Asianet Suvarna News Asianet Suvarna News

Kolar-Chikkaballapur DCC Bank : ತಾರಕಕ್ಕೇರಿದ ಡಿಸಿಸಿ ಬ್ಯಾಂಕ್ 'ಚುಕ್ಕಾಣಿ' ಸಮರ

Nov 29, 2021, 11:21 AM IST
  • facebook-logo
  • twitter-logo
  • whatsapp-logo

ಕೋಲಾರ (ನ.29):   ಕೋಲಾರ (Kolar)  ಹಾಗು ಚಿಕ್ಕಬಳ್ಳಾಪುರ (Chikkaballapura)  ಡಿಸಿಸಿ ಬ್ಯಾಂಕ್ (DCC Bank)  ರಾಜಕೀಯದ (politics) ಹಾಟ್‌ಸ್ಪಾಟ್‌ ಆಗಿದೆ. ಮೇಲುಗೈ ಸಾಧಿಸಲು ಎರಡು ಜಿಲ್ಲೆಗಳ ಪ್ರಭಾವಿ ನಾಯಕರ ಸಮರ ಮಿತಿ ಮೀರಿದೆ. ಬ್ಯಾಂಕ್ ಅಧ್ಯಕ್ಷರ ಬೆನ್ನಿಗೆ ಕೆಜಿಎಫ್ ಶಾಸಕಿ (KGF MLA) ರೂಪಾ ಶಶಿಧರ್ ನಿಂತಿದ್ದು. ನಾಯಕರ  ಕೆಸರೆರಚಾಟ ನಡೆಯುತ್ತಿದೆ. ಹಾದಿ ಬೀದಿಯಲ್ಲಿ ಆರೋಪ ಪ್ರತ್ಯಾರೋಪ ಜೋರಾಗಿದೆ.  ಬಿಜೆಪಿ (BJP) ಹಾಗು ಕಾಂಗ್ರೆಸ್ (Congress) ಪಕ್ಷದ ನಾಯಕರು  ಡಿಸಿಸಿ ಬ್ಯಾಂಕನ್ನು (DCC Bank) ತಮ್ಮ ಪ್ರತಿಷ್ಠೆಗೆ ಬಳಸಿಕೊಳ್ಳುತ್ತಿದ್ದಾರೆ. 

Kolar : ಮಾಜಿ ಸ್ಪೀಕರ್‌ ಕೈ ಮುಖಂಡ ರಮೇಶ್‌ ಕುಮಾರ್‌ ಬೇಸರ

ಡಿಸಿಸಿ ಬ್ಯಾಂಕಲ್ಲಿ ಭಾರಿ ಹಗರಣ ನಡೆದಿದೆ.  ಭಾರಿ ಭ್ರಷ್ಟಾಚಾರದ ಬಗ್ಗೆ ತನಿಖೆ ಮಾಡಿಸುತ್ತೇನೆ. ಅದರಲ್ಲಿ ಕೆಲವರು ಜೈಲಿಗೆ ಹೋಗುತ್ತಾರೆ ಎಂದು ಮಾಜಿ ಸ್ಪೀಕರ್ ರಮೇಶ್  ಕುಮಾರ್, ಅಧ್ಯಕ್ಷ   ಗೋವಿಂದ ಗೌಡ ವಿರುದ್ಧ  ಸಚಿವ ಸುಧಾಕರ್ ಹೇಳಿದ್ದಾರೆ. ಇದಕ್ಕೆ  ವಿರುದ್ಧವಾಗಿ ನಿಂತ ರಮೇಶ್ ಕುಮಾರ್ ಸಹ ಹಗರಣ ಆಗಿದ್ದಲ್ಲಿ ತನಿಖೆ ನಡೆಸಲಿ ಎಂದು  ಹೇಳಿದ್ದಾರೆ. 
 

Video Top Stories