ಜೂನ್ 4ರ ನಂತರ ಕಾಂಗ್ರೆಸ್‌ನಲ್ಲಿ ಬದಲಾವಣೆ ಆಗುತ್ತಾ? ಡಿಕೆಶಿಯ ಈ ಮಾತಿನಲ್ಲೂ ಇದೆಯಾ ಸಂದೇಶ..?
ಸ್ವಕ್ಷೇತ್ರದಲ್ಲಿ ಬೆಂಬಲ ಸಿಗದಿದ್ದರೆ ಸಿದ್ದು CM ಕುರ್ಚಿ ಬಿಡಬೇಕಾ?
ಸಚಿವರುಗಳಿಗೆ ಔತಣಕೂಟ ಏರ್ಪಡಿಸಿದ್ದರ ಉದ್ದೇಶವೇನು..?
ರಾಜ್ಯಾಧ್ಯಕ್ಷ ಬದಲಾವಣೆ ಕುರಿತು ಜಾರಕಿಹೊಳಿ ಹೇಳಿದ್ದೇನು..?
ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಾಕ್ಷ, ಉಪಮುಖ್ಯಮಂತ್ರಿಯಾಗಿರುವ ಡಿಕೆ ಶಿವಕುಮಾರ್(DK Shivakumar) ಮೊನ್ನೆ ಆಡಿದ ಆ ಒಂದು ಮಾತು ರಾಜಕೀಯ ವಲಯದಲ್ಲಿ ಹೆಚ್ಚು ಚರ್ಚೆಯಾಗುತ್ತಿದೆ. ಡಿಕೆಶಿ ಹೇಳಿದ ಆ ಒಂದು ಮಾತಿನಿಂದ ಕೆಲವರಲ್ಲಿ ಕುತೂಹಲ ಹೆಚ್ಚಾದ್ರೆ ಇನ್ನು ಕೆಲ ನಾಯಕರಿಗೆ ಟೆನ್ಷನ್ ಹೆಚ್ಚಾಗಿದೆ. ಲೋಕಸಭಾ ಚುನಾವಣೆ(Lok Sabha Elections) ಮುಗಿಯುತ್ತಿದ್ದಂತೆ ರಾಜ್ಯದಲ್ಲಿ ಲೋಕಲ್‌ಬಾಡಿ ಎಲೆಕ್ಷನ್(Local Body Election) ಶುರುವಾಗಲಿದೆ. ಈ ಕುರಿತು ಚರ್ಚಿಸಿಲು ಮೊನ್ನೆ ಕಾಂಗ್ರೆಸ್(Congress) ಪಕ್ಷದ ರಾಜ್ಯಾಧ್ಯಕ್ಷರಾದ ಡಿಕೆ ಶಿವಕುಮಾರ್ ಅವ್ರು ಲೋಕಲ್ ಲೀಡರ್‌ಗಳೊಂದಿಗೆ ಮೀಟಿಂಗ್ ಮಾಡಿದ್ರು. ಈ ಸಂದರ್ಭದಲ್ಲಿ ಲೋಕಲ್ ಲೀಡರ್‌ಗಳನ್ನುದ್ದೇಶಿ ಮಾತ್ನಾಡುತ್ತಿರುವಾಗ ಡಿಕೆಶಿ ಈ ಮಾತನ್ನು ಹೇಳಿದ್ರು. ನಾನು ಅಧ್ಯಕ್ಷನಾಗಿ ನಾಲ್ಕು ವರ್ಷಗಳಾಯ್ತು. ಇನ್ನೆಷ್ಟು ದಿನ ಇರ್ತೇನೆ ಅನ್ನೋದು ಮುಖ್ಯವಲ್ಲವೆಂದು ಡಿಕೆಶಿ ಮಾತ್ನಾಡಿದ್ದಾರೆ. ಈ ನಾಲ್ಕು ವರ್ಷಗಳಲ್ಲಿ ನನ್ನ ಅಧ್ಯಕ್ಷತೆಯಲ್ಲಿ ಪಕ್ಷ ಅಧಿಕಾರಕ್ಕೆ ಬಂದಿದೆ ಅನ್ನೋದನ್ನು ಡಿಕೆಶಿ ಹೇಳಿದ್ದಾರೆ. ಕಾಂಗ್ರೆಸ್ ಸರ್ಕಾರ ಮೊನ್ನೆ ತಾನೇ ಒಂದು ವರ್ಷ ಪೂರೈಸಿದೆ. ಕಳೆದ ವರ್ಷ ಮೇ 20 ರಂದು ಸಿದ್ದರಾಮಯ್ಯನವರು ಸಿಎಂ ಆಗಿ ಪ್ರಮಾಣ ವಚನ ತೆದುಕೊಂಡ್ರೆ ಡಿಸಿಎಂ ಆಗಿ ಡಿಕೆ ಶಿವಕುಮಾರ್ ಪ್ರಮಾಣ ವಚನ ತೆಗೆದುಕೊಂಡಿದ್ರು.
ಇದನ್ನೂ ವೀಕ್ಷಿಸಿ: ಪಶ್ಚಿಮ ಬಂಗಾಳ ಒಬಿಸಿ ಮೀಸಲು ರದ್ದು! ಹೈಕೋರ್ಟ್ ತೀರ್ಪು ಒಪ್ಪಲ್ಲ..ಇದು ಬಿಜೆಪಿ ಪಿತೂರಿ ಎಂದ ದೀದಿ