Asianet Suvarna News Asianet Suvarna News

Prajwal revanna sex scandal: "ಹಾಸನ ಫೈಲ್ಸ್" ಬಗ್ಗೆ ರಾಜ್ಯ ಬಿಜೆಪಿ ನಾಯಕರಿಗೆ ಮೊದಲೇ ಗೊತ್ತಿತ್ತಾ?

ಪ್ರಜ್ವಲ್ ಪ್ರಕರಣದಲ್ಲಿ ಪ್ರಧಾನಿ ಮೋದಿ, ಅಮಿತ್ ಶಾಗೆ ಪ್ರಿಯಾಂಕಾ ಪ್ರಶ್ನೆ..!
ಅಣ್ಣನ ಮಗನನ್ನು ಪಕ್ಷದಿಂದಲೇ ಉಚ್ಛಾಟಿಸ್ತಾರಾ ದಳಪತಿ ಕುಮಾರಸ್ವಾಮಿ..? 
ರಾಷ್ಟ್ರಾದ್ಯಂತ ಸದ್ದು ಮಾಡ್ತಿದೆ ಗೌಡರ ಮೊಮ್ಮಗನ "ಘನಂಧಾರಿ" ಕೆಲಸ..! 

ಆ ಮನೆ ರಾಜ್ಯ ರಾಜಕಾರಣದ ದೊಡ್ಮನೆ ಅಂತಾನೇ ಫೇಮಸ್. ಆ ಮನೆಯಲ್ಲಿರೋದು ಅಂತಿಂಥವರಲ್ಲ. ಒಬ್ರು ಮಾಜಿ ಪ್ರಧಾನಿ, ಮತ್ತೊಬ್ರು ಮಾಜಿ ಮುಖ್ಯಮಂತ್ರಿ, ಮಗದೊದ್ರು ಆರು ಬಾರಿ ಶಾಸಕರಾಗಿ ನಾಲ್ಕು ಬಾರಿ ಮಂತ್ರಿಯಾದವರು. ಅಜ್ಜನಿಂದ ಹಿಡಿದು ಮೊಮ್ಮಕ್ಕಳವರೆಗೆ ಆ ಕುಟುಂಬದಲ್ಲಿ ಎಲ್ಲರೂ ರಾಜಕಾರಣಿಗಳೇ. ಅಂಥಾ ಕುಟುಂಬದಲ್ಲಿ ಈಗ ಎದ್ದಿರೋದು ಸಾಮಾನ್ಯ ಬಿರುಗಾಳಿಯಲ್ಲ. ಇದು ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿರೋ ಕಾಮಕಾಂಡ, ಕರ್ಮಕಾಂಡದ ಬಿರುಗಾಳಿ. ಮಾಜಿ ಪ್ರಧಾನಿ ದೇವೇಗೌಡರ ಮೊಮ್ಮಗ, ಮಾಜಿ ಸಚಿವ ಎಚ್.ಡಿ. ರೇವಣ್ಣನವರ(HD Revanna) ಮಗ, ಹಾಸನದ(Hassan) ಜೆಡಿಎಸ್(JDS) ಸಂಸದ ಪ್ರಜ್ವಲ್ ರೇವಣ್ಣ(Prajwal revanna)  ಅವರದ್ದು ಎನ್ನಲಾಗಿರೋ ಅಶ್ಲೀಲ ವೀಡಿಯೊಗಳು(Obscene Video) ರಾಜ್ಯದ ತುಂಬೆಲ್ಲಾ ಓಡಾಡ್ತಿವೆ. ಹಲವಾರು ಮಹಿಳೆಯರನ್ನು(Prajwal revanna sex scandal) ಲೈಂಗಿಕವಾಗಿ ಬಳಸಿಕೊಂಡು, ಅದನ್ನು ವೀಡಿಯೊ ಚಿತ್ರೀಕರಣ ಮಾಡಿರೋ ಆರೋಪ ಪ್ರಜ್ವಲ್ ರೇವಣ್ಣ ವಿರುದ್ಧ ಕೇಳಿ ಬಂದಿದೆ. ಈ ಬಗ್ಗೆ ಹಾಸನ ಸಂಸದರ ವಿರುದ್ಧ ಎಫ್ಐಆರ್ ಕೂಡ ದಾಖಲಾಗಿತ್ತು, ಪ್ರಕರಣದ ತನಿಖೆಗೆ ಅಂತ ರಾಜ್ಯ ಸರ್ಕಾರ ಎಸ್ಐಟಿ ರಚನೆ ಮಾಡಿದೆ. 

ಇದನ್ನೂ ವೀಕ್ಷಿಸಿ:  ವಿಡಿಯೋ ವೈರಲ್ ಆಗ್ತಿದ್ದಂತೆ ಪ್ರಜ್ವಲ್ ಎಸ್ಕೇಪ್? ಬಂಧನ ತಪ್ಪಿಸಿಕೊಳ್ಳಲು ಜರ್ಮನಿಗೆ ಎಸ್ಕೇಪ್ ?

Video Top Stories