Asianet Suvarna News Asianet Suvarna News

ಎಣ್ಣೆ ಹೊಡೆದು ಡ್ರೈವ್ ಮಾಡೋ ಮುನ್ನ ಹುಷಾರ್..! ಆರ್‌ಟಿಒದಿಂದಲೂ ಇನ್ಮುಂದೆ ಡ್ರಿಂಕ್ ಅಂಡ್ ಡ್ರೈವ್ ಆಪರೇಷನ್‌!

ಸಾರಿಗೆ ಇಲಾಖೆ ಅಧಿಕಾರಿಗಳು ಇನ್ಮೇಲೆ ಡ್ರಿಂಕ್‌ ಅಂಡ್‌ ಡ್ರೈವ್‌ ತಪಾಸಣೆ ನಡೆಸಲಿದ್ದಾರೆ. ಕುಡಿದು ವಾಹನ ಚಾಲನೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿದ್ದಾರೆ.

ಇನ್ಮೇಲೆ ಎಣ್ಣೆ ಹೊಡೆದು ಡ್ರೈವ್‌ ಮಾಡುವ ಮುನ್ನ ಚಾಲಕರೇ ಹುಷಾರ್‌. ಏಕೆಂದರೆ ಇನ್ಮುಂದೆ ಆರ್‌ಟಿಓದಿಂದಲೂ(RTO) ಡ್ರಿಂಕ್‌ ಅಂಡ್‌ ಡ್ರೈವ್‌(Drink and Drive) ಆಪರೇಷನ್‌ ನಡೆಸಲಾಗುವುದು. ಸಾರಿಗೆ ಇಲಾಖೆಯಿಂದಲೇ ಇನ್ಮುಂದೆ ತಪಾಸಣೆ ನಡೆಯಲಿದೆ. ಇಷ್ಟು ದಿನ ಕೇವಲ ಸಂಚಾರಿ ಪೊಲೀಸರು ಮಾತ್ರ ಚೆಕ್ ಮಾಡುತ್ತಿದ್ದರು. ಇನ್ಮೇಲೆ ಸಾರಿಗೆ ಇಲಾಖೆ ಅಧಿಕಾರಿಗಳಿಂದಲೂ ತಪಾಸಣೆ ನಡೆಸಲಾಗುವುದು. ಕುಡಿದು ವಾಹನ ಚಾಲನೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಬೆಂಗಳೂರಿನ(Bengaluru) 10 ಆರ್‌ಟಿಒ ಕಚೇರಿ ವ್ಯಾಪ್ತಿಯಲ್ಲಿ ತಪಾಸಣೆ ನಡೆಸಲಾಗುವುದು. ಬೆಂಗಳೂರಲ್ಲಿ  ಕುಡಿದು ವಾಹನ ಓಡಿಸುವವರ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಕುಡಿದು ವಾಹನ ಓಡಿಸಿ ಅಧಿಕಾರಿಗಳಿಗೆ ಸಿಕ್ಕಿಬಿದ್ರೆ ಬೀಳುತ್ತೆ ಫೈನ್. 

ಇದನ್ನೂ ವೀಕ್ಷಿಸಿ:  ಬೆಳಗಾವಿಯಲ್ಲೊಂದು ಅಮಾನವೀಯ ಘಟನೆ..ಕೈಕೊಟ್ಟ ಬೆಳೆ, ಜೀವನಕ್ಕೆ ಸಾಲದ ಮೊರೆ ಹೋದ ರೈತ ಆತ್ಮಹತ್ಯೆ