Asianet Suvarna News Asianet Suvarna News

ಕೇಸ್‌ನಲ್ಲಿ ಹೆಸರು ಬರದಂತೆ ದರ್ಶನ್‌ ಲಕ್ಷ ಲಕ್ಷ ಡೀಲ್ ‌? 30 ಲಕ್ಷ ನೀಡಿರೋದನ್ನು ಒಪ್ಪಿಕೊಂಡ ನಟ!

ನಟ ದರ್ಶನ್‌ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ತಮ್ಮ ಹೆಸರು ಕೇಳಿ ಬರದಂತೆ ಮಾಡಲು ಹಣದ ಡೀಲ್‌ ಮಾಡಿರುವ ವಿಷಯವನ್ನು ಪೊಲೀಸ್‌ ತನಿಖೆಯಲ್ಲಿ ಬಾಯ್ಬಿಟ್ಟಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ(Renukaswamy murder case) ನಟ ದರ್ಶನ್‌ (Actor Darshan) ಹೆಸರು ಕೇಳಿ ಬರದಂತೆ ಲಕ್ಷ ಲಕ್ಷ ಹಣದ ಡೀಲ್‌ ನಡೆದಿದೆ ಎಂಬ ವಿಷಯ ಇದೀಗ ಬಹಿರಂಗಗೊಂಡಿದೆ. ಪೊಲೀಸ್ ವಿಚಾರಣೆಯಲ್ಲಿ ನಟ ದರ್ಶನ್ ಈ ಬಗ್ಗೆ ಸ್ವ- ಇಚ್ಚಾ ಹೇಳಿಕೆ ನೀಡಿದ್ದಾರೆ. ರೇಣುಕಾಸ್ವಾಮಿ ಕೊಲೆ ಬಳಿಕ ನಟ  ದರ್ಶನ್ ಮಾಸ್ಟರ್ ಪ್ಲ್ಯಾನ್ ಮಾಡಿದ್ದು, ಪ್ರಕರಣದಲ್ಲಿ ತನ್ನ ಹೆಸರು ಬರದಂತೆ ಯೋಜನೆ ರೂಪಿಸಿದ್ದರು ಎಂದು ತಿಳಿದುಬಂದಿದೆ. ಪೊಲೀಸ್ , ಲಾಯರ್, ಶವ ಸಾಗಿಸುವವರಿಗೆ ಹಣ ನೀಡಿರುವುದಾಗಿ(Money deal) ದರ್ಶನ್‌ ಒಪ್ಪಿಕೊಂಡಿದ್ದಾರಂತೆ. ಪ್ರದೂಶ್‌ಗೆ 30 ಲಕ್ಷ ಹಣ ನೀಡಿರೋದಾಗಿ ದರ್ಶನ್ ಸ್ವ ಇಚ್ಚೆ ಹೇಳಿಕೆ ನೀಡಿದ್ದಾರಂತೆ.

ಇದನ್ನೂ ವೀಕ್ಷಿಸಿ:  ಮಂತ್ರಿ ಒತ್ತಡಕ್ಕೆ ಮಣಿದ್ರಾ ಸಿದ್ದರಾಮಯ್ಯ? ದರ್ಶನ್ ಬಚಾವೋ ಆಂದೋಲನಕ್ಕೆ ಕೈಹಾಕಿದ್ದೇಕೆ ನಾಯಕರು?