ಮಲಗಿದ್ದಲ್ಲೇ ಮಲಗಿ ರೋಧಿಸುತ್ತಿರುವ ಕಾಡಾನೆ: ಕ್ಯಾಪ್ಟನ್‌ ಕಾಂತಿಗೆ ಆಗಿರೋದೇನು ?

ಅನಾರೋಗ್ಯದಿಂದ ಬಳಲುತ್ತಾ ರೋಧಿಸುತ್ತಿರೋ ಕಾಡಾನೆ
ಬೆಳಗ್ಗೆಯಿಂದ ಒಂದೇ ಜಾಗದಲ್ಲಿ ಮಲಗಿರೋ ಕ್ಯಾಪ್ಟನ್ ಕಾಂತಿ
ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಮಠಸಾಗರ ಬಳಿ ಘಟನೆ 

First Published Jul 1, 2023, 10:52 AM IST | Last Updated Jul 1, 2023, 10:53 AM IST

ಹಾಸನ: ಅನಾರೋಗ್ಯದಿಂದ ಬಳಲುತ್ತಾ ಕಾಡಾನೆಯೊಂದು ರೋಧಿಸುತ್ತಿರುವ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಮಠಸಾಗರ ಬಳಿ ನಡೆದಿದೆ. ಬೆಳಗ್ಗೆಯಿಂದ ಒಂದೇ ಜಾಗದಲ್ಲಿ ಕ್ಯಾಪ್ಟನ್ ಕಾಂತಿ ಮಲಗಿದೆ. ಇದು ಇಪ್ಪತ್ತಕ್ಕೂ ಹೆಚ್ಚು ಕಾಡಾನೆಗಳ ಹಿಂಡಿನಿಂದ ಬೇರ್ಪಟ್ಟು ಒಂಟಿಯಾಗಿದೆ ಎಂದು ತಿಳಿದುಬಂದಿದೆ. ಜ್ವರ ಅಥವಾ ಯಾವುದೋ ಅನಾರೋಗ್ಯದಿಂದ ಕ್ಯಾಪ್ಟನ್‌ ಕಾಂತಿ ಬಳಲುತ್ತಿದೆ ಎಂದು ಹೇಳಲಾಗುತ್ತಿದೆ. ಆನೆ ಇರುವ ಸ್ಥಳಕ್ಕೆ ಹೋಗಲು ಹೆದರಿ ಅರಣ್ಯಾಧಿಕಾರಿಗಳು ದೂರದಲ್ಲೇ ನಿಂತಿದ್ದಾರೆ. ವೈದ್ಯರ ತಂಡ ಬಂದ ಬಳಿಕ ಕಾಡಾನೆಗೆ ಚಿಕಿತ್ಸೆ ಕೊಡಿಸಲಾಗುವುದು. ಸುಮಾರು ಇಪ್ಪತ್ತಕ್ಕೂ ಹೆಚ್ಚು ಕಾಡಾನೆಗಳ ಹಿಂಡಿಗೆ ಈ ಆನೆ ಕ್ಯಾಪ್ಟನ್‌ ಆಗಿತ್ತು. ಹಾಗಾಗಿ ಕಾಡಾನೆಗಳ ಹಿಂಡಿನ ಚಲನವಲನ ಅರಿಯೋದಕ್ಕೆ ಕಾಂತಿಗೆ ರೆಡಿಯೋ ಕಾಲರ್ ಅಳವಡಿಸಲಾಗಿತ್ತು.

ಇದನ್ನೂ ವೀಕ್ಷಿಸಿ:  ಕೈಕೊಟ್ಟ ಮುಂಗಾರು, ಬರಿದಾದ ಕಬಿನಿ ಜಲಾಶಯ: ಮುಳುಗಡೆಯಾದ ದೇವಸ್ಥಾನದ ಕುರುಹು ಪತ್ತೆ