Asianet Suvarna News Asianet Suvarna News

ದರ್ಶನ್ ಕ್ರೈಂ ಡೈರಿಯಲ್ಲಿರೋದು ರೇಣುಕಾಸ್ವಾಮಿ ಮಾತ್ರವಲ್ಲ..ನಟನ ಹಿಟ್‌ ಲಿಸ್ಟ್‌ನಲ್ಲಿ ಇರೋರು ಯಾರ‍್ಯಾರು ಗೊತ್ತಾ..?

ದರ್ಶನ್ ವಿರುದ್ಧ ಇರುವ ಕೇಸ್,ವಿವಾದಗಳು ಯಾವು?
‘ಸ್ವಲ್ಪ ತಡವಾಗಿದ್ರೂ ಕೇಸ್ ದಾರಿ ತಪ್ಪಿ ಹೋಗ್ತಿತ್ತು’
ಬಗೆದಷ್ಟು ಬಯಲಾಗ್ತಿದೆ ದರ್ಶನ್ ಗ್ಯಾಂಗ್ ಕ್ರೌರ್ಯ  

ಅಮಾಯಕ ರೇಣುಕಾಸ್ವಾಮಿಯನ್ನ(Renukaswamy murder Case) ಅಮಾನುಷವಾಗಿ ಕೊಂದ ದರ್ಶನ್ (Darshan) ಮತ್ತು ಪಟಾಲಂಗೆ ಪೊಲೀಸರು(Police) ಕ್ಲಾಸ್ ತೆಗೆದುಕೊಳ್ತಿದ್ದಾರೆ. ಇವರುಗಳನ್ನ ಪರ್ಮನೆಂಟ್ ಆಗಿ ಕಂಬಿ ಹಿಂದೆ ಕಳಿಸಲು ಎಲ್ಲಾ ಸಾಕ್ಷ್ಯಗಳನ್ನ ಕಲೆ ಹಾಕುತ್ತಿದ್ದಾರೆ. ಆದ್ರೆ ಯಾವಾಗ ಈ ಕೇಸ್‌ನಲ್ಲಿ ದರ್ಶನ್ ಕೈವಾಡವಿದೆ ಅನ್ನೋದು ಬಹಿರಂಗವಾಯ್ತು. ಅಂದಿನಿಂದಲೇ ಈ ಕಿಲ್ಲಿಂಗ್ ಸ್ಟಾರ್ ಮಾಡಿರುವ ಒಂದೊಂದು ಕ್ರೈಂ ಕಥೆಗಳು ಹೊರಬರುತ್ತಿವೆ. ಆತ ಅಮಾಯಕರ ಮೇಲೆ ನಡೆಸಿದ ದೌರ್ಜನ್ಯಗಳು ಮತ್ತು ಕೇಸ್‌ಗಳು ಈಗ ಮುನ್ನೆಲೆಗೆಗೆ ಬಂದಿವೆ. ರೇಣುಕಾಸ್ವಾಮಿ ರೀತಿ ಟಾರ್ಚರ್ ಈ ಹಿಂದೆ ಹಲವರಿಗೆ ಕೊಟ್ಟಿದ್ದಾರೆ ಅನ್ನೋ ಅನುಮಾನ ದರ್ಶನ್‌ ಮೇಲೆ ಮೂಡದೇ ಇರದು. ಇವೆಲ್ಲಾ ದರ್ಶನ್ ವಿರುದ್ಧ ದಾಖಲಾಗಿರೋ ಕೇಸ್‌ಗಳಾದ್ರೆ, ಮಾಡಿಕೊಂಡಿರೋ ವಿವಾದಗಳ ಪಟ್ಟಿ ಬಹಳ ದೊಡ್ಡದಿದೆ. 13 ವರ್ಷಗಳ ಹಿಂದೆಯೇ ಹೆಂಡತಿಗೆ ಹೊಡೆದು ಜೈಲಿಗೆ ಹೋಗಿದ್ದ ದರ್ಶನ್ ವಾಪಸ್ ಆದ್ಮೇಲೆ ನಾನು ಬದಲಾಗ್ತೀನಿ ಅಂತ ಹೇಳಿದ್ರು. ಆದ್ರೆ ಅದು ಕೇವಲ ಬಾಯಿ ಮಾತಾಗಿ ಉಳಿದುಬಿಡ್ತು. ಸಾಲು ಸಾಲು ವಿವಾದಗಳು. ಆಗಿಂದಾಗೆ ಬೀಳುವ ಕೇಸ್‌ಗಳು. ಇವೆಲ್ಲವನ್ನ ನೋಡ್ತಿದ್ರೆ ದರ್ಶನ್ ಒಬ್ಬ ಚಾಳಿ ಬಿದ್ದ ಆರೋಪಿ ಅನ್ನೋದು ಖಾತ್ರಿಯಾಗ್ತಿದೆ.

ಇದನ್ನೂ ವೀಕ್ಷಿಸಿ:  ಕೊಲೆ ನಡೆದ ದಿನ ದರ್ಶನ್ ಹಾಕಿದ್ದ ಶೂ ಸೀಜ್ : ವಿಜಯಲಕ್ಷ್ಮಿ ಮನೆಯಲ್ಲಿವೆ ಎಂದಿದ್ದ ಕಾಸ್ಟ್ಯೂಮ್ ಡಿಸೈನರ್!

Video Top Stories