ಕಾವೇರಿ ಸಂಘರ್ಷಕ್ಕೆ ಇಂದು ನಿರ್ಣಾಯಕ ದಿನ: ಕಾವೇರಿ ನಿಯಂತ್ರಣಾ ಸಮಿತಿಯಿಂದ ಹೈವೋಲ್ಟೇಜ್ ಸಭೆ

ಕಾವೇರಿ ಬೇಕೇ ಬೇಕು ಎಂದು ಸುಪ್ರೀಂ ಮೆಟ್ಟಿಲೇರಿದ್ದ ತಮಿಳುನಾಡಿಗೆ, ಕಾವೇರಿ ಪ್ರಾಧಿಕಾರದ ಮೊರೆ ಹೋಗುವಂತೆ ಸುಪ್ರೀಂ ಕೋರ್ಟ್ ಸೂಚಿಸಿತ್ತು. ಈ ಹಿನ್ನೆಲೆ ನಾಳೆ ಕಾವೇರಿ ನಿಯಂತ್ರಣ ಸಮಿತಿಯ ಮಹತ್ವದ ಸಭೆ ನಡೆಯಲಿದ್ದು, ತಮಿಳುನಾಡಿಗೆ ನೀರು ಹರಿಸಬೇಕಾ, ಬೇಡವಾ ಎಂದು ನಾಳೆ ನಿರ್ಧಾರವಾಗಲಿದೆ.
 

First Published Aug 28, 2023, 10:28 AM IST | Last Updated Aug 28, 2023, 10:28 AM IST

ಕರ್ನಾಟಕ-ತಮಿಳುನಾಡಿನ ನೀರಿನ ಸಂಘರ್ಷ ಸುಪ್ರೀಂಕೋರ್ಟ್(Supreme Court) ಮೆಟ್ಟಿಲೇರಿದೆ. ಕಾವೇರಿ ಪ್ರಾಧಿಕಾರದ ಆದೇಶವನ್ನು ಕರ್ನಾಟಕ ಪಾಲಿಸುತ್ತಿಲ್ಲ ನೀವೇ ನೀರು ಬಿಡುಗಡೆ ಬಗ್ಗೆ ಆದೇಶಿಸಿ ಎಂದು ತಮಿಳುನಾಡು(Tamilnadu) ಸುಪ್ರೀಂಕೋರ್ಟ್ ಮೊರೆ ಹೋಗಿತ್ತು. ಆದ್ರೆ, ನೀರು ಬಿಡುಗಡೆಗೆ ಆದೇಶಿಸಲು  ಸಾಧ್ಯವಿಲ್ಲ ಎಂದು ತಮಿಳುನಾಡಿಗೆ ಸ್ಪಷ್ಟ ಸಂದೇಶ ರವಾನಿಸಿದ ಕೋರ್ಟ್ ಕಾವೇರಿ ನಿರ್ವಹಣಾ ಪ್ರಾಧಿಕಾರಕ್ಕೆ ಹೋಗುವಂತೆ ಪರೋಕ್ಷ ಸೂಚನೆ ನೀಡಿತ್ತು. ಜೊತೆ ಜೊತೆಗೆ ಸಭೆ ನಡೆಸಿ ಶುಕ್ರವಾರದ ಒಳಗೆ ವರದಿ ನೀಡುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಸುಪ್ರೀಂಕೋಟ್ ಸೂಚನೆ ನೀಡಿತ್ತು. ಇದರ ಬೆನ್ನಲ್ಲೇ ಇಂದು ಕಾವೇರಿ ನೀರು ನಿಯಂತ್ರಣಾ ಸಮಿತಿ ಸಭೆ  ನಡೆಯಲಿದೆ. ನ್ಯಾ ಬಿ.ಆರ್. ಗವಾಯಿ ನೇತೃತ್ವದ ಸುಪ್ರೀಂ ತ್ರಿಸದಸ್ಯ ಪೀಠ, ನೀರು ಹಂಚಿಕೆಯಲ್ಲಿ ವ್ಯತ್ಯಾಸವಾಗಿದೆಯೇ, ಇಲ್ಲವೇ ಎಂಬುದನ್ನು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಪರಿಶೀಲಿಸಿ ವರದಿ ನೀಡಲು ಸೂಚಿಸಿದೆ. ಅದರಂತೆ ಇಂದು ನಡೆಯುತ್ತಿರುವ ಸಭೆ ಎರಡೂ ರಾಜ್ಯಗಳ ಟೆನ್ಷನ್ ಹೆಚ್ಚಿಸಿದೆ.

ಇದನ್ನೂ ವೀಕ್ಷಿಸಿ:  ಆ ಪ್ರಶಸ್ತಿಗಾಗಿ ಗುರಿ ಇಟ್ಟ ಕೆಜಿಎಫ್ 'ಕಿರಾತಕ': ಯಶ್19 ಸಿನಿಮಾ ಲೇಟ್ ಆಗೋಕೆ ಇದೇ ಕಾರಣನಾ ?