Asianet Suvarna News Asianet Suvarna News

ಪಶ್ಚಿಮ ಬಂಗಾಳ ಒಬಿಸಿ ಮೀಸಲು ರದ್ದು! ಹೈಕೋರ್ಟ್ ತೀರ್ಪು ಒಪ್ಪಲ್ಲ..ಇದು ಬಿಜೆಪಿ ಪಿತೂರಿ ಎಂದ ದೀದಿ

ಕೋಲ್ಕತ್ತಾ ಹೈಕೋರ್ಟ್ ಆದೇಶದ ಬೆನ್ನಲ್ಲೇ ರಾಜಕೀಯ ಫೈಟ್
ಕೋಲ್ಕತ್ತಾ ಹೈಕೋರ್ಟ್ ಆದೇಶಕ್ಕೆ ಸಿಎಂ ಮಮತಾ ಆಕ್ರೋಶ..!
‘ಹೈಕೋರ್ಟ್ ಆದೇಶ ಒಪ್ಪಲ್ಲ.. ಬಿಜೆಪಿ ಪಿತೂರಿ’- ಮಮತಾ
 

ಒಬಿಸಿ ಮೀಸಲಾತಿಯನ್ನು ರದ್ದು ಮಾಡಿ ಪಶ್ಚಿಮ ಬಂಗಾಳ(West Bengal) ಹೈಕೋರ್ಟ್‌(Calcutta High Court) ಆದೇಶ ನೀಡಿದೆ. ಹೀಗಾಗಿ ಪಶ್ಚಿಮ ಬಂಗಾಳದ 77 ಜಾತಿಗಳ ಒಬಿಸಿ ಮೀಸಲಾತಿ(OBC certificates) ರದ್ದಾಗಿದೆ. ಲೋಕಸಭಾ ಚುನಾವಣೆ ಹೊತ್ತಲ್ಲಿ TMCಗೆ ಇದು ದೊಡ್ಡ ಹೊಡೆತ ನೀಡಿದೆ. ಬಂಗಾಳದಲ್ಲಿ ಈಗ 5 ಲಕ್ಷ OBC ಪ್ರಮಾಣ ಪತ್ರ ಅಸಿಂಧುಗೊಂಡತಾಗಿದೆ. ಮುಸ್ಲಿಮರೂ ಸೇರಿ 77 ಜಾತಿಗೆ ನೀಡಿದ್ದ ಒಬಿಸಿ ಸ್ಥಾನ ರದ್ದು ಮಾಡಲಾಗಿದೆ. 2012ರಲ್ಲಿ ಮಮತಾ(Mamata Banerjee) ಸರ್ಕಾರ ತಂದಿದ್ದ ಮೀಸಲಾತಿಗೆ ಹೈಕೋರ್ಟ್‌ ಕೊಕ್ ನೀಡಿದೆ. ರಾಜ್ಯದಲ್ಲಿ ಒಬಿಸಿ ಮೀಸಲಾತಿ ಮುಂದುವರಿಯುತ್ತದೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಹೈಕೋರ್ಟ್ ಆದೇಶವನ್ನು ಸ್ವಾಗತಿಸುತ್ತೇವೆ ಎಂದು ಮೋದಿ, ಅಮಿತ್ ಶಾ ಹೇಳಿದ್ದಾರೆ.

ಇದನ್ನೂ ವೀಕ್ಷಿಸಿ:  ಮಕ್ಕಳ ಕ್ರಿಕೆಟ್ ಆಟ..2 ಸಮುದಾಯಗಳ ಕಾದಾಟ! 8 ಜನರಿಗೆ ಗಾಯ, ನಡು ರಸ್ತೆಯಲ್ಲೇ ತಲ್ವಾರ್ ಪ್ರದರ್ಶನ!