ಈಗ ಹೇಗಿದೆಯಂತೆ ದರ್ಶನ್ ಆರೋಗ್ಯ..? ಕೋರ್ಟ್ ಅಂಗಳದಲ್ಲಿ ಹೇಗಿತ್ತು ವಾದ-ಪ್ರತಿವಾದ..?

ಲ್ಯಾಂಬೋರ್ಗಿನಿ ಒಡೆಯನಿಗೆ ಮನೆಯೂಟ ಬೇಕಂತೆ!
ಜೈಲೂಟ ಹೇಗಿರುತ್ತೆ..? ಜೈಲೂಟದ ಮೆನು ಏನು..? 
ಮನೆಯೂಟದ ನಿರೀಕ್ಷೆಯಲ್ಲಿದ್ದ ನಟ ದರ್ಶನ್‌ ಶಾಕ್!

First Published Jul 23, 2024, 2:07 PM IST | Last Updated Jul 23, 2024, 2:07 PM IST

ಆತ ಲಕ್ಷಗಟ್ಟಲೇ ಅಭಿಮಾನಿಗಳಿಗೆ ಸೆಲೆಬ್ರಿಟಿ. ಲ್ಯಾಂಬೋರ್ಗಿನಿ ಅನ್ನೋ ಐಶಾರಾಮಿ ಕಾರಿನ ಒಡೆಯ ಬೇರೆ. ಆದ್ರೆ ಇವತ್ತು ಮನೆಯೂಟಕ್ಕೂ ಪರದಾಡೋ ಪರಿಸ್ಥಿತಿ ಬಂದಿದೆ. ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ(Renukaswamy murder case) ಆರೋಪ ಹೊತ್ತು ಅಂದರ್ ಆಗಿರೋ ಡೆವಿಲ್ ಹೀರೋ ಜೈಲೂಟ ಬೇಡವೇ ಬೇಡ ಅಂತ ಪಟ್ಟು ಹಿಡಿದಿದ್ದಾನೆ. ರೇಣುಕಾಸ್ವಾಮಿ ಅನ್ನೋನ ಕೊಲೆ ಕೇಸ್‌ನಲ್ಲಿ, ನಟ ದರ್ಶನ್ (Darshan) ಪರಪ್ಪನ ಅಗ್ರಹಾರದ ಸೆಂಟ್ರಲ್ ಜೈಲು(Parappana Agrahara jail) ಸೇರಿ ಬರೋಬ್ಬರಿ ಒಂದು ತಿಂಗಳೇ ಕಳೆದು ಹೋಯ್ತು. ಇಷ್ಟೂ ದಿನ ಆತನ ಸಿನಿಮಾ ರಿಲೀಸ್‌ಗೋಸ್ಕರ ಕಾಯ್ತಾ ಇದ್ದ ಅವನ ಫ್ಯಾನ್ಸ್‌, ಈಗ ತಮ್ಮ ಡೆವಿಲ್ ಹೀರೋ ಯಾವಾಗ ಆಚೆ ಬರ್ತಾನೋ ಅಂತ ಕಾಯ್ತಾ ಇದಾರೆ. ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಒಂದು ಸುದ್ದಿ ಬಂತು. ನಟ ದರ್ಶನ್ ಆರೋಗ್ಯದಲ್ಲಿ ವ್ಯತ್ಯಾಸವಾಗಿದೆ, ತೂಕ ಭಾರೀ ಪ್ರಮಾಣದಲ್ಲಿ ಇಳಿದಿದೆ. ಊಟ ಸರಿಯಾಗಿ ಸೇರ್ತಾ ಇಲ್ವಂತೆ.  ಜೈಲೂಟ ಬೇಡ್ವಂತೆ ಅಂತ. ದರ್ಶನ್ ನೋಡಿದವರೂ ಕೂಡ, ಆತ ತೂಕ ಇಳಿದಿದ್ದಾರೆ ಅಂತ ಹೇಳ್ತಾ ಇದ್ರು. ಅದಕ್ಕೆ ಕಾರಣ, ಜೈಲೂಟ ಸೇರ್ತಾ ಇಲ್ಲ ಅನ್ನೋದೇ ಮೇಜರ್ ಆಗಿತ್ತು. ಆ ಸುದ್ದಿ ಹೊರಬಂದ ಬೆನ್ನಲ್ಲೇ ದರ್ಶನ್ ಪರನಿಂತಿದ್ದವರು ಕೋರ್ಟ್ ಕದ ತಟ್ಟಿದ್ರು.

ಇದನ್ನೂ ವೀಕ್ಷಿಸಿ:  ರೇಣುಕಾಸ್ವಾಮಿ ಕೊಲ್ಲೋದಕ್ಕೂ ಮೊದಲು ವಿಡಿಯೋ..? ಕೊಲೆ ಕೇಸ್‌ನ ಮತ್ತೊಂದು ರಹಸ್ಯ ಬಯಲು!

Video Top Stories