ಕೆಎಸ್ಆರ್‌ಟಿಸಿ ಬಸ್ ಮೇಲೆ ಕಾಡಾನೆ ಅಟ್ಯಾಕ್: ಭಯಾನಕ ವಿಡಿಯೋ..!

ಕೆಎಸ್ಆರ್‌ಟಿಸಿ ಬಸ್ ಮೇಲೆ ಕಾಡಾನೆ ಅಟ್ಯಾಕ್ ಮಾಡಿದ ಘಟನೆ ಕೊಡಗಿನ ದೇವರಪುರದಲ್ಲಿ ನಡೆದಿದೆ.
 

Share this Video
  • FB
  • Linkdin
  • Whatsapp

ಕೊಡಗು: ಬಸ್ ತಡೆದು ಒಂಟಿ ಸಲಗವೊಂದು ಅಟ್ಯಾಕ್‌ ಮಾಡಲು ಮುಂದಾದ ಘಟನೆ ಕೊಡಗಿನ(Kodagu) ದೇವರಪುರದಲ್ಲಿ ನಡೆದಿದೆ. ಕೆಎಸ್ಆರ್‌ಟಿಸಿ ಬಸ್ ಮೇಲೆ ಕಾಡಾನೆ ಅಟ್ಯಾಕ್(Elephant attack) ಮಾಡಿದೆ. ಪೊನ್ನಂಪೇಟೆ ತಾಲೂಕಿನ ದೇವರಪುರದಲ್ಲಿ ಆನೆ ದಾಳಿ ಮಾಡಿದೆ. ತುಂಬಾ ಸಮಯ ರಸ್ತೆಗೆ ಅಡ್ಡ ನಿಂತು ಬಳಿಕ ಬಸ್ ತಡೆಡು ಅಟ್ಯಾಕ್‌ ಮಾಡಿದೆ. ಕಾಡಾನೆ ಬರುತ್ತಿದ್ದಂತೆ ಗಾಬರಿಗೊಂಡ ಬಸ್(BUS) ಚಾಲಕ ತನ್ನ ಸೀಟಿನಿಂದ ಎದ್ದು ಓಡಿದ್ದಾನೆ. ಅಲ್ಲದೇ ಕಾಡಾನೆ ರುದ್ರಾವತಾರ ಕಂಡು ಪ್ರಯಾಣಿಕರು ಭಯಭೀತಗೊಂಡಿದ್ದಾರೆ. ಬಸ್ಸಿನ ಬಳಿಗೆ ಬಂದು ಕೊನೆಗೆ ಪಕ್ಕದಲ್ಲಿ ಸುಮ್ಮನೆ ಕಾಡಾನೆ ಹೋಗಿದೆ. ನಂತರ ಪ್ರಯಾಣಿಕರು ನಿಟ್ಟುಸಿರು ಬಿಟ್ಟಿದ್ದಾರೆ. ಈ ಬಸ್‌ ಗೋಣಿಕೊಪ್ಪದಿಂದ ದೇವರಪುರಕ್ಕೆ ಹೋಗುತ್ತಿತ್ತು.

ಇದನ್ನೂ ವೀಕ್ಷಿಸಿ:  ಈಗ ಕಾಂಗ್ರೆಸ್‌ 68% ಕಮಿಷನ್ ಸರ್ಕಾರ ಆಗಿದೆ: ಮಾಜಿ ಶಾಸಕ ಸುರೇಶ್‌ ಗೌಡ

Related Video