Prajwal Revanna: ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ: ಮಹಾನಾಯಕನ ಕೈವಾಡ ಇದೆ ಎಂದ ಹೆಚ್‌ಡಿಕೆ

ಪೆನ್‌ಡ್ರೈವ್ ಬಿಡುಗಡೆ ಹಿಂದೆ ಮಹಾನಾಯಕನ ಕೈವಾಡ ಇದೆ, 2012ರ ಪ್ರಕರಣಕ್ಕೆ ಜೀವ ಕೊಟ್ಟವರು ಆ ಮಹಾನಾಯಕ, ನಮ್ಮ ಬಳಿಯೂ ಕೆಲ ವಿಡಿಯೋ ಇವೆ,  ಎಲ್ಲ ಆಯಾಮಗಳಲ್ಲಿ ತನಿಖೆಯಾಗಬೇಕು ಎಂದು ಮಾಜಿ ಸಿಎಂ ಹೆಚ್‌ ಡಿ ಕುಮಾರಸ್ವಾಮಿ ಹೇಳಿದ್ದಾರೆ. 

First Published Apr 30, 2024, 5:56 PM IST | Last Updated Apr 30, 2024, 5:57 PM IST

ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ (Prajwal Revanna obscene video) ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸಿಎಂ ಡಿ ಕೆ ಶಿವಕುಮಾರ್‌(DK Shivakumar) ವಿರುದ್ಧ ಹೆಚ್‌ ಡಿ ಕುಮಾರಸ್ವಾಮಿ(HD Kumaraswamy) ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಪೆನ್‌ಡ್ರೈವ್ (Pen drive) ಬಿಡುಗಡೆ ಹಿಂದೆ ಮಹಾನಾಯಕನ ಕೈವಾಡ ಇದೆ, 2012ರ ಪ್ರಕರಣಕ್ಕೆ ಜೀವ ಕೊಟ್ಟವರು ಆ ಮಹಾನಾಯಕ,  ನಮ್ಮ ಬಳಿಯೂ ಕೆಲ ವೀಡಿಯೋ ಇವೆ ಎಂದ ಅವರು ಎಲ್ಲ ಆಯಾಮಗಳಲ್ಲಿ ತನಿಖೆಯಾಗಬೇಕು ಎಂದು ಆಗ್ರಹ ಮಾಡಿದ್ದಾರೆ. ಅಲ್ಲದೇ ನಾವು ಯಾರನ್ನೂ ರಕ್ಷಿಸುವುದಿಲ್ಲ, ಕ್ಷಮಿಸುವ ಪ್ರಶ್ನೆಯೇ ಇಲ್ಲ, ತಪ್ಪು ಮಾಡಿದವರಿಗೆ ಶಿಕ್ಷೆಯಾಗಲೇಬೇಕು, ಉಪ್ಪು ತಿಂದವರು ನೀರು ಕುಡಿಯಲೇಬೇಕು, ಸರ್ಕಾರ ತನಿಖೆ ಮಾಡಲಿ, ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ ಎಂದು ಹುಬ್ಬಳ್ಳಿಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ.

ಇದನ್ನೂ ವೀಕ್ಷಿಸಿ: Prajwal revanna sex scandal: "ಹಾಸನ ಫೈಲ್ಸ್" ಬಗ್ಗೆ ರಾಜ್ಯ ಬಿಜೆಪಿ ನಾಯಕರಿಗೆ ಮೊದಲೇ ಗೊತ್ತಿತ್ತಾ?

Video Top Stories