗೆ ಸೂಚನೆ ಕೊಡಲಾಗಿದೆ.
ಇದನ್ನೂ ವೀಕ್ಷಿಸಿ: ಅವಿಶ್ವಾಸದ ಅಗ್ನಿಪರೀಕ್ಷೆ..ಮೋದಿಗೋ..? ಮಹಾ ಮೈತ್ರಿಗೋ..?